ರಿಪ್ಪನ್‌ಪೇಟೆ ; ಸಾನಿಕ ರಾಷ್ಟ್ರ ಮಟ್ಟಕ್ಕೆ ಆಯ್ಕೆ !

Written by Mahesha Hindlemane

Published on:

ರಿಪ್ಪನ್‌ಪೇಟೆ ; ನ. 15, 16 ಮತ್ತು 17 ರಂದು ಬಳ್ಳಾರಿಯಲ್ಲಿ ನಡೆದ SGFI ಆಯೋಜಿಸಿದ ರಾಜ್ಯ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ತಂಡದವರೊಂದಿಗೆ ಆಡಿ ಕು. ಸಾನಿಕ ಟಿ.ಎನ್ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಈಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಟೇತಾರಿಗದಲ್ಲಿ 7ನೇ ತರಗತಿ ಪೂರ್ಣಗೊಳಿಸಿ ಕ್ರೀಡಾಸಕ್ತಿ ಹಾಗು ಕ್ರೀಡಾ ಪ್ರತಿಭೆಯಿಂದ ಜಿಲ್ಲಾ ಮಟ್ಟದಲ್ಲಿ ತನ್ನ ಪ್ರತಿಭೆ ಪ್ರದರ್ಶನ ನೀಡಿ ಕ್ರೀಡಾ ವಸತಿ ಶಾಲೆಯಾದ ಶ್ರೀ ಜಯಪ್ರಕಾಶ್ ನಾರಾಯಣ್ ರಾಷ್ಟ್ರೀಯ ಯುವ ತರಬೇತಿ ಕೇಂದ್ರ ಬೆಂಗಳೂರಿನ ವಿದ್ಯಾನಗರ ಕ್ರೀಡಾ ವಸತಿ ಶಾಲೆಗೆ ಬಾಸ್ಕೆಟ್ ಬಾಲ್ ಕ್ರೀಡೆಯಲ್ಲಿ ಆಯ್ಕೆ ಆಗಿರುವುದು ವಿಶಿಷ್ಟ ಸಾಧನೆಯಾಗಿದೆ.

ಕ್ರೀಡಾ ವಸತಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ಸಾನಿಕ, ಬಳ್ಳಾರಿಯಲ್ಲಿ ನಡೆದ SGFI ಆಯೋಜಿಸಿದ ರಾಜ್ಯಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ತಂಡದವರೊಂದಿಗೆ ಆಡಿ ರಾಜ್ಯ ಮಟ್ಟದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ‌. ಈಕೆಗೆ ಸತ್ಯನಾರಾಯಣ ಮಾರ್ಗದರ್ಶನ ಮತ್ತು ತರಬೇತಿ ನೀಡಿದ್ದರು.

ರಿಪ್ಪನ್‌ಪೇಟೆ ಸಮೀಪದ ತಮ್ಮಡಿಕೊಪ್ಪ ಎಂಬ ಕುಗ್ರಾಮದ ಈ ಪ್ರತಿಭೆ ರಾಜ್ಯ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಕುಟುಂಬ, ಶಾಲೆ ಹಾಗೂ ಗ್ರಾಮಸ್ಥರಿಗೆ ಹೆಮ್ಮೆ ತಂದಿದೆ.

ಈಕೆಯ ಈ ಸಾಧನೆಗೆ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಶುಭ ಹಾರೈಸಿ ಅಭಿನಂದಿಸಿದ್ದಾರೆ.

Leave a Comment