ರಿಪ್ಪನ್‌ಪೇಟೆ ವಿನಾಯಕ ವೃತ್ತದ ಹೊಸನಗರ ರಸ್ತೆ ಅಗಲೀಕರಣ ಕಾಮಗಾರಿ ; ಎಡಭಾಗಕ್ಕೊಂದು ಅಳತೆ ಬಲಭಾಗಕ್ಕೊಂದು ಅಳತೆ !

Written by Mahesha Hindlemane

Published on:

ರಿಪ್ಪನ್‌ಪೇಟೆ : ಸ್ಥಳೀಯ ಶಾಸಕ ಗೋಪಾಲಕೃಷ್ಣರ ವಿಶೇಷ ಆಸಕ್ತಿಯಿಂದಾಗಿ ರಿಪ್ಪನ್‌ಪೇಟೆಯ ವಿನಾಯಕ ವೃತ್ತವನ್ನು ಹೈಟೆಕ್ ವೃತ್ತವನ್ನಾಗಿಸುವ ಉದ್ದೇಶದಿಂದ ರಾಜ್ಯದ ಗ್ಯಾರಂಟಿ ಯೋಜನೆಯಲ್ಲಿಯೂ 6ನೇ ಗ್ಯಾರಂಟಿ ಯೋಜನೆಯೆಂದು ಬಹಿರಂಗವಾಗಿ ಘೋಷಿಸುವ ಮೂಲಕ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು ಕಾಮಗಾರಿ ಭರದಿಂದ ಸಾಗಿದ್ದರೂ ಕೂಡಾ ಶಿವಮೊಗ್ಗ ಕಡೆಯಿಂದ ಹೊಸನಗರ ಮಾರ್ಗ ಹೋಗುವ ರಸ್ತೆಯ ಎಡಭಾಗ ಮತ್ತು ರಸ್ತೆಯ ಬಲಭಾಗದಲ್ಲಿ ಅಳತೆಯಲ್ಲಿ ಲೋಪದೋಷದಿಂದ ಕೂಡಿದೆ ಎಂದು ಹೊಸನಗರ ರಸ್ತೆಯ ನಿವಾಸಿಗಳು ಆರೋಪಿಸಿ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ಗಾದೆ ಮಾತಿನಲ್ಲಿ ಆರೋಪಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಸಾಗರ-ತೀರ್ಥಹಳ್ಳಿಯ ರಾಜ್ಯ ಹೆದ್ದಾರಿಯ ಸಂಪರ್ಕ ರಸ್ತೆಗೆ ಆನಂದಪುರ ಬಳಿಯ ಯಡೆಹಳ್ಳಿಯಿಂದ ರಿಪ್ಪನ್‌ಪೇಟೆಯ 10 ಕಿ.ಮೀ 20 ಕೋಟಿ ರೂ. ವೆಚ್ಚದ ಸುಸಜ್ಜಿತ ಡಬಲ್ ರಸ್ತೆ ನಿರ್ಮಾಣ ಮತ್ತು ವಿನಾಯಕ ವೃತ್ತದ ನಾಲ್ಕು ತಾಲ್ಲೂಕು ಜಿಲ್ಲೆಗಳನ್ನು ಸಂಪರ್ಕಿಸುವ ಹೃದಯ ಭಾಗದಂತಿರುವ ರಿಪ್ಪನ್‌ಪೇಟೆಯ ತಲಾ ನಾಲ್ಕು ರಸ್ತೆಯ ಆಗಲೀಕರಣ ಮತ್ತು ಒಳಚರಂಡಿ ಡಿವೈಡರ್ ಹೀಗೆ ಪಾದಚಾರಿಗಳಿಗೆ ಓಡಾಡಲು ರಸ್ತೆಯಂಚಿನಲ್ಲಿ ಇಂಟರ್ ಲಾಕ್ ಅಳವಡಿಕೆ ಮತ್ತು ವಿದ್ಯುತ್ ಕಂಬಗಳ ಸ್ಥಳಾಂತರಕ್ಕಾಗಿ ಸುಮಾರು 7.50 ಕೋಟಿ ರೂ. ಶಾಸಕರ ವಿಶೇಷ ಅನುದಾನದಲ್ಲಿ ಹಣ ಬಿಡುಗಡೆ ಮಾಡಿಸಲಾಗಿದ್ದು ಕಾಮಗಾರಿ ಪ್ರಗತಿಯ ಹಂತದಲ್ಲಿದ್ದು ಹೊಸನಗರ ರಸ್ತೆಯಲ್ಲಿ ಕಾಮಗಾರಿ ಭರದಿಂದ ಸಾಗಿದ್ದು ಎಡ-ಬಲ ಭಾಗದ ರಸ್ತೆ ಅಗಲೀಕರಣ ಕಾಮಗಾರಿಯಲ್ಲಿ ಸಾಕಷ್ಟು ಲೋಪ ನಡೆದಿದೆ ಎಂದು ಹೊಸನಗರ ರಸ್ತೆಯ ನಿವಾಸಿಗಳು ತೀವ್ರವಾಗಿ ಖಂಡಿಸಿದ್ದಾರೆ.

ಇನ್ನಾದರೂ ಗುತ್ತಿಗೆದಾರರು ಯಾವುದೇ ಮುಲಾಜಿಲ್ಲದೆ ಎಲ್ಲರಿಗೂ ಸಮಾನವಾಗಿ ರಸ್ತೆಯ ಅಗಲೀಕರಣ ಮಾಡುವ ಮೂಲಕ ಕಾಮಗಾರಿ ನಿರ್ವಹಿಸುವಂತೆ ಶಾಸಕರು ಗಮನಹರಿಸಿ ಕ್ರಮ ಕೈಗೊಳ್ಳವರೆ ಕಾದು ನೋಡಬೇಕಾಗಿದೆ.

Leave a Comment