ಹೊಂಬುಜ : ಜೀವನದಲ್ಲಿ ಕಷ್ಟ-ನಷ್ಟ-ದುಃಖ ಹಾಸುಕೊಕ್ಕಾಗಿ ಬಂದರೂ ಧರ್ಮಪ್ರಜ್ಞೆಯಿಂದ ಕರ್ತವ್ಯ ನಿರ್ವಹಣೆ, ಸಾಧನೆಯ ಗುರಿ ತಲುಪಲು ಸಾಧ್ಯವಿದೆ. ದೀಪಾವಳಿಯ ಸಂದೇಶದಂತೆ ಕಾರ್ತಿಕ ಮಾಸದಲ್ಲಿ ನೆರವೇರುವ ದೀಪೋತ್ಸವವು “ದೀಪಾರಾಧನೆ” ಆಗಿದೆ ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಜೈನ ಶ್ರೀಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಶ್ರೀ ಪಾರ್ಶ್ವನಾಥ ತೀರ್ಥಂಕರ, ಮಹಾಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಜರುಗಿದ ಪರಂಪರಾನುಗತ ದೀಪೋತ್ಸವದಂದು ತಿಳಿಸಿದರು. ಸರ್ವರ ಬಾಳಿನಲ್ಲಿ ನಿರಂತರ ಬೆಳಕು ಧರ್ಮಾನುರಾಗಿಯಾಗಿ ಜೀವನದಲ್ಲಿ ಯಶಸ್ಸು ಕಾಣುವಂತಾಗಲಿ ಎಂದು ಪ್ರವಚನದಲ್ಲಿ ತಿಳಿಸಿದರು.

ಊರ-ಪರವೂರ ಭಕ್ತರು, ಹುಂಚ ಜೈನ ಸಮಾಜ, ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು ಜಿನಮಂದಿರ, ಮಾನಸ್ತಂಭ, ಚಂದ್ರಶಾಲೆ, ಶ್ರೀಮಠದ ಆವರಣದಲ್ಲಿ ದೀಪ ಪ್ರಜ್ವಲನ ಮಾಡಿದರು.

ವಾದ್ಯಗೋಷ್ಠಿಯೊಂದಿಗೆ ಆಗಮೋಕ್ತ ಪೂಜಾ ವಿಧಾನಗಳು ಸಾಂಗವಾಗಿ ನೆರವೇರಿದ್ದು ರಾತ್ರಿ ನಗರದಲ್ಲಿ ಉತ್ಸವ ಮೂರ್ತಿಯೊಂದಿಗೆ ಸಾಲಾಂಕೃತ ಶೋಭಾಯಾತ್ರೆ ನಡೆಯಿತು. ಬೆಳಕಿನ ಚಿತ್ತಾರದಿಂದ ಶ್ರೀಕ್ಷೇತ್ರವು ಶೋಭಿಸುವಂತಾಯಿತು.

ಗಜರಾಣಿ ಐಶ್ವರ್ಯ, ಅಶ್ವ ಮಾನವಿ, ಶೋಭಾಯಾತ್ರೆಗೆ ಮೆರಗು ನೀಡಿದವು.


ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





