ಕುವೆಂಪು ವಿ.ವಿ. 35ನೇ ಘಟಿಕೋತ್ಸವದಲ್ಲಿ ಪಿಹೆಚ್‌ಡಿ ಪದವಿ ಪಡೆದ ಕುಣಬಿ ಸಮುದಾಯದ ಮಹಿಳೆ ವಸುಂಧರಿ ಎನ್

Written by Mahesha Hindlemane

Published on:

ರಿಪ್ಪನ್‌ಪೇಟೆ ; ಕುವೆಂಪು ವಿಶ್ವ ವಿದ್ಯಾಲಯದ 35ನೇ ಘಟಿಕೋತ್ಸವದಲ್ಲಿ ಕುಣಬಿ ಸಮುದಾಯದ ಮಹಿಳೆ ವಸುಂಧರಿ ಎನ್ ಪಿಹೆಚ್‌ಡಿ ಪದವಿ ಪಡೆದಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇವರು ಕುವೆಂಪು ವಿಶ್ವ ವಿದ್ಯಾಲಯಕ್ಕೆ ಕನ್ನಡ ವಿಷಯದಲ್ಲಿ ಸಲ್ಲಿಸಿದ ಮಲೆನಾಡಿನ ಕುಣಬಿ ಸಮುದಾಯದ ಅಧ್ಯಯನ (ಶಿವಮೊಗ್ಗ ಜಿಲ್ಲೆಯಲ್ಲಿನ) ಎಂಬ ಮಹಾಪ್ರಬಂಧಕ್ಕೆ 35ನೇ ಘಟಿಕೋತ್ಸವದಲ್ಲಿ ಪಿಹೆಚ್‌ಡಿ ಪದವಿ ಲಭಿಸಿದೆ.

ಇವರಿಗೆ ಸಹ್ಯಾದ್ರಿ ಕಲಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಹಾಲಮ್ಮ ಎಂ ಮಾರ್ಗದರ್ಶನ ಮಾಡಿದ್ದರು.

ವಸುಂಧರಿ, ಹೊಸನಗರ ತಾಲೂಕಿನ ಬಸವಾಪುರ ಗ್ರಾಮದ ಕಮಲಮ್ಮ ನಾರಾಯಣಪ್ಪ ದಂಪತಿಗಳ ಪುತ್ರಿಯಾಗಿದ್ದು ಕುಣಬಿ ಸಮುದಾಯದಲ್ಲಿ ಪಿಹೆಚ್‌ಡಿ ಪದವಿ ಪಡೆದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಸದ್ಯ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Leave a Comment