ರಿಪ್ಪನ್‌ಪೇಟೆ ; ವಿಜೃಂಭಣೆಯಿಂದ ಜರುಗಿದ ನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರ ಪ್ರತಿಷ್ಟಾವರ್ಧಂತಿ ಮಹೋತ್ಸವ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಇಲ್ಲಿನ ತಿಲಕ್ ನಗರದ ಶ್ರೀನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ 23ನೇ ವರ್ಷದ ಪ್ರತಿಷ್ಟಾವರ್ಧಂತಿ ಮಹೋತ್ಸವವು ಗುರುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ವರ್ಧ್ಯಂತ್ಯೋತ್ಸವದ ಅಂಗವಾಗಿ ಶ್ರೀನಾಗದೇವರ ರಕ್ತೇಶ್ವರಿ ಅಮ್ಮನವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಹರತಾಳು ರಾಘವೇಂದ್ರ ಸ್ವಾಮಿ ಮಠದ ಪುರೋಹಿತ ನಾಗರಾಜ್ ಭಟ್ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ರಾಮಚಂದ್ರ ಭಟ್ ಅವರ ನೇತೃತ್ವದಲ್ಲಿ ಶ್ರೀ ನಾಗ ದೇವರ ಸನ್ನಿಧಿಯಲ್ಲಿ ಕಲಾ ಹೋಮ, ನವಕ ಪ್ರಧಾನ ಕಲಶ, ಕಲಶಾಭಿಷೇಕ, ಅಧಿವಾಸ ಹೋಮ ಪವಮಾನ ಅಭಿಷೇಕ, ಆಶ್ಲೇಷ ಬಲಿ ಹಾಗೂ ರಕ್ತೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಶ್ರೀ ದುರ್ಗಾ ಹೋಮ, ಕಲಶಾಭಿಷೇಕ, ಮಹಾಪೂಜೆ ಹಾಗೂ ನಾಗದೇವರಿಗೆ ರಕ್ತೇಶ್ವರಿ ಅಮ್ಮನವರಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ಬೆಳ್ಳಿಗದ್ದೆಯ ಕೆ ಶಂಕರಮೂರ್ತಿ ಮಂಜ ನಾಗಪಾತ್ರಿಯಿಂದ ನಾಗದರ್ಶನದ ಹೇಳಿಕೆ ನಡೆಯಿತು. ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಸಾಮೂಹಿಕ ಅನ್ನಸಂತರ್ಪಣೆ ನೆರವೇರಿತು.

ಜಿಲ್ಲೆಯ ವಿವಿಧೆಡೆಗಳಿಂದ ದೇವರ ದರ್ಶನಕ್ಕೆ ಆಗಮಿಸಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ಈ ಧಾರ್ಮಿಕ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.

ಅಲಸೆ ಶ್ರೀಕ್ಷೇತ್ರ ಶ್ರೀಚಂಡಿಕೇಶ್ವರಿ ಶ್ರೀನಾಗೇಶ್ವರಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮೇಳ ಇವರಿಂದ ದುರ್ಗಾಶಕ್ತಿ ಎಂಬ ಪೌರಾಣಿಕ ಕಾಲಮಿತಿ ಯಕ್ಷಗಾನ ಪ್ರದರ್ಶನ ಜನಮನ ಸೂರೆಗೊಂಡಿತು.

Leave a Comment