ರಿಪ್ಪನ್‌ಪೇಟೆ ; ಅರಸಾಳು ಗ್ರಾಮದ ಪೂಜಾ ಎಂ.ಎನ್. ಅವರು ಗಣಿತಶಾಸ್ತ್ರದಲ್ಲಿ ಪಿ.ಹೆಚ್.ಡಿ ಪದವಿಯನ್ನು ಪಡೆದುಕೊಂಡಿದ್ದಾರೆ. ಕುವೆಂಪು ವಿಶ್ವವಿದ್ಯಾಲಯವು ಅವರು ಸಲ್ಲಿಸಿದ “Theoretical Investigation of Boundary Layer Flow and Heat Transfer over Certain Geometries” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಪಿ.ಹೆಚ್.ಡಿ ಪದವಿ ಪ್ರದಾನ ಮಾಡಿದೆ.
ಈ ಸಂಶೋಧನೆಯನ್ನು ಕುವೆಂಪು ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಎಸ್.ಕೆ. ನರಸಿಂಹಮೂರ್ತಿ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಬೌಂಡರಿ ಲೇಯರ್ ಫ್ಲೋ ಹಾಗೂ ಹೀಟ್ ಟ್ರಾನ್ಸ್‌ಫರ್ ವಿಷಯದಲ್ಲಿ ಕೈಗೊಂಡ ಈ ಅಧ್ಯಯನವು ಗಣಿತಶಾಸ್ತ್ರದ ಸೈದ್ಧಾಂತಿಕ ಸಂಶೋಧನೆಗೆ ಮಹತ್ವದ ಕೊಡುಗೆಯಾಗಿದೆ ಎಂದು ಅಕಾಡೆಮಿಕ್ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ಪೂಜಾ ಎಂ.ಎನ್ ಅವರು ಅರಸಾಳು ನಿವಾಸಿ ಲಕ್ಷ್ಮಣ್ ರಾವ್ ಸಾಕ್ರೆ (ರಾಜು ಟೈಲರ್) ಹಾಗೂ ವಿಜಯಲಕ್ಷ್ಮಿ ಅವರ ಸೊಸೆ, ರೋಹನ್ ಸಾಕ್ರೆ ಅವರ ಪತ್ನಿ ಆಗಿದ್ದು, ಶಿವಮೊಗ್ಗ ನಿವಾಸಿ ನಾಗರಾಜ್ ಮತ್ತು ಶಾರದ ಅವರ ಪುತ್ರಿಯಾಗಿದ್ದಾರೆ. ಅವರ ಈ ಸಾಧನೆಗೆ ಕುಟುಂಬದವರು, ಬಂಧು-ಮಿತ್ರರು ಹಾಗೂ ವಿದ್ಯಾಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





