ಹೊಸನಗರ ; ಶಿವಮೊಗ್ಗ ಜಿಲ್ಲಾ ಮಟ್ಟದ 17 ವರ್ಷ ವಯೋಮಿತಿಯ ಅಥ್ಲೆಟಿಕ್ ವಿಭಾಗದಲ್ಲಿ ಹೊಸನಗರ ಪಟ್ಟಣದ ಮಲೆನಾಡು ಪ್ರೌಢಶಾಲೆಯ ಐದು ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಅರ್ಚನಾ 3000 ಮೀ. ಪ್ರಥಮ,
ರವೀಶ 5000 ಮೀ. ನಡಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಪೋಲೋ ವಾಲ್ಟ್ ಆಟದಲ್ಲಿ ಸಾಗರ್, ಆದರ್ಶ ಜಿ ಪ್ರಥಮ ಸ್ಥಾನ ಪಡೆದಿದ್ದಾರೆ. ಸುಬ್ರಹ್ಮಣ್ಯ ಡಿಸ್ಕಸ್ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ವಿಶೇಷವಾಗಿ ಮೊಟ್ಟಮೊದಲ ಬಾರಿಗೆ ಪೋಲೊ ವಾಲ್ಟ್ ಜಿಗಿತ ಸ್ಪರ್ಧೆಯಲ್ಲಿ ಇದುವರೆಗಿನ ಶಿವಮೊಗ್ಗ ಜಿಲ್ಲೆಯ 2.62 ಮೀಟರ್ ಎತ್ತರದ ರೆಕಾರ್ಡ್ ಬ್ರೇಕ್ ಮಾಡಿ 2.90 ರೆಕಾರ್ಡ್ ಅನ್ನು ಹೊಸನಗರ ಮಲೆನಾಡು ಪ್ರೌಢಶಾಲೆಯ ಸಾಗರ್ ಹಾಗೂ ಆದರ್ಶ ವಿದ್ಯಾರ್ಥಿಗಳು ಸೃಷ್ಟಿಸಿದ್ದಾರೆ ಎಂದು ಶಾಲಾ ದೈಹಿಕ ಶಿಕ್ಷಕ ಸುರೇಶ್ ಮಲೆನಾಡು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಮಲೆನಾಡು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎನ್. ಸುಧಾಕರ್ ಮತ್ತು ಶಿಕ್ಷಕ ವೃಂದ, ಸಿಬ್ಬಂದಿ ಹಾಗೂ ಪೋಷಕರು ಅಭಿನಂದಿಸಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





