ರಿಪ್ಪನ್ಪೇಟೆ ; ಗ್ರಾಮೀಣ ಪ್ರದೇಶದ ಮಕ್ಕಳಲ್ಲಿಯೂ ಅಪಾರ ಪ್ರತಿಭೆ ಅಡಗಿದೆ. ಅವರಿಗೆ ಪೋಷಕರು ಹಾಗೂ ಶಿಕ್ಷಕರು ಸರಿಯಾದ ಪ್ರೋತ್ಸಾಹ ನೀಡಿದರೆ, ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚೇತನಾ ಆರ್.ಪಿ. ಅಭಿಪ್ರಾಯಪಟ್ಟರು.
ಪಟ್ಟಣದ ಗುಡ್ ಶೆಪರ್ಡ್ ಶಾಲೆಯಲ್ಲಿ ಬಾಳೂರು ಹಾಗೂ ರಿಪ್ಪನ್ಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, “ಪ್ರತಿಭಾ ಕಾರಂಜಿ ಮಕ್ಕಳ ಸಾಂಸ್ಕೃತಿಕ ವೇದಿಕೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿರುವ ಕಲಾ ಮತ್ತು ಕೌಶಲ್ಯವನ್ನು ಬೆಳಕಿಗೆ ತರುವ ಅತ್ಯುತ್ತಮ ಅವಕಾಶ,” ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್, “ಮಕ್ಕಳ ಪ್ರತಿಭೆ ಗುರುತಿಸಲು ಸರ್ಕಾರ ಆರಂಭಿಸಿರುವ ಈ ರೀತಿಯ ವೇದಿಕೆಗಳು ಶ್ಲಾಘನೀಯ. ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು,” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಡ್ ಶೆಪರ್ಡ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಧರ್ಮಗುರು ರೆ.ಫಾ. ಬಿನೋಯ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಹೊಸನಗರ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಂಡಿ ಸೋಮಶೇಖರ್, ಬಾಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್ ಆಚಾರ್, ಕ್ಷೇತ್ರ ಸಮನ್ವಯಾಧಿಕಾರಿ ಶೇಷಾಚಲ ಜಿ. ನಾಯಕ್, ಹೊಸನಗರ ತಾಲೂಕು ಶಿಕ್ಷಕರ ಸಂಘದ ಉಪಾಧ್ಯಕ್ಷ ಬೆಳ್ಳೂರು ಶಿವಮೂರ್ತಿ, ಜಗದೀಶ್ ಕಾಗಿನಲ್ಲಿ, ಶಿವಪ್ಪ ಎಚ್.ಸಿ., ವನಜ, ಹಾಗೂ ಸಂಪನ್ಮೂಲ ವ್ಯಕ್ತಿ ಮಂಜುನಾಥ್, ಗುಡ್ ಶೆಪರ್ಡ್ ಶಿಕ್ಷಣ ಸಂಸ್ಥೆಯ ಪೋಷಕ–ಮಕ್ಕಳ ಸಮಿತಿಯ ಅಧ್ಯಕ್ಷ ತಂಗಚ್ಚನ್, ಕಾರ್ಯನಿರ್ವಾಹಕ ಮಂಡಳಿಯ ಸದಸ್ಯ ಸಬಾಸ್ಟಿನ್ ಮ್ಯಾಥ್ಯೂಸ್ ಮುಖ್ಯ ಶಿಕ್ಷಕಿ ಜೋಸ್ಪಿನ್ ಹಾಗೂ ಶಿಕ್ಷಕ ವರ್ಗದ ಸದಸ್ಯರು ಭಾಗವಹಿಸಿದರು.
ಸಮೂಹ ಸಂಪನ್ಮೂಲ ಅಧಿಕಾರಿ ಮಂಜುನಾಥ್ ಎನ್ ಸ್ವಾಗತಿಸಿ, ಶಿಕ್ಷಕ ಷಣ್ಮುಖ ನಿರೂಪಿಸಿ, ಮಂಜುನಾಥ್ ಆಚಾರ್ ವಂದಿಸಿದರು.

ಈ ಬಾರಿ ರಿಪ್ಪನ್ಪೇಟೆ ಮತ್ತು ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 17ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ನೃತ್ಯ, ಹಾಡು, ನಾಟಕ, ಭಾಷಣ, ಚಿತ್ರಕಲೆ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಅಪಾರ ಪ್ರತಿಭೆ ಪ್ರದರ್ಶಿಸಿದರು.
ಮಕ್ಕಳ ನಗು, ಉತ್ಸಾಹ ಮತ್ತು ಕಲಾತ್ಮಕ ಕಂಗೊಳದಿಂದ ವೇದಿಕೆ ಮೆರಗುಗೊಂಡಿತ್ತು.
ಈ ಪ್ರತಿಭಾ ಕಾರಂಜಿ ನಿಜಕ್ಕೂ ಮಲೆನಾಡಿನ ಮುತ್ತುಗಳ ಹೊಳೆಯುವ ಕ್ಷಣವಾಯಿತು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





