ಆರ್ಯ ಈಡಿಗರ ಸಂಘದ ಲೆಕ್ಕಪತ್ರಗಳನ್ನು ಕೇಳುವ ಹಕ್ಕು ಸಂಘದ ಸದಸ್ಯರಿಗೆ ಮಾತ್ರ ಇದೆ ; ಬಿ.ಪಿ. ರಾಮಚಂದ್ರ

Written by Mahesha Hindlemane

Updated on:

ಹೊಸನಗರ ; ತಾಲ್ಲೂಕಿನ ಆರ್ಯ ಈಡಿಗರ (ದೀವರ) ಸಂಘದ ಲೆಕ್ಕಪತ್ರಗಳನ್ನು ಕೇಳುವ ಹಕ್ಕು ಈ ಸಂಘದ ಸದಸ್ಯರಿಗೆ ಇರುತ್ತದೆ ಎಲ್ಲರಿಗೂ ಲೆಕ್ಕಪತ್ರಗಳನ್ನು ತೋರಿಸಬೇಕೆಂದಿಲ್ಲ ಎಂದು ಹೊಸನಗರ ತಾಲ್ಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಬಂಡಿ ಬಿ.ಪಿ ರಾಮಚಂದ್ರ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/17cv4LJtGg/

ಈಡಿಗರ ಸಂಘದ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2007-08 ರಲ್ಲಿ ಬಿ.ಸ್ವಾಮಿರಾವ್ ರವರು ನನ್ನನ್ನು ಸಂಘಕ್ಕೆ ಅಧ್ಯಕ್ಷರನ್ನಾಗಿ ನೇಮಿಸಿ ಕೆಲವು ಹೆಸರನ್ನು ಸೂಚಿಸಿ ಸದಸ್ಯರನ್ನಾಗಿಸಿಕೊಂಡು ಸಂಘವನ್ನು ಮುನ್ನಡೆಸುವಂತೆ ಹೇಳಿದರು. ಆದರೆ ಮಾಜಿ ಅಧ್ಯಕ್ಷರಾದ ಬಿ.ಸ್ವಾಮಿರಾವ್‌ ಸಂಘದ ಯಾವುದೇ ರೀತಿಯ ಹಣಕಾಸು ಲೆಕ್ಕ ಪತ್ರಗಳನ್ನು ನೀಡದೆ ಹಣಕಾಸು ನೀಡದೆ ಕೇವಲ ಮಳಿಗೆ ಮತ್ತು ದುರಸ್ಥಿಯಲ್ಲಿರದ ಹಿಂಭಾಗ ವಾಣಿಜ್ಯ ಮಳಿಗೆಯನ್ನು ತೋರಿಸಿದ್ದರು.

ಆರ್ಯ ಈಡಿಗರ ಸಂಘವು ರಿನಿವಲ್ ಆಗಿರಲಿಲ್ಲ. ಪಟ್ಟಣ ಪಂಚಾಯ್ತಿಗೆ ತೆರಿಗೆ ಕಟ್ಟಿರಲಿಲ್ಲ. 4 ಲಕ್ಷ ಬಾಕಿ ಇತ್ತು. ಕೇವಲ ವರ್ಷಕ್ಕೆ 1.50 ಲಕ್ಷ ರೂ ಬಾಡಿಗೆ ಬರುತ್ತಿತ್ತು. ನಾನು ಅಧ್ಯಕ್ಷನಾದ ಮೇಲೆ ಸಂಘವನ್ನು ರಿನೀವಲ್ ಮಾಡಿಸಿ ಸಹಕಾರ ಇಲಾಖೆಯಿಂದ ವಾರ್ಷಿಕವಾಗಿ ಲೆಕ್ಕ ಪತ್ರ ಆಡಿಟ್ ಮಾಡಿಸಿ ಪ್ರತಿ ವರ್ಷ ರಿನೀವಲ್ ಮಾಡಿಸಿ ಸದೃಢವಾದ ಸಮಾಜದ ಬಗ್ಗೆ ಕಾಳಜಿ ಇರುವ ಪರಿಣಿತರನ್ನು ಒಳಗೊಂಡಂತೆ 30 ಸದಸ್ಯರ ಈಡಿಗ ಕಾರ್ಯಕಾರಿ ಸಮಿತಿ ರಚಿಸಿ ಕಲ್ಯಾಣ ಮಂದಿರ ಮತ್ತು ಸಭಾಭವನ ನಿರ್ಮಾಣ ಮಾಡುವ ಹಿರಿದಾದ ಉದ್ದೇಶದಿಂದ ಆಗಿನ ಶಾಸಕ ಹರತಾಳು ಹಾಲಪ್ಪ ಸರ್ಕಾರದ ಅನುದಾನ ಪಡೆದು ಕೆಲಸ ಪ್ರಾರಂಭಿಸಿ ಗೋಪಾಲಕೃಷ್ಣ ಬೇಳೂರು ಮತ್ತು ಕಾಗೋಡು ತಿಮ್ಮಪ್ಪ, ಬಿ.ಕೆ ಹರಿಪ್ರಸಾದ್, ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರ ಮತ್ತು ಆರ್.ಎನ್ ಮಂಜುನಾಥ ಗೌಡ ನೀಡಿದ ಅನುದಾನದ ಮೂಲಕ ಹಂತ ಹಂತವಾಗಿ ಕೆಲಸ ಮಾಡಿ ಸಂಘದ ಹಣವನ್ನು ವೆಚ್ಚ ಮಾಡಿ ಸುಸಜ್ಜಿತವಾದ ಕಲ್ಯಾಣ ಮಂದಿರವನ್ನು ಕಟ್ಟಿ ನಿರ್ಮಿಸಲಾಗಿದೆ. ಈಗ ಮದುವೆ ಶುಭ ಸಮಾರಂಭಗಳು ನಡೆಯುತ್ತವೆ. ಕುಡಿಯುವ ನೀರಿನ ಬಾವಿ ಮತ್ತು ಬೋರ್ ವೆಲ್ ಮುಂತಾದ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಪಟ್ಟಣ ಪಂಚಾಯ್ತಿಗೆ ಕಟ್ಟಬೇಕಾದ ತೆರಿಗೆಯನ್ನು ಕಟ್ಟಿ ಸಂಘದ ಹೆಸರಿಗೆ ಖಾತೆ ಮಾಡಿಸಿ ಅವಶ್ಯ ದಾಖಲೆಗಳನ್ನು ಇರಿಸಿಕೊಂಡಿದ್ದೇವೆ.

ಈಗ ಕಲ್ಯಾಣ ಮಂದಿರ ಮತ್ತು ವಾಣಿಜ್ಯ ಮಳಿಗೆಗಳನ್ನು ಸಾರ್ವಜನಿಕರ ಉಪಯೋಗಕ್ಕೆ ನೀಡಿ ಬರುವಂತಹ ಆದಾಯದ ಲೆಕ್ಕಪತ್ರ ಖರ್ಚು ವೆಚ್ಚ ಪ್ರತಿ ತಿಂಗಳು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು ನೊಂದಾಯಿತ ಆಡಿಟರ್‌ರವರಿಂದ ಆಡಿಟ್ ಮಾಡಿಸಿ ಪ್ರತಿ ವರ್ಷ ರಿನೀವಲ್ ಮಾಡಿಸಿ ಸಂಘದ ದಾಖಲೆ ಪತ್ರಗಳನ್ನು ಅಪ್‌ಡೇಟ್ ಮಾಡಿಕೊಂಡಿದ್ದೇವೆ. ಸಂಘದ ವ್ಯವಹಾರಗಳು ಬ್ಯಾಂಕ್ ಅಕೌಂಟ್ ಮೂಲಕ ನಡೆಯುತ್ತಿದ್ದು, ಎಲ್ಲಾ ಮಾಹಿತಿ ಸದಸ್ಯರಿಗೆ ಪ್ರತಿ ತಿಂಗಳು ನೀಡುತ್ತಿದ್ದೇವೆ.

ಸಂಘದ ಸದಸ್ಯರಾಗಲು ಬಯಸುವವರಿಗೆ 1000 ರೂಗಳ ಸದಸ್ಯತ್ವ ಶುಲ್ಕ ನಿಗಧಿಗೊಳಿಸಿ ಸದಸ್ಯತ್ವ ನೀಡುತ್ತಿದ್ದೇವೆ. ಈಗ ಈ ಸಂಘದಲ್ಲಿ ಅವ್ಯವಹಾರ, ಭ್ರಷ್ಟಾಚಾರಕ್ಕೆ ಅವಕಾಶವಿರುವುದಿಲ್ಲ. ಆದರೂ ಈ ಬಗ್ಗೆ ಮಾಜಿ ಸಹಕಾರ್ಯದರ್ಶಿಯಾದ ಎನ್.ಇ ಸ್ವಾಮಿರವರು ಸಹಕಾರ ಇಲಾಖೆಗೆ ಭ್ರಷ್ಟಾಚಾರದ ಬಗ್ಗೆ ದೂರು ನೀಡಿದ್ದು, ಈ ದೂರಿನ ಬಗ್ಗೆ ಸಹಕಾರ ಇಲಾಖೆಯಿಂದಲೇ ತನಿಖೆ ನಡೆದು ಯಾವುದೇ ಅವ್ಯವಹಾರ ನಡೆದಿರುವುದಿಲ್ಲ ಎಂದು ತನಿಖಾ ವರದಿ ನೀಡಿರುತ್ತಾರೆ. ದೂರುದಾರರಾದ ಸ್ವಾಮಿರವರೇ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಖರ್ಚು-ವೆಚ್ಚದ ಬಗ್ಗೆ ಅನುಮೋದನೆ ನೀಡಿದ್ದು, ಯಾವುದೇ ಆಕ್ಷೇಪಣೆ ಸಲ್ಲಿಸಿರುವುದಿಲ್ಲ ಎಂದು ತನಿಖಾ ವರದಿಯಲ್ಲಿ ತಿಳಿಸಿದ್ದು ಹೀಗಿದ್ದು ಸಂಘವು ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾಸಂಸ್ಥೆ ಕಟ್ಟಬೇಕು ಎನ್ನುವ ಘನ ಉದ್ದೇಶದಿಂದ 2020-21 ರಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿ ಕಳೂರು ಗ್ರಾಮದ ಸ.ನಂ 202 ರಲ್ಲಿ 3.00 ಎಕರೆ ಜಾಗ ಮಂಜೂರು ಮಾಡಿಸಿ ಅದು ಪೋಡಿ ದುರಸ್ತಿಯಾಗಿ ಸ.ನಂ 222 ಆಗಿದೆ. ಈ ಜಾಗ ಮಂಜೂರಾತಿಗಾಗಿ ಖರ್ಚು ವೆಚ್ಚ ಮತ್ತು ಮಾಲಿಕೆ ಹಣವನ್ನು ಸಂಘದಿಂದಲೇ ಭರಿಸಿ ತಂತಿಬೇಲಿ ನಿರ್ಮಿಸಿ ನಮ್ಮ ವಶದಲ್ಲೇ ಇರುತ್ತದೆ. ಈ ಜಾಗದಲ್ಲಿ ಹೆಣ್ಣುಮಕ್ಕಳ ವಿದ್ಯಾರ್ಥಿ ನಿಲಯ ನಿರ್ಮಿಸುವ ಸಲುವಾಗಿ ಹಾಲಿ ಶಾಸಕರಾದ ಬೇಳೂರು ಗೋಪಾಲಕೃಷ್ಣ 40 ಲಕ್ಷ ರೂ.ಗಳ ಅನುದಾನ ನೀಡಿದ್ದು ಇಂತಹ ಸಮಾಜಮುಖಿ ಕೆಲಸ ಮಾಡುತ್ತಿರುವ ಈ ಸಂಘದಲ್ಲಿ ಕೆಲವು ಹತಾಶ ಮನೋಭಾವವುಳ್ಳ ವ್ಯಕ್ತಿಗಳು ಕಪೋಲಕಲ್ಪಿತ ಊಹಾಪೋಹಗಳಿಂದ ಭ್ರಷ್ಟಾಚಾರದ ಆರೋಪ ಹೊರಿಸುತ್ತಿದ್ದು, ಇದು ಸತ್ಯಕ್ಕೆ ದೂರವಾಗಿದೆ. ಈ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಸಮಾಜದ ಬಾಂಧವರ ಜೀವಮಾನ ಸೇವೆ ಇದಾಗಿದ್ದು, ಸಮಾಜಮುಖಿ ಕಾರ್ಯಕ್ರಮ ಮಾಡುವ ಉದ್ದೇಶ ಹೊಂದಿದ್ದು, ಸಮಾಜ ಬಾಂಧವರು ಈ ಊಹಾಪೋಹದ ಆರೋಪಕ್ಕೆ ಮನ್ನಣೆ ನೀಡದೇ ಮುಂದಿನ ದಿನಗಳಲ್ಲಿ ಸಂಘದ ಸರ್ವ ಸದಸ್ಯರ ಮಹಾಸಭೆ ನಡೆಸಿಕೊಂಡು ಕಾರ್ಯಕಾರಿ ಮಂಡಳಿಯ ಉತ್ತಮ ಕಾರ್ಯಕ್ಕೆ ಪ್ರೋತ್ಸಾಹ ನೀಡಿ ಸಂಘದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೇಳಿಕೊಂಡರು.

ಸಂಘದ ಮಾಜಿ ಅಧ್ಯಕ್ಷ ಬಿ. ಸ್ವಾಮಿರಾವ್‌ 2007-08ರ ಹಿಂದಿನ ಸಾಲಿನ ಲೆಕ್ಕಪತ್ರಗಳನ್ನು ನೀಡಿ ಸಂಘದ ಎದುರು ಧರಣಿ ನಡೆಸಲಿ ಎರಗಿ ಉಮೇಶ್ ಈ ಪತ್ರಿಕಾಘೋಷ್ಠಿಯಲ್ಲಿ ಮಾತನಾಡಿದ ಆರ್ಯ ಈಡಿಗರ ಸಂಘದ ಉಪಾಧ್ಯಕ್ಷ ಎರಗಿ ಉಮೇಶ್ ಸುಮಾರು 20 ವರ್ಷಗಳ ಆರ್ಯ ಈಡಿಗರ ಸಂಘದ ಅಧ್ಯಕ್ಷರಾಗಿ ಕೆಲಸ ಮಾಡಿದ ಬಿ.ಸ್ವಾಮಿರಾವ್‌ ತಾಲ್ಲೂಕಿನಲ್ಲಿ ಶಾಸಕರಾಗಿದ್ದರು ಆ ಸಂದರ್ಭದಲ್ಲಿ ಸರ್ಕಾರದಿಂದ ಈ ಸಂಘಕ್ಕಾಗಿ ಎಷ್ಟು ಹಣ ತಂದಿದ್ದಾರೆ? ಆ ಹಣವನ್ನು ಏನೂ ಮಾಡಿದ್ದಾರೆ ಎಂಬ ಅನುಮಾನವಿದೆ ಯಾವುದೇ ಕಾರಣಕ್ಕೂ ಸ್ವಂತ ಹಣ ಆರ್ಯ ಈಡಿಗರ ಸಂಘದ ಏಳಿಗೆಗಾಗಿ ಹಾಕಿಲ್ಲ ಸಂಘಕ್ಕೆ ಬರುತ್ತಿದ್ದ ವಾಣಿಜ್ಯ ಮಳಿಗೆಗಳು ಸಂಘಕ್ಕಾಗಿ ಎಷ್ಟು ಹಣ ವ್ಯಯ ಮಾಡಿದ್ದಾರೆ ಎಂದು ಯಾವುದೇ ಲೆಕ್ಕಪತ್ರಗಳನ್ನು ನೀಡಿಲ್ಲ ಅವರು ನವೆಂಬರ್ 31ರಂದು ಸಂಘದಲ್ಲಿ ಅವ್ಯವಹಾರವಾಗಿದೆ ಎಂದು ಸಂಘದ ಎದುರಿನಲ್ಲಿ ಧರಣಿ ನಡೆಸುತ್ತೇನೆ ಎಂದು ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ಅವರು ಧರಣಿ ನಡೆಸಲು ನಮ್ಮದೇನು ಅಭ್ಯಂತರವಿಲ್ಲ ಆದರೆ ಧರಣಿ ನಡೆಸುವುದಕ್ಕಿಂತ ಮುಂಚೆ ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಆರ್ಯ ಈಡಿಗರ ಸಂಘದ ಪೂರ್ಣ ಲೆಕ್ಕಪತ್ರಗಳನ್ನು ನೀಡಿ ನಂತರ ಧರಣಿ ನಡೆಸಲೀ ಇಲ್ಲವಾದರೇ ನಾವೇ ಅವರ ವಿರುದ್ಧ ಧರಣಿ ನಡೆಸುವುದು ಅನಿವಾರ್ಯ ಎಂದರು.

ಈ ಪತ್ರಿಕಾಘೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಯೋಗೇಂದ್ರಪ್ಪ ತ್ರಿಣಿವೆ, ಸಂಘದ ನಿರ್ದೇಶಕರಾದ ಎಂ.ಪಿ ಸುರೇಶ್, ಮಂಡಾನಿ ಮೋಹನ್, ಚಂದ್ರಶೇಖರ, ಮುರುಳಿಧರ, ಶ್ರೀಧರ, ವಾಸುದೇವ, ಎಸ್.ಕೆ ರಾಜು, ಸುಬ್ರಹ್ಮಣ್ಯ, ಬಸವರಾಜ್ ಇನ್ನು ಮುಂತಾದವರು ಉಪಸ್ಥಿತರಿದ್ದರು.

Leave a Comment