Hosanagara

ಕೊಡಚಾದ್ರಿಗೆ ಟ್ರಕಿಂಗ್ ತೆರಳಿದಾಗ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಬಾಮಾ ಹರೀಶ್​​ ಪುತ್ರ ಉಲ್ಲಾಸ್ ಹೃದಯಾಘಾತದಿಂದ ನಿಧನ !

ಹೊಸನಗರ : ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಹಾಗೂ ಕರ್ನಾಟಕ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಬಾಮಾ ಹರೀಶ್​​ ಪುತ್ರ ಉಲ್ಲಾಸ್ (28) ಹೃದಯಾಘಾತದಿಂದ ನಿಧನರಾಗಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಉಲ್ಲಾಸ್ ಅವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕೊಡಚಾದ್ರಿ ಗಿರಿಗೆ ಟ್ರಕ್ಕಿಂಗ್‌ಗೆ ತೆರಳಿದ್ದಾಗ ಹಠಾತ್ ಹೃದಯಾಘಾತಕ್ಕೆ ಒಳಗಾಗಿದ್ದು ತಕ್ಷಣವೇ ನಗರ ಆಸ್ಪತ್ರೆಗೆ ಕರೆತರಲಾಗಿತ್ತು ನಂತರ ಹೊಸನಗರ ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಮೃತ ಉಲ್ಲಾಸ್ ಅವರ ಮದುವೆ ಡಿಸೆಂಬರ್ ತಿಂಗಳಲ್ಲಿ ನಿಶ್ಚಿತವಾಗಿತ್ತು. ಚಂದನಾ ಗೌಡ ಅವರೊಂದಿಗೆ ನಿಶ್ಚಿತಾರ್ಥಗೊಂಡಿದ್ದರು. ಕುಟುಂಬದ ಸಮ್ಮುಖದಲ್ಲಿ ಸರಳವಾಗಿ ದೀಪದ ಶಾಸ್ತ್ರ ನೆರವೇರಿಸಲಾಗಿತ್ತು.

ಕೊಡಚಾದ್ರಿ ಬೆಟ್ಟಕ್ಕೆ ಗೆಳೆಯ ಹಾಗೂ ಸಂಬಂಧಿಯೂ ಆದ ಸುರೇಶ್ ಎಂಬಾತನೊಂದಿಗೆ ಇಂದು ಬೆಳಗ್ಗೆ 6:30ಕ್ಕೆ ಬೆಂಗಳೂರಿನ ಚಾರಣ ಎಂಬ ಸಂಸ್ಥೆಯ ಟಿಟಿ ವಾಹನದಲ್ಲಿ ಪ್ಯಾಕೇಜ್ ಟೂರ್ ಬಂದಿದ್ದು 10 ಗಂಟೆ ಸುಮಾರಿಗೆ ಉಲ್ಲಾಸ್ ಹಠಾತ್ತನೆ ಕುಸಿದು ಬಿದ್ದಿದ್ದಾರೆ. ಅವರಿಗೆ ಆ ವೇಳೆ ಹೃದಯಾಘಾತ ಸಂಭವಿಸಿದೆ. ಸದ್ಯ ಮೃತದೇಹವನ್ನು ಹೊಸನಗರ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>