ನೋಟಿಸ್ ನೀಡದೆ ಏಕಾಏಕಿ ಮನೆ ತೆರವು ಆರೋಪ ; ಹೊಸನಗರ ಅರಣ್ಯ ಇಲಾಖೆ ಕಛೇರಿ ಮುಂದೆ ಧರಣಿ

Written by Mahesha Hindlemane

Published on:

ಹೊಸನಗರ : ಅರಣ್ಯ ಇಲಾಖೆ ಯಾವುದೇ ಮುನ್ಸೂಚನೆ ಹಾಗೂ ನೋಟಿಸ್ ನೀಡದೆ ಮೇ 28ರಂದು ಏಕಾಏಕಿ ಮನೆಯನ್ನು ತೆರವು ಮಾಡಿದ್ದಾರೆಂದು ಆರೋಪಿಸಿ ಮನೆಯ ಮಾಲೀಕರು ಹಾಗೂ ಗ್ರಾಮಸ್ಥರು ಇಲ್ಲಿನ ಅರಣ್ಯ ಇಲಾಖೆ ಕಚೇರಿ ಮುಂದೆ ಧರಣಿ ನಡೆಸಿದ ಘಟನೆ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಹಿನ್ನಲೆ ;

📢 Stay Updated! Join our WhatsApp Channel Now →

ಹೊಸನಗರ ತಾಲ್ಲೂಕು ಕಸಬಾ ಹೋಬಳಿ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಗೋಡಿ ಗ್ರಾಮದ ಸರ್ವೆ ನಂಬರ್ 7ರಲ್ಲಿ ನಾಗರಾಜ ಎಂಬುವವರು ವಾಸವಿದ್ದ ಮನೆಯನ್ನು ಯಾರು ಇಲ್ಲದ ಸಮಯದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ನೋಟಿಸ್ ನೀಡದೆ ಏಕಾಏಕಿ ತೆರವುಗೊಳಿಸಿದ್ದಾರೆ ಎಂದು ಆರೋಪಿಸಿ ಮನೆಯ ಮಾಲೀಕ ನಾಗರಾಜ್ ಹಾಗೂ ಗ್ರಾಮಸ್ಥರು ಅರಣ್ಯ ಇಲಾಖೆಯ ಮುಂಭಾಗ ಧರಣಿ ನಡೆಸಿದ್ದಾರೆ.

ನಾವು ಸುಮಾರು 40 ವರ್ಷಗಳಿಂದ ಈ ಜಾಗದಲ್ಲಿ ವಾಸವಿದ್ದೇವೆ. ನಮಗೆ ಮನೆ ಕಂದಾಯ ಡಿಮ್ಯಾಂಡ್ ಹಾಗೂ ಇಲ್ಲಿ ವಾಸವಗಿರುವುದಕ್ಕೆ ಎಲ್ಲ ದಾಖಲೆಗಳು ನಮ್ಮ ಬಳಿ ಇದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ನಮ್ಮ ಮನೆಯ ಮೇಲೆ ದಾಳಿ ಮಾಡಿ ಮನೆಯನ್ನು ಧ್ವಂಸ ಮಾಡಿ ಕಿತ್ತು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಕೂಲಿ ಮಾಡಿ ಜೀವನ ಸಾಗಿಸುವ ಬಡ ಕುಟುಂಬಕ್ಕೆ ವಾಸಿಸಲು ಮನೆಯೇ ಇಲ್ಲದಂತಾಗಿದ್ದು ಮುಂದೆ ಬರುವುದು ಮಳೆಗಾಲವಾಗಿದ್ದು ನಮಗೆ ವಾಸಿಸಲು ಯಾವುದೇ ಮನೆಯಿಲ್ಲ. ಬಡ ಕುಟುಂಬಕ್ಕೆ ನ್ಯಾಯ ಕೊಡಬೇಕೆಂದು ಆಗ್ರಹಿಸಿದ್ದಾರೆ.

“ಕೆಲ ವರ್ಷಗಳಿಂದ ಯಾರು ವಾಸವಿರದ ಜಾಗ ಇದಾಗಿದ್ದು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಬರುತ್ತದೆ. ಕುಟುಂಬವು ಪುನಃ ಮೂಲ ನೆಲೆಗೆ ಬಂದು ಇತ್ತೀಚೆಗೆ ಶೆಡ್ ತರಹದ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಕೇವಲ ಹಳೆ ಮನೆಯ ನೆಲಗಟ್ಟು (ಫೌಂಡೇಶನ್), ತೆಂಗಿನಮರ ಸಾಕ್ಷಿಯಿಂದ ದೃಢೀಕರಿಸೋದು‌ ಅಸಾಧ್ಯ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.”

Leave a Comment