ಶಾಮನೂರು ನಿಧನಕ್ಕೆ ವೀರಶೈವ ಸಮಾಜದಿಂದ ಭಾವಪೂರ್ಣ ಶ್ರದ್ಧಾಂಜಲಿ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ದಾವಣಗೆರೆಯನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಮಲೆನಾಡಿನ ಶ್ರೀಬಸವೇಶ್ವರ ವೀರಶೈವ ಸಮಾಜದವರು ಮತ್ತು ಹೊಸನಗರ ತಾಲ್ಲೂಕು ಆಖಿಲ ಭಾರತ ವೀರಶೈವ ಮಹಾಸಭಾ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ಶ್ರೀಬಸವೇಶ್ವರ ವೀರಶೈವ ಸಮಾಜದವರು ಶಿವಮಂದಿರಲ್ಲಿ ಶಾಮನೂರು ಶಿವಶಂಕರಪ್ಪನವರ ಭಾವಚಿತ್ರವನ್ನು ಇಟ್ಟು ಪುಷ್ಪಾರ್ಚನೆ ಮಾಡುವ ಮೂಲಕ ಅಗಲಿದ ಸಮಾಜದ ಹಿರಿಯ ಚೇತನಕ್ಕೆ ಶ್ರದ್ಧಾಂಜಲಿ ಸಮರ್ಪಿಸಿದರು.

ಹೊಸನಗರ ತಾಲ್ಲೂಕು ಅಖಿಲಭಾರತ ವೀರಶೈವ ಮಹಾಸಭಾ ಆಧ್ಯಕ್ಷ ಎಂ.ಎಸ್.ಉಮೇಶ ಮಾತನಾಡಿ, ನಾಡು ಕಟ್ಟುವ ಕೆಲಸದಲ್ಲಿ ಮುಂಚೂಣಿಯಲ್ಲಿದ್ದ ದೀಮಂತ ವ್ಯಕ್ತಿ.ಅವರ 95ನೇ ವಯಸ್ಸಿನಲ್ಲೂ ವೀರಶೈವ ಸಮಾಜವನ್ನು ಸಂಘಟಿಸುವುದರೊಂದಿಗೆ ಕ್ರಿಯಾಶೀಲರಾಗಿ ಸಾಮಾಜಿಕ ಸೇವಾ ಕಾರ್ಯವನ್ನು ಮಾಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಕ್ತಿಯಾಗಿ ಗುರುತಿಸಿಕೊಂಡ ಅಜಾತ ಶತ್ರುವಾಗಿ ಬೆಳೆದು ಬಂದವರಾಗಿದ್ದಾರೆ. ಆವರ ಅದರ್ಶಗಳು ಇಂದಿನ ಯುವ ಜನಾಂಗಕ್ಕೆ ಪ್ರೇರಕ ಶಕ್ತಿಯಾಗಲಿ ಎಂದು ಹೇಳಿದರು.

ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯ ಉಪಾಧ್ಯಕ್ಷರಾದ ಎಂ.ಆರ್. ಶಾಂತವೀರಪ್ಪಗೌಡರು ಮಸರೂರು, ಜಿ.ಎಂ.ದುಂಡರಾಜಪ್ಪಗೌಡರು ಗವಟೂರು, ಪ್ರಧಾನ ಕಾರ್ಯದರ್ಶಿ ಡಿ.ಎಸ್ ರಾಜಾಶಂಕರ್, ಬಿ.ವಿ.ನಾಗಭೂಷಣ ಬೆಳಂದೂರು, ಬಿ.ಹೆಚ್.ಸ್ವಾಮಿಗೌಡ, ಹೆಚ್.ವಿ.ಈಶ್ವರಪ್ಪಗೌಡ ಹಾರೋಹಿತ್ತಲು, ಡಿ.ಎಸ್.ಕರ್ಣೇಶ್, ಡಿ.ಈ.ಮಧುಸೂದನ್, ನೆವಟೂರು ಈಶ್ವರಪ್ಪ, ಹೆಚ್.ಎಂ. ವರ್ತೇಶಗೌಡ ಹುಗುಡಿ, ಎಲ್.ವೈ.ದಾನೇಶಪ್ಪಗೌಡ, ಜಿ.ಡಿ. ಮಲ್ಲಿಕಾರ್ಜುನ, ಜಂಬಳ್ಳಿ ಶಾಂತಕುಮಾರ್, ಇನ್ನಿತರ ಹಲವರು ಪಾಲ್ಗೊಂಡು ಸಂತಾಪ ವ್ಯಕ್ತಪಡಿಸಿ ಮೃತರಿಗೆ ಭಗವಂತ ಶಾಂತಿ ನೆಮ್ಮದಿ ಕರುಣಿಸಲೆಂದು ಆಶಿಸಿದರು.


ಚಂದ್ರಮೌಳಿ ಸಂತಾಪ ;

ಹೊಸನಗರ ; ಸುಮಾರು 70 ವರ್ಷಗಳ ಕಾಲ ರಾಜಕೀಯ ರಂಗದಲ್ಲಿ ಕಾಂಗ್ರೆಸ್ ಪಕ್ಷದ ಧೀಮಂತ ನಾಯಕನಾಗಿ ಬಡವರು ಬಂಧುವಾಗಿ ಹಾಗೂ ವೀರಶೈವ ಪಂಗಡದ ಹಿರಿಯ ನಾಯಕರು ಹಾಗೂ ವೀರಶೈವ ಜನಾಂಗದ ರಾಷ್ಟ್ರಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಭಾನುವಾರ ಸಂಜೆ ನಿಧನರಾದ ಶಾಮನೂರು ಶಿವಶಂಕರಪ್ಪನವರಿಗೆ ಹೊಸನಗರದ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಚಂದ್ರಮೌಳಿ ಸಂತಾಪ ಸೂಚಿಸಿದ್ದಾರೆ.

Leave a Comment