ಗರ್ತಿಕೆರೆಯಲ್ಲಿ ನ. 23 ರಂದು ಅಮೃತ ಸ್ನೇಹ ಸಮ್ಮಿಲನ, ಶಾಲಾ ಪುನರ್ಮಿಲನ ಮತ್ತು ಶಿಕ್ಷಕರ ಸಮಾಗಮ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜ್ ಅವರಣದಲ್ಲಿ ಅಮೃತ ಸ್ನೇಹ ಸಮ್ಮಿಲನ ಸಮಿತಿ ಹಾಗೂ ಹಿರಿಯ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ನ. 23 ರ ಭಾನುವಾರ ಬೆಳಗ್ಗೆ 9.30 ಕ್ಕೆ ಅಮೃತ ಸ್ನೇಹ ಸಮ್ಮಿಲನ ‘ಶಾಲಾ ಪುನರ್ಮಿಲನ ಮತ್ತು ಶಿಕ್ಷಕರ ಸಮಾಗಮ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅಮೃತ ಗ್ರಾಮ ಪಂಚಾಯಿತ್ ಅಧ್ಯಕ್ಷ ಸಚಿನ್‌ಗೌಡ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಸರ್ಕಾರಿ ಪದವಿ ಪೂರ್ವ ಕಾಲೇಜ್ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಶಾಲೆಯಲ್ಲಿ ವ್ಯಾಸಂಗ ಮಾಡಿ ಉದ್ಯೋಗದಲ್ಲಿರುವವರು ಮತ್ತು ಇನ್ನಿತರ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಹಳೆಯ ವಿದ್ಯಾರ್ಥಿಗಳನ್ನು ಸಂಘಟಿಸಿ ಶಾಲೆಯ ಉನ್ನತಿಗೆ ಸಹಕಾರಿಯಾದವರನ್ನು ಮತ್ತು ಭೋದನೆ ಮಾಡಿದಂತಹ ಗುರುಗಳಿಗೆ ಗುರುವಂದನಾ ಕಾರ್ಯಕ್ರಮ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸಾಧನಾ ಸಿರಿ ನೀಡಿ ಗೌರವಿಸುವ ಸಮಾರಂಭವನ್ನು ನಡೆಸಲಾಗುವುದೆಂದು ಹೇಳಿದರು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬ್ರಹ್ಮಶ್ರೀ ನಾರಾಯಣಗುರು ಮಹಾಸಂಸ್ಥಾನ ಮಠದ ಶ್ರೀ ರೇಣುಕಾನಂದ ಸ್ವಾಮಿಜಿ ವಹಿಸಿ ಆಶೀರ್ವಚನ ನೀಡುವರು.

ಸಮಾರಂಭವನ್ನು ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸುವರು. ರಾಜ್ಯ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಶಿಕ್ಷಕರಿಗೆ ಗುರುವಂದನೆ ನೆರವೇರಿಸುವರು.

ಅಮೃತ ಸ್ಮರಣ ಸಂಚಿಕೆಯನ್ನು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಲೋಕಾರ್ಪಣೆ ಮಾಡುವರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಡಾ.ಜಿ.ಡಿ.ನಾರಾಯಣಪ್ಪ, ಬಿ.ಸ್ವಾಮಿರಾವ್, ಜಿಲ್ಲಾ ಪಂಚಾಯಿತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಜಿ.ಪಂ.ಮಾಜಿ ಸದಸ್ಯರಾದ ರಾಮಚಂದ್ರ ಬಂಡಿ, ಶ್ವೇತಾ ಬಂಡಿ, ಸುರೇಶ್ ಸ್ವಾಮಿರಾವ್, ಅಮೃತ ಗ್ರಾಮ ಪಂಚಾಯಿತ್ ಸದಸ್ಯರಾದ ಸುರೇಶ್, ಲಿಂಗರಾಜ್, ವಿಶ್ವನಾಥ, ದೇವರಾಜ್, ವಿ.ಎಸ್.ಎಸ್.ಎನ್.ಆಧ್ಯಕ್ಷ ದಿನೇಶ್ ಬಂಡಿ, ಸಿಡಿಸಿ ಅಧ್ಯಕ್ಷ ಟಿ.ಡಿ.ಸೋಮಶೇಖರ್ ಭಾಗವಹಿಸುವರು.

ಸಮಾರೋಪ ಸಮಾರಂಭ ;

ಇದೇ ದಿನ ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಅಮೃತ ಗ್ರಾಮ ಪಂಚಾಯಿತ್ ಅಧ್ಯಕ್ಷ ಸಚಿನ್ ಗೌಡ ವಹಿಸುವರು.
ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸುವರು. ಸಾಧಕರಿಗೆ ಶಾಸಕ ರಾಜ್ಯ ಅರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಸನ್ಮಾನಿಸುವರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಎಂ.ಎ.ಡಿ.ಬಿ.ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಶಿಮುಲ್ ಅಧ್ಯಕ್ಷ ವಿದ್ಯಾಧರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಶ್ರೀಕಾತ್, ಅಮೃತ ಗ್ರಾಮ ಪಂಚಾಯಿತ್ ಸದಸ್ಯರು, ಅಮೃತ ಸ್ನೇಹ ಸಮ್ಮಿಲನ ಸಂಚಾಲಕ ಭೂನ್ಯಾಯ ಮಂಡಳಿ ಸದಸ್ಯ ಹೆಚ್.ಎಂ.ಬಷೀರ್ ಅಹಮ್ಮದ್, ಪ್ರಾಚಾರ್ಯ ಮಹಮ್ಮದ್ ನಜಹತ್ ಉಲ್ಲಾ, ಮುಖ್ಯ ಶಿಕ್ಷಕಿ ಪ್ರಭಾವತಿ ಹೆಗಡೆ, ಸತ್ಯನಾರಾಯಣ ಎನ್.ಎಸ್, ಹಿರಿಯ ವಿಧ್ಯಾರ್ಥಿಗಳ ಸಂಘದ ವಿಭಾಗದ ಅಧ್ಯಕ್ಷ ಪ್ರದೀಪ ಇನ್ನಿತರರು ಭಾಗವಹಿಸುವರು.

ನಂತರ ಸಂಜೆ 6 ಗಂಟೆಗೆ ಸಮನ್ವಯ ತಂಡದಿಂದ ಅಂತರಾಷ್ಟ್ರೀಯ ಮಟ್ಟದ ಕಲಾವಿದರಿಂದ ನೃತ್ಯ, ಝೀ ಕನ್ನಡ ವಾಹಿನಿಯ ಸರಿಗಮಪ ಖ್ಯಾತಿಯ ಕಲಾವಿದರಿಂದ ಸಂಗೀತ ಹರಟೆ ಕಾರ್ಯಕ್ರಮ, ಹಾಸ್ಯೋತ್ಸವ ಕಾರ್ಯಕ್ರಮ ಸಹ ಜರುಗಲಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್.ಎಂ.ಬಷೀರ್ ಅಹಮ್ಮದ್, ಟಿ.ಡಿ.ಸೋಮಶೇಖರ್, ಹೆಚ್.ಎಸ್. ಅನಂತಮೂರ್ತಿ, ಪ್ರದೀಪ್ ಕುಮಾರ್ ಹೆಚ್.ವೈ, ರಮೇಶ್, ಅರುಣ್ ಕುಮಾರ್ ಇನ್ನಿತರರು ಹಾಜರಿದ್ದರು.

Leave a Comment