ಹೊಸನಗರ ; ಜ.20 ರಿಂದ 28ರವರೆಗೆ ಮಾರಿಕಾಂಬಾ ಜಾತ್ರಾ ಮಹೋತ್ಸವ

Written by Mahesha Hindlemane

Published on:

ಹೊಸನಗರ ; ಇಲ್ಲಿನ ಮಾರಿಗುಡ್ಡದಲ್ಲಿರುವ ಶ್ರೀಕ್ಷೇತ್ರ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಜನವರಿ 20 ರಿಂದ 28ರವರೆಗೆ ಅದ್ಧೂರಿ ಮಾರಿಕಾಂಬಾ ದೇವಿ ಜಾತ್ರಾ ಮಹೇೀ ನಡೆಯಲಿದೆ ಎಂದು ಮಾರಿಕಾಂಬಾ ದೇವಿ ಜಾತ್ರಾ ಸಮಿತಿ ಅಧ್ಯಕ್ಷ ಹೆಚ್.ಎಲ್ ದತ್ತಾತ್ರೇಯ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜ.20ರ ಮಂಗಳವಾರ ಮಾರಿಕಾಂಬಾ ದೇವಿಯ ತಾಯಿ ಮನೆಯಾದ ಹಳೇ ಸಾಗರ ರಸ್ತೆಯಲ್ಲಿರುವ ದುರ್ಗಾಂಬಾ ದೇವಸ್ಥಾನದ ಆವರಣದಲ್ಲಿ ಜಾತ್ರೆ ಪ್ರಾರಂಭವಾಗಲಿದ್ದು ಜನವರಿ 21ರಿಂದ 28ರವರೆಗೆ ಹೊಸನಗರದ ಮಾರಿಗುಡ್ಡದಲ್ಲಿರುವ ಮಾರಿಯಮ್ಮನ ಗಂಡನ ಮನೆಯೆಂದು ಖ್ಯಾತಿ ಪಡೆದಿರುವ ಮಾರಿಗುಡಿ ದೇವಸ್ಥಾನದ ಆವರಣದಲ್ಲಿ ಜಾತ್ರೆ ಆರಂಭವಾಗಲಿದೆ ಎಂದು ತಿಳಿಸಿದರು.

ಸಭಾ ಮತ್ತು ಮನರಂಜನೆ ಕಾರ್ಯಕ್ರಮಗಳು ;

ಮಾರಿಗುಡಿ ದೇವಸ್ಥಾನದಲ್ಲಿ ಪ್ರತಿದಿನ ರಾತ್ರಿ 8 ಗಂಟೆಗೆ ವಿಶೇಷ ಪೂಜೆ ನಡೆಯಲಿದ್ದು ಸಂಜೆ ವಿವಿಧ ಮನರಂಜನೆ ಕಾರ್ಯಕ್ರಮಗಳು ನಡೆಯಲಿದೆ. ಜ. 22 ರ ಗುರುವಾರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು ಹೊಸನಗರ-ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಸಮಾರಂಭದ ಅಧ್ಯಕ್ಷತೆಯನ್ನು ದತ್ತಾತ್ರೇಯ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಸಂಸದ ಬಿ.ವೈ ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಆರ್.ಎಂ. ಮಂಜುನಾಥ ಗೌಡ, ಕಲಗೋಡು ರತ್ನಾಕರ್, ನಗರ ಮಹಾದೇವಪ್ಪ ಆಗಮಿಸಲಿದ್ದು ಪದ್ಮಾಶ್ರೀ ಅನಾಥಶ್ರಮದ ವ್ಯವಸ್ಥಾಪಕ ಪ್ರಭಾಕರ್ ಹಾಗೂ ಗಿನ್ನಿಸ್ ವಲ್ಡ್ ರೆಕಾರ್ಡ್ ಕವನಶ್ರೀ, ಯೋಧ ಸ್ಮರಣೆ ಶ್ರೀ ಮಂಜುನಾಥ್ ಜೆ. ಸಂಕೂರು ರವರನ್ನು ಸ್ಮರಿಸಲಿದ್ದಾರೆ. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ಸಂಗೀತ ಸಂಜೆ ;

ಜ‌.23ರ ಶುಕ್ರವಾರ ಭದ್ರಾವತಿ ಸೋನಿ ಮೆಲೋಡಿಸ್ ತಂಡದವರಿಂದ ಆರ್ಕೆಸ್ಟ್ರಾ, ಜ.24ರ ಶನಿವಾರ ಭದ್ರಾವತಿ ಬೀಟ್ಸ್ ಆರ್ಕೆಸ್ಟ್ರಾ, 25ರ ಭಾನುವಾರ ಸಂಜೆ 7 ಗಂಟೆಗೆ ಮನು ಹಲ್ಲಾಡಿಯವರಿಂದ ನಾಟಕ, 26ರ ಸೋಮವಾರ ಸಂಜೆ ಎಂ ತಾಜ್‌ಕೊಪ್ಪ ಇವರಿಂದ 100% ಮ್ಯಾನುವಲ್ ಲೈವ್ ಮ್ಯೂಸಿಕ್ ಆರ್ಕೆಸ್ಟ್ರಾ, 27ರ ಮಂಗಳವಾರ ಝೇಂಕಾರ್ ಮೆಲೋಡಿಸ್ ಭಟ್ಕಳ ಇವರಿಂದ 100% ಮ್ಯಾನುವಲ್ ಲೈವ್ ಮ್ಯೂಸಿಕ್ ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಯಲಿದೆ ಎಂದರು.

ವಿವಿಧ ಆಟೋಟಗಳು ;

ಈ ಬಾರಿ ಮಕ್ಕಳಿಗಾಗಿ ರ‍್ಯಾಂಬೋ ಅಮ್ಯೂಸ್‌ನವರಿಂದ ರೋಮಾಂಚಕಾರಿ ಮೈ ಜುಂ ಎನ್ನುವ ಜಾಯಿಂಟ್‌ವೀಲ್, ಕೋಲಂಬಸ್, ಬ್ರೇಕ್ ಡ್ಯಾನ್ಸ್, ಮಾರುತಿ ಡೂಮ್, ಮಕ್ಕಳ ರೈಲು, ಮ್ಯಾಜಿಕ್ ಷೋ, ಡಾಗ್ ಷೋ ಹಾಗೂ ಇನ್ನೂ ಹತ್ತು ಹಲವಾರು ರೀತಿಯ ವಿಶೇಷ ಮನೋರಂಜನೆಗಳು ಇರುತ್ತದೆ ಎಂದು ತಿಳಿಸಿದ್ದು ಹೊಸನಗರ ತಾಲ್ಲೂಕಿನ ಸಾರ್ವಜನಿಕರು ಹಾಗೂ ತಾಯಿಯ ಭಕ್ತಾರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಕೇಳಿಕೊಂಡರು. ನಂತರ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಮಾರಿಕಾಂಬಾ ಜಾತ್ರ ಕಮಿಟಿಯ ಕಾರ್ಯದರ್ಶಿ ಟಿ.ಆರ್ ಸುನೀಲ್ ಕುಮಾರ್, ಖಜಾಂಚಿ ಪಿ.ಮನೋಹರ್, ದೇವಸ್ಥಾನದ ಮುಖ್ಯಸ್ಥರಾದ ನಾಗರಾಜ್, ವೀರಾಂಜನೆಯ ದೇವಸ್ಥಾನ ಸಮಿತಿಯ ಅಧ್ಯಕ್ಷ ಮಹೇಶ್, ಸದಸ್ಯರಾದ ಹೆಚ್.ಎಲ್ ಅನಿಲ್ ಕುಮಾರ್, ಗಿರೀಶ ಹೆಚ್.ಎಸ್, ಮಹಾಬಲ, ಸತ್ಯನಾರಾಯಣ, ಹೆಚ್.ಎಂ. ನಿತ್ಯಾನಂದ, ಕುಮಾರ ಗೌಡ, ಮಲ್ಲಿಕಾರ್ಜುನ, ಶೀತಲ್ ಶ್ರೀನಿವಾಸ್, ಹಾಡಿಮನೆ ಗೋಪಾಲ್, ವಿಶು, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment