Hosanagara | ನಾನು ಸಾಗರ-ಹೊಸನಗರ ಕ್ಷೇತ್ರದ ಶಾಸಕ, ನನ್ನ ಕ್ಷೇತ್ರದಲ್ಲಿ ಯಾವ ರೀತಿ ಅಭಿವೃದ್ಧಿ ಕೆಲಸ ಮಾಡಬೇಕು ಎಂಬುವುದು ನನಗೆ ಗೊತ್ತು. ನನ್ನ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಯಾರು ಮೂಗು ತೋರಿಸುವುದು ಬೇಡ. ನಾನು ನಾಲ್ಕು ವರ್ಷದಲ್ಲಿ ಅಭಿವೃದ್ಧಿ ಮಾಡಿ ತೋರಿಸುತ್ತೇವೆ ಎಂದು ಹೊಸನಗರ-ಸಾಗರ ಕ್ಷೇತ್ರದ ಶಾಸಕ ಹಾಗೂ ಅರಣ್ಯ ಕೈಗಾರಿಕ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ (Beluru Gopalakrishna) ಹೇಳಿದರು.
Read More:ಜಲಪಾತದ ಬಳಿ ಸೆಲ್ಫಿ ತೆಗೆದುಕೊಳ್ಳುವಾಗ ಕಾಲುಜಾರಿ ಕಂದಕಕ್ಕೆ ಬಿದ್ದು ಪ್ರವಾಸಿಗ ಸಾವು !
ಪಟ್ಟಣದ ಆರ್ಯ-ಈಡಿಗ ಸಭಾಭವನದಲ್ಲಿ ಲೋಕಸಭೆ ಹಾಗೂ ವಿಧಾನಪರಿಷತ್ ಚುನಾವಣೆಯ ಸೋಲಿನ ಆತ್ಮ ವಿಮರ್ಶೆ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಭೆಯನ್ನು ಆಯೋಜಿಸಲಾಗಿದ್ದು ಈ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದೆ. ಒಂದು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರದ 5 ಜನಪ್ರಿಯ ಕಾರ್ಯಕ್ರಮಗಳು ಗ್ಯಾರಂಟಿಯನ್ನು ಯೋಜನೆಯನ್ನು ಜನತೆ ನೀಡಲಾಗಿದೆ ಸಾಕಷ್ಟು ಅನುದಾನವನ್ನು ಈಗಾಗಲೇ ನಮ್ಮ ಕ್ಷೇತ್ರಕ್ಕೆ ತರಲಾಗಿದ್ದು ರಸ್ತೆ ಕುಡಿಯುವ ನೀರು ಯೋಜನೆ ಜನತೆಗೆ ನೀಡಲಾಗಿದೆ ಎಂದರು.
ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ತೋರಿಸಲಿದೆ. ಲೋಕಸಭೆ ಚುನಾವಣೆಯಲ್ಲಿ ನಮ್ಮ ಕ್ಷೇತ್ರದಲ್ಲಿ 26 ಸಾವಿರ ಮತಗಳು ಬಿಜೆಪಿಯ ಬಿ.ವೈ ರಾಘವೇಂದ್ರರವರಿಗೆ ಹೆಚ್ಚುವರಿಯಾಗಿ ಬಂದು ಗೆದ್ದಿರಬಹುದು ವಿಧಾನಪರಿಷತ್ ಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಹಣದ ಹೊಳೆಯ ಮೂಲಕ ಗೆದ್ದಿರಬಹುದು ಇದು ಯಾವುದೇ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸೋಲಲ್ಲ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ತಿಳಿದುಕೊಂಡಿರಬಹುದು ನಮ್ಮ ಕುಟುಂಬಕ್ಕೆ ಜನ ಬೆಂಬಲದಿಂದ ಹಾಗೂ ಬಿ.ವೈ ರಾಘವೇಂದ್ರರವರ ಅಭಿವೃದ್ಧಿಯಿಂದ ಮಾಜಿ ಶಾಸಕ ಹರತಾಳು ಹಾಲಪ್ಪನವರ ವರ್ಚಸ್ಸಿನಿಂದ 26 ಸಾವಿರ ಹೆಚ್ಚುವರಿ ಮತ ಬಂದಿದೆ ಎಂದು ಆದರೇ ಇವರು ಖರ್ಚು ಮಾಡಿದ ಹಣದ ಹೊಳೆಯಿಂದ ಗೆದ್ದಿರುವುದು ಎಂದು ನಮ್ಮ ಕ್ಷೇತ್ರದ ಜನತೆಗೆ ಗೊತ್ತಿದೆ ಮುಂದೆ ಬರುವ ಜಿಲ್ಲಾ ಪಂಚಾಯತಿ ತಾಲ್ಲೂಕು ಪಂಚಾಯತಿ ಸ್ಥಳೀಯ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎಷ್ಟು ಬಲಿಷ್ಠರಾಗಿದ್ದಾರೆ ಎಂದು ತಿಳಿಸುವ ಕೆಲಸಕ್ಕೆ ಮುಂದಾಗಿ ಕಾಂಗ್ರೆಸ್ ಪಕ್ಷದ ಎಲ್ಲ ಅಭ್ಯರ್ಥಿಗಳನ್ನು ಗೆಲಿಸಿಕೊಂಡು ಬರುತ್ತೇವೆ.
ಆಗ ನಿಜವಾದ ಈ ಮೂವರ ಬಣ್ಣ ಹೊರಬರಲಿದೆ ಬಿಜೆಪಿ ಪಕ್ಷದ ಧರ್ಮದ ವಿಷಯ ಹಾಗೂ ನರೇಂದ್ರ ಮೋದಿಯ ಬಗ್ಗೆ ಅನುಕಂಪ ತೋರಿಸಿ ಮತ ನೀಡಿದ್ದಾರೆ ಉತ್ತರ ಪ್ರದೇಶದಲ್ಲಿ ರಾಮ ಮಂದಿರದಲ್ಲಿಯೇ ಬಿಜೆಪಿಗೆ ಸೋಲಾಗಿರುವುದು ಕಂಡರೇ ಶ್ರೀ ರಾಮಚಂದ್ರನಿಗೆ ಬಿಜೆಪಿ ಆಡಳಿತ ನೋಡಿ ಬೇಸರವಾಗಿದೆ ಎಂದು ಎದ್ದು ಕಾಣುತ್ತಿದ್ದು ಈಗ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ 6 ತಿಂಗಳು ನಡೆಸುವುದು ಕಷ್ಟ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎರಡು ಸೋಲಿನ ಬಗ್ಗೆ ತಲೆ ಕೆಡಿಸಿಕೊಳ್ಳದೇ ಮುಂದಿನ ಚುನಾವಣೆಗೆ ಸಿದ್ಧರಾಗಿ ಎಂದು ಕರೆ ನೀಡಿದರು.
ಗ್ಯಾರಂಟಿ ಯೋಜನೆಯಿಂದ ಸರ್ಕಾರಕ್ಕೆ ಲಾಭವಿಲ್ಲ :
ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಮಾತನಾಡಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆ ಮುಂದಿನ ಚುನಾವಣೆಗೆ ಪ್ರೇರಣೆಯಾಗುವುದಿಲ್ಲ. ಯಾವುದೇ ಲಾಭವೂ ಇಲ್ಲ ಸರ್ಕಾರದ ಗ್ಯಾರಂಟಿ ಯೋಜನೆಯನ್ನು ಸ್ಥಗಿತಗೊಳಿಸಿ ರಾಜ್ಯದ ಅಭಿವೃದ್ಧಿ ಯೋಜನೆ ಕೈಗೊಳ್ಳಬೇಕೆಂದು ಅಭಿಪ್ರಾಯಪಟ್ಟರು.
ಹೊಸನಗರ ತಾಲ್ಲೂಕು ಬ್ಲಾಕ್ ಕಾಂಗ್ರೇಸ್ಹ ಅಧ್ಯಕ್ಷ ಚಂದ್ರಮೌಳಿ ಮಾತನಾಡಿ, ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ಲೋಕಸಭೆ ಚುನಾವಣೆ ಘೋಷಣೆಯಾದ ದಿನದಿಂದ ಹಗಲಿರುಳು ಪ್ರತಿ ತಾಲ್ಲೂಕಿನ ಬೂತ್‌ಗಳಿಗೆ ಭೇಟಿ ನೀಡಿ ಕಾರ್ಯಕರ್ತರನ್ನು ಮತದಾರರನ್ನು ಮಾತನಾಡಿಸಿ ಮತ ಪಡೆಯುವ ಪ್ರಯತ್ನ ಮಾಡಿದ್ದಾರೆ. ಶಾಸಕರಾದ ಒಂದು ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಮಾಡಿದ್ದಾರೆ. ಸಾಕಷ್ಟು ರಸ್ತೆ ಅಭಿವೃದ್ಧಿ ಮಾಡಿದ್ದಾರೆ. ಕೆರೆ ಅಭಿವೃದ್ಧಿಗೆ, ಸಣ್ಣ ನೀರಾವರಿ ಇಲಾಖೆಯಿಂದ 12 ಕೋಟಿ ರೂಪಾಯಿ ತಂದಿದ್ದಾರೆ. ಸಾಕಷ್ಟು ಶಾಲೆಗಳನ್ನು ರಿಪೇರಿ ಮಾಡಿಸಿದ್ದಾರೆ. ಶಾಲೆಗಳಿಗೆ ಹೊಸ ಬಿಲ್ಡಿಂಗ್ ಮಾಡಿಸಲು ಪ್ರಯತ್ನಿಸಿದ್ದಾರೆ. ಶಾಸಕರು ಏನೂ ಅಭಿವೃದ್ಧಿ ಮಾಡಿಲ್ಲ ಎಂಬ ಅಪಪ್ರಚಾರ ಮಾಡಿ ಮತದಾರರನ್ನು ಒಲಿಸಿಕೊಂಡಿರುವುದು ಹಾಗೂ ಲೋಕಸಭೆ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್, ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿಗಳಾದ ಆಯನೂರು ಮಂಜುನಾಥ್, ಕೆ.ಕೆ ಮಂಜುನಾಥ್ ಸೋಲಿಗೆ ಬೇಳೂರು ಕಾರಣ ಎಂದು ಬಿಜೆಪಿಯವರ ವಾದ ಅಪ್ಪಟ ಸುಳ್ಳು. ನಮ್ಮ ಶಾಸಕರು ಎಂದಿಗೂ ದ್ವೇಷದ ರಾಜಕಾರಣ ಮಾಡಿದವರಲ್ಲ ಸದಾ ಎಲ್ಲರೊಂದಿಗೂ ಪ್ರೀತಿಯಿಂದ ಕಾಣುವವರು ಬಡವರ ಬಗ್ಗೆ ಕಾಳಗಿ ಇರುವ ವ್ಯಕ್ತಿ ಅನಾವಶ್ಯಕವಾಗಿ ಇವರ ಬಗ್ಗೆ ಮಾತಾಡೋದು ಸರಿಯಲ್ಲ ಎಂದರು.
ಈ ಕಾರ್ಯಕ್ರಮದಲ್ಲಿ ಬ್ಲಾಕ್ ಅಧ್ಯಕ್ಷ ಚಂದ್ರಮೌಳಿ ಗೌಡ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕಲಗೋಡು ರತ್ನಾಕರ್, ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ, ಎಂ.ಎಂ ಪರಮೇಶ್, ಜಿಲ್ಲಾಧ್ಯಕ್ಷೆ ಅನಿತಾ, ಎರಗಿ ಉಮೆಶ್, ಟೌನ್ ಘಟಕದ ಅಧ್ಯಕ್ಷ ಗುರುರಾಜ್ ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಜಯಶೀಲಪ್ಪ, ಎಂ.ಪಿ ಸುರೇಶ, ಜಯನಗರ ಗುರು, ಉಬೇದುಲ್ಲ, ಸುಬ್ರಹ್ಮಣ್ಯ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
Read more:Karnataka Rain | 18 ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ ಸಾಧ್ಯತೆ