ಹೊಸನಗರ ಮಾರಿಕಾಂಬಾ ದೇವಸ್ಥಾನ ಸಮಿತಿ ಅಧ್ಯಕ್ಷ ಲಕ್ಷ್ಮಿನಾರಾಯಣರಾವ್ ನಿಧನ

Written by Mahesha Hindlemane

Published on:

ಹೊಸನಗರ ; ಇಲ್ಲಿನ ಪ್ರತಿಷ್ಠಿತ ದೇವಸ್ಥಾನಗಳಲ್ಲಿ ಒಂದಾಗಿರುವ ಮಾರಿಗುಡ್ಡದ ಮಾರಿಕಾಂಬಾ ದೇವಸ್ಥಾನ ಸಮಿತಿ ಅಧ್ಯಕ್ಷ ಹೆಚ್.ಜಿ. ಲಕ್ಷ್ಮಿನಾರಾಯಣರಾವ್ (82) ರವರು ಸೋಮವಾರ ಬೆಳಿಗಿನಜಾವ 2 ಗಂಟೆ ಸುಮಾರಿಗೆ ಆರ್.ಕೆ ರಸ್ತೆಯಲ್ಲಿರುವ ತಮ್ಮ ಸ್ವಗೃಹದಲ್ಲಿ ಅನಾರೋಗ್ಯದ ಕಾರಣ ನಿಧನರಾಗಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇವರು ಪತ್ನಿ ಹಾಗೂ ಮೂವರು ಪುತ್ರರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಸಂತಾಪ ;

ಇವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಕೋಟೆಗಾರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶಶಿಧರ್ ನಾಯ್ಕ್, ಎಲ್ಲ ನಿರ್ದೇಶಕರು, ರಾಮಕೃಷ್ಣ ಮೆಡಿಕಲ್ಸ್ ಮಾಲೀಕ ದತ್ತಾತ್ರೇಯ ಉಡುಪ, ವರ್ತಕರ ಸಂಘದ ನಿಕಟಪೂರ್ವ ಅಧ್ಯಕ್ಷ ವಿಜೇಂದ್ರ ಶೇಟ್, ಹೆಚ್. ಮಹಾಬಲರಾವ್ ಮಹಾಬಲ, ಮಾರಿಕಾಂಬ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಸುನೀಲ್ ಕುಮಾರ್, ಪಿ. ಮನೋಹರ, ಕುಮಾರ ಗೌಡ, ನಾರಾಯಣ ಎ.ಪಿ.ಎಂ, ಶ್ರೀನಿಧಿ ಗೋಪಾಲ್, ಹೆಚ್.ಆರ್. ಸುರೇಶ್, ಕಟ್ಟೆ ಸುರೇಶ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಜಿ. ನಾಗರಾಜ್ ಇನ್ನೂ ಮುಂತಾದವರು ಸಂತಾಪ ಸೂಚಿಸಿದ್ದಾರೆ.

Leave a Comment