ಹೊಸನಗರ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವಕ್ಕೆ ಡೇಟ್ ಫಿಕ್ಸ್

0 5,161

ಹೊಸನಗರ : ಪಟ್ಟಣದ ಗ್ರಾಮ ದೇವತೆ ಶ್ರೀ ಮಾರಿಕಾಂಬಾ ದೇವಿ ಅಮ್ಮನವರ ವರ್ಷಾವಧಿ ಜಾತ್ರಾ ಮಹೋತ್ಸವ 2024ರ ಫೆಬ್ರುವರಿ 6ರಿಂದ ಫೆಬ್ರವರಿ 14ರವರೆಗೆ ಅದ್ದೂರಿಯಾಗಿ ನಡೆಸಲು ಜಾತ್ರಾ ಸಮತಿ ನಿರ್ಧರಿಸಿದ್ದಾರೆ.

ಫೆಬ್ರುವರಿ 6 ರಂದು ಶ್ರೀ ಮಾರಿಕಾಂಬ ದೇವಿ ಅಮ್ಮನವರ ಉತ್ಸವ ಮೂರ್ತಿಯನ್ನು ಹಳೆ ಸಾಗರ ರಸ್ತೆಯ ಶ್ರೀ ದುರ್ಗಾಂಬಾ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ ಅಂದು ಪೂಜೆ ಪುರಸ್ಕಾರ ನೆರವೇರಿಸಿ.

ಅದೇ ದಿನ ರಾತ್ರಿ12 ಗಂಟೆಗೆ ಮಾರಿಗುಡ್ಡದಲ್ಲಿರುವ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಕೊಂಡೊಯ್ದು ಪ್ರತಿಷ್ಠಾಪಿಸಲಾಗುವುದು. ಫೆಬ್ರವರಿ 14ರ ವರೆಗೂ ಶ್ರೀದೇವಿಗೆ ವಿಶೇಷ ಪೂಜೆ ಪುನಸ್ಕಾರ ಸೇವೆಗಳು ನಡೆಯಲಿದೆ.

ಗ್ರಾಮ ದೇವತೆಯಾದ ಶ್ರೀದೇವಿ ಮಾರಿಕಾಂಬಾ ಅಮ್ಮನವರಿಗೆ ಫೆಬ್ರುವರಿ 6ರಂದು ತವರುಮನೆ ಹಳೆಯ ಸಾಗರ ರಸ್ತೆಯ ಶ್ರೀ ದುರ್ಗಾಂಬಾ ದೇವಸ್ಥಾನದಲ್ಲಿ ವಿಶೇಷ ಪ್ರತಿಷ್ಠಾಪನಾ ಪೂಜೆ ಹಾಗೂ ಫೆಬ್ರುವರಿ 14 ರಂದು ರಾತ್ರಿ ಗಂಡನ ಮನೆಯಾದ ಮಾರಿಗುಡ್ಡದ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ರಾತ್ರಿ 12:00 ಗಂಟೆಗೆ ವಿಶೇಷ ವಿಸರ್ಜನಾ ಪೂಜೆ ನಂತರ ಜಾತ್ರೆ ಸಂಪನ್ನಗೊಳ್ಳಲಿದೆ.

ಈ ಅದ್ದೂರಿ ಜಾತ್ರೆ ಪ್ರಯುಕ್ತ ಮನೊರಂಜನೆಗಾಗಿ ಅಮ್ಯೂಸ್ಮೆಂಟ್ ಅವರಿಂದ ಜಾಯಿಂಟ್ ವೀಲ್, ಕೊಲಂಬಸ್, ಬ್ರೇಕ್ ಡ್ಯಾನ್ಸ್, ಡ್ಯೂಮ್ ಡ್ರ್ಯಾಗನ್ ಟ್ರೈನ್, ಮಕ್ಕಳ ರೈಲು, ನೃತ್ಯ, ಸಂಗೀತ, ನಾಟಕ, ಆರ್ಕೆಸ್ಟ್ರಾ ಮೊದಲಾದ ವಿಶೇಷ ಮನೋರಂಜನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಜಾತ್ರಾ ಸಮಿತಿಯವರು ತಿಳಿಸಿದ್ದಾರೆ.

ಇಂದು ಜಾತ್ರೆ ಪೂರ್ವಭಾವಿ ಸಮಿತಿ ಸಭೆ ನಡೆದು ಮೇಲಿನ ತೀರ್ಮಾನ ಕೈಗೊಂಡಿದ್ದು ಈ ಸಭೆಯಲ್ಲಿ ಜಾತ್ರಾ ಸಮಿತಿಯ ಹೆಚ್ ಜಿ ಲಕ್ಷ್ಮಿ ನಾರಾಯಣ ರಾವ್, ಪಿ ಮನೋಹರ, ಟಿ.ಆರ್ ಸುನಿಲ್, ಎಚ್ ಶ್ರೀನಿವಾಸ ಕಾಮತ್, ಎಚ್ ಎನ್ ಶ್ರೀಪತಿ ರಾವ್, ಎನ್ ಶ್ರೀಧರ್ ಉಡುಪ, ಎನ್ ವಿಜೇಂದ್ರ ಶೇಟ್, ವಾದಿರಾಜ್, ಕೆ ಎಸ್ ಗುರುರಾಜ, ಡಿ ಎಂ ಸದಾಶಿವ ಶ್ರೇಷ್ಠಿ, ಟಿ ಎನ್ ಪ್ರಕಾಶ್ ಕುಮಾರ ಗೌಡ, ಹೆಚ್ ಆರ್ ವಿಜಯಾನಂದ, ನಿತ್ಯಾನಂದ ಎಚ್ ಎಲ್ ದತ್ತಾತ್ರೇಯ, ನಾಗರಾಜ, ದತ್ತಾತ್ರಿ ಉಡುಪ, ಮಲ್ಲಿಕಾರ್ಜುನ ಮೊದಲಾದವರು ಉಪಸ್ಥಿತರಿದ್ದರು.

Leave A Reply

Your email address will not be published.