ಹೊಸನಗರ ಕೊಡಚಾದ್ರಿ ಕಾಲೇಜ್‌ನ ಸಹಾಯಕ ಪ್ರಾಧ್ಯಾಪಕ ಅಂಜನ್‌ ಕುಮಾರ್‌ ಅಮಾನತು ಆದೇಶ ರದ್ದು !

Written by Mahesha Hindlemane

Updated on:

ಹೊಸನಗರ ; ಬೆಂಗಳೂರಿನ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿಯು (KAT), ಸಹಾಯಕ ಪ್ರಾಧ್ಯಾಪಕ ಅಂಜನ್ ಕುಮಾರ ಎಂ. ಅವರ ಮೇಲಿನ ಅಮಾನತು ಆದೇಶವನ್ನು ರದ್ದುಪಡಿಸಿ ಮಹತ್ವದ ಆದೇಶ ಹೊರಡಿಸಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಂಜನ್ ಕುಮಾರ ಎಂ. ಅವರ ವಿರುದ್ಧ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಾಗರ ಕ್ಷೇತ್ರದ ಶಾಸಕ ಪ್ರಾಂಶುಪಾಲರ ಪತ್ರದೊಂದಿಗೆ ಶಿಕ್ಷಣ ಸಚಿವರಿಗೆ ದೂರು ಸಲ್ಲಿಸಿದ್ದರು.

ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ದಿನಾಂಕ 2026ರ ಏ.13 ರಂದು ಅಮಾನತುಗೊಳಿಸಿದ್ದರು. ಆಯುಕ್ತರ ಆದೇಶವನ್ನು ಪ್ರಶ್ನಿಸಿ ಅಂಜನ್‌ ಕುಮಾರ್‌ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು (ಅರ್ಜಿ ಸಂಖ್ಯೆ 2406/2026).

ಪ್ರಕರಣವನ್ನು ವಿಚಾರಣೆಗೊಳಪಡಿಸಿದ ನ್ಯಾಯಮಂಡಳಿಯ ನ್ಯಾಯಾಂಗ ಸದಸ್ಯ ಎಸ್.ವೈ. ವಟವಟಿ ಹಾಗೂ ಆಡಳಿತ ಸದಸ್ಯ ಡಾ. ಅಮಿತಾ ಪ್ರಸಾದ್ ಅವರನ್ನೊಳಗೊಂಡ ಪೀಠವು, ಇಲಾಖೆಯ ಕ್ರಮವನ್ನು ಪರಿಶೀಲಿಸಿ ಅಮಾನತು ಮಾಡಿರುವುದು ಸಮಂಜಸವಲ್ಲ ಎಂದು ಅಭಿಪ್ರಾಯಪಟ್ಟಿದೆ. ಅಮಾನತು ಕ್ರಮ ಕೈಗೊಂಡಿರುವುದು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957 ರ ನಿಯಮ 10(3) ಉಲ್ಲಂಘನೆಯಾಗಿದೆ ಎಂದು ನ್ಯಾಯಮಂಡಳಿ ಸ್ಪಷ್ಟಪಡಿಸಿದೆ. ಅದರಂತೆ, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ಹೊರಡಿಸಿದ್ದ ಅಮಾನತು ಆದೇಶವನ್ನು ನ್ಯಾಯಮಂಡಳಿ ರದ್ದುಪಡಿಸಿದೆ.

Leave a Comment