ಎಂ ಗುಡ್ಡೆಕೊಪ್ಪ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ, ಸದಸ್ಯರ ಮಧ್ಯೆ ಮಾತಿನ ಚಕಮಕಿ ; ಭ್ರಷ್ಟ ಸದಸ್ಯರು ಯಾರು? ಸಾಬೀತಿಗೆ ಪಟ್ಟು

Written by Mahesha Hindlemane

Published on:

ಹೊಸನಗರ ; ತಾಲ್ಲೂಕು ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ 6 ಜನ ಸದಸ್ಯರು ಭ್ರಷ್ಟ ಸದಸ್ಯರು ಯಾರು ಎಂದು ಸಾಬೀತು ಪಡಿಸುವವರೆಗೆ ಸಭೆ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದ ಘಟನೆ ನಡೆಯಿತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅಕ್ಟೋಬರ್ ತಿಂಗಳ ಸಾಮಾನ್ಯ ಸಭೆಯನ್ನು ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿಯ ಆವರಣದಲ್ಲಿ ಏರ್ಪಡಸಲಾಗಿದ್ದು ಈ ಸಾಮಾನ್ಯ ಸಭೆಗೆ ಕೆಲವು ಸದಸ್ಯರು ಗೈರು ಹಾಜರಾಗಿದ್ದು ಕೋರಂ ಇಲ್ಲದ ಕಾರಣ ಸಾಮಾನ್ಯ ಸಭೆಯನ್ನು ಮುಂದೂಡಲಾಗಿತ್ತು. ಆ ಸಂದರ್ಭದಲ್ಲಿ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿಯ ಅಧ್ಯಕ್ಷ ಪ್ರವೀಣ್‌ಕುಮಾರ್‌, 6 ಜನ ಸದಸ್ಯರ ಭ್ರಷ್ಟಚಾರವನ್ನು ಈ ಸಭೆಯಲ್ಲಿ ಎತ್ತಿ ತೋರಿಸುತ್ತೇನೆ ಎಂಬ ಕಾರಣದಿಂದ ಅವರು ಸಾಮಾನ್ಯ ಸಭೆಗೆ ಬಂದಿಲ್ಲ ಎಂದು ಆನ್‌ಲೈನ್ ಲೈವ್‌ನಲ್ಲಿ ಹೇಳಿದ್ದಾರೆ ಎಂದು 6 ಜನ ಗ್ರಾಮ ಪಂಚಾಯತಿಯ ಸದಸ್ಯರು ಭ್ರಷ್ಟ ಸದಸ್ಯರು ಯಾರು? ಎಂದು ಸಾಬೀತುಪಡಿಸಬೇಕು ಎಂದು ಹಠ ಹಿಡಿದು ಕುಳಿತರು. ಈ ಸಂದರ್ಭದಲ್ಲಿ ಸಭೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು ಪಿಡಿಒ ಯೋಗೇಶ್ ಹಾಗೂ ಸಿಬ್ಬಂದಿಗಳು ತಡೆದು ಸಮದಾನ ಪಡಿಸಿದರು.

ಸಾಮಾನ್ಯ ಸಭೆಗೆ ಯಾವುದೇ ರೀತಿಯಲ್ಲಿಯೂ ಚ್ಯುತಿ ತರುವುದು ಬೇಡ ಜನ ಸಾಮಾನ್ಯರ ಕೆಲಸದ ಕಡಿತ ಮುಗಿದ ಮೇಲೆ ಅಧ್ಯಕ್ಷರ ಒಪ್ಪಿಗೆಯ ಮೇರೆಗೆ ಬರುವ ವಿಷಯದಲ್ಲಿ ಚರ್ಚಿಸೋಣ ಎಂದು ಪಿಡಿಒ ಯೋಗೇಶ್ ಹೇಳಿದ ನಂತರ ಸಭೆಯನ್ನು ನಡೆಸಲಾಯಿತು.

ಗ್ರಾಮ ಪಂಚಾಯತಿಯ ಸದಸ್ಯರಾದ ಕಾಲಸಸಿ ಸತೀಶ್ ಓಂಕೇಶಪ್ಪ ಗೌಡ, ಚಿಕ್ಕನಕೊಪ್ಪ ಶ್ರೀಧರ, ನಿರ್ಮಾಲ ರಾಘವೇಂದ್ರ, ಬೇಬಿ, ದಿವ್ಯ ಅವರುಗಳು ಅಧ್ಯಕ್ಷ ಪ್ರವೀಣ್‌ ಭ್ರಷ್ಟರು ಯಾರು? ಎಂದು ಸಾಬೀತು ಪಡಿಸಲು ಪಟ್ಟು ಹಿಡಿದರು.

ರಾಜ್ಯದ ಜನತೆಯ ಮುಂದೆ ಗ್ರಾಮ ಪಂಚಾಯತಿ ಸದಸ್ಯರ ಮರ್ಯಾದೆ ಹೋಗಿದೆ. ಈ ಸಭೆಯಲ್ಲಿ ಮಾತನಾಡಿದ ಆರು ಜನ ಸದಸ್ಯರು ರಾಜ್ಯದ ಜನತೆಯ ಮುಂದೆ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿಯ ಸದಸ್ಯರ ಮರ್ಯಾದೆಯನ್ನು ನಮ್ಮ ಗ್ರಾಮ ಪಂಚಾಯತಿ ಅಧ್ಯಕ್ಷರೇ ಕಳೆದಿದ್ದಾರೆ. ನಮ್ಮಲ್ಲಿರುವ ಭ್ರಷ್ಟ ಸದಸ್ಯರು ಯಾರು? ಎಂದು ಸಾಬೀತು ಪಡಿಸಲಿ ಎಂದು ಕೂಗಾಡಿದರು.

ಭ್ರಷ್ಟರು ಯಾರು ಎಂದು ತಿಳಿಸದ ಅಧ್ಯಕ್ಷ ;

ಗ್ರಾಮ ಪಂಚಾಯತಿಯ ಅಧ್ಯಕ್ಷ ಪ್ರವೀಣ್‌ಕುಮಾರ್ ಭ್ರಷ್ಟರು ಯಾವ ಸದಸ್ಯರು ಎಂದು ಹೇಳದೇ ಹೋಗಿದ್ದು ಮುಂದಿನ ಸಾಮಾನ್ಯ ಸಭೆಯಲ್ಲಿ ತಿಳಿಸುತ್ತೇವೆಂದು ಜಾರಿ ಕೊಂಡರು.

ಈ ಸಾಮಾನ್ಯ ಸಭೆಯಲ್ಲಿ ಉಪಾಧ್ಯಕ್ಷೆ ಸುಧಾ, ಹೆಚ್.ಎನ್ ಮಹೇಂದ್ರ ಸೇರಿ ಎಲ್ಲ ಸದಸ್ಯರು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.

Leave a Comment