ಎಳ್ಳಮಾವಾಸ್ಯೆ ; ಶ್ರೀ ಕ್ಷೇತ್ರ ರಾಮತೀರ್ಥದ ಶರ್ಮೀಣ್ಯಾವತಿ ನದಿಯಲ್ಲಿ ಮಿಂದೆದ್ದ ಭಕ್ತರು

0 476

ರಿಪ್ಪನ್‌ಪೇಟೆ : ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಂಡ್ಲೆಮನೆಯ ಶ್ರೀ ಕ್ಷೇತ್ರ ರಾಮತೀರ್ಥದ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಗುರುವಾರ 11ನೇ ವರ್ಷದ ವಾರ್ಷಿಕೋತ್ಸವ ಹಾಗೂ 42ನೇ ವರ್ಷದ ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.

ಶರ್ಮೀಣ್ಯಾವತಿ ನದಿಯಲ್ಲಿ ಸಾವಿರಾರು ಭಕ್ತರು ತೀರ್ಥಸ್ನಾನ ಮಾಡಿದರು. ಸುತ್ತಮುತ್ತಲ ಗ್ರಾಮಗಳಾದ ಹುಗುಡಿ, ಮಳಲಿಕೊಪ್ಪ, ಗರ್ತಿಕೆರೆ, ಕೋಡೂರು, ಕರಿಗೆರಸು, ಕುನ್ನೂರು, ನೆಣೆಬಸ್ತಿ, ಕಲ್ಲುಕೊಪ್ಪ, ನಂದಿಗ, ಜಂಬಳ್ಳಿ, ಹೊಳೆಕೇವಿಗಳಿಂದ ತಂಡೋಪತಂಡವಾಗಿ ಬಂದ ಭಕ್ತರು ನದಿಯಲ್ಲಿ ಮಿಂದೆದ್ದು, ನದಿ ತೀರದಲ್ಲಿ ನೆಲೆಸಿರುವ ರಾಮೇಶ್ವರನ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಬೆಳಗ್ಗೆಯಿಂದ ಸಾರ್ವಜನಿಕ ತೀರ್ಥಸ್ನಾನ, ಕೆಂಜಿಗಾಪುರದ ಶ್ರೀಧರ ಭಟ್ ಅವರ ಸಾಂಗತ್ಯದಲ್ಲಿ ಗಣಪತಿ ಪೂಜೆ, ಪುಣ್ಯಾಹ ಮತ್ತು ಕಲಾತತ್ವ ಹೋಮ ಹಾಗೂ ಹಾಲಂದೂರು ಶ್ರೀಧರ್ ಭಟ್, ದೇವಸ್ಥಾನದ ನಿತ್ಯ ಪೂಜೆ ಅರ್ಚಕರಾದ ಎ.ವಿ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಸಾಮೂಹಿಕ ಸತ್ಯನಾರಾಯಣ ವ್ರತ, ಪ್ರಸಾದ ವಿನಿಯೋಗ ನೆರವೇರಿತು ಹಾಗೂ ಜಾತ್ರೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಮಧ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ, ಸಂಜೆ ಹೊಳೆ ದೀಪೋತ್ಸವ ವಿಶೇಷ ಪೂಜೆಗಳು ನೆರವೇರಿದವು.

ದೇವಸ್ಥಾನದ ಪದಾಧಿಕಾರಿಗಳಾದ ಹೆಚ್.ಜಿ ಶೇಖರಪ್ಪ, ಗಂಗಾಧರ, ಕರುಣಾಕರ, ಗಿರೀಶ್, ಶಶಿಕುಮಾರ್, ಚಂದ್ರಶೇಖ‌ರ್, ಶೇಖರಪ್ಪ, ಚಂದ್ರಕಲಾ, ನಾಗರಾಜ್, ಕೊಲ್ಲೂರಪ್ಪ, ಕೃಷ್ಣಯ್ಯ, ರಾಘವೇಂದ್ರ, ಆನಂದ, ಕೇಶವಾಚಾರ್ಯ, ಅಚ್ಚುತಾಚಾರ್ಯ, ಉಮೇಶ್, ಜಯಂತ್ ಕೆ.ವೈ, ಸಂತೋಷ್, ನಾಗೇಶ್, ಗೀತಾ, ಲಲಿತಮ್ಮ ಮತ್ತಿತರರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Leave A Reply

Your email address will not be published.