ರಿಪ್ಪನ್‌ಪೇಟೆ ಜಿ.ಎಸ್.ಬಿ. ಸಮುದಾಯದಲ್ಲಿ ಶ್ರೀವಿಷ್ಣು ಸಹಸ್ರನಾಮ ಪಾರಾಯಣ ಕಾರ್ಯಕ್ರಮ ಭಕ್ತಿಯಿಂದ ಸಂಪನ್ನ

Written by Mahesha Hindlemane

Published on:

ರಿಪ್ಪನ್‌ಪೇಟೆ : ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀರಾಮ ಮಂದಿರದಲ್ಲಿ ಭಾನುವಾರ ಜೇಷ್ಟ ಮಾಸದ ಅಂಗವಾಗಿ ಶ್ರೀವಿಷ್ಣು ಸಹಸ್ರನಾಮ ಪಠಣ ಹಾಗೂ ವಿಶೇಷ ಪೂಜಾ ಕಾರ್ಯಕ್ರಮ ಭಕ್ತಿಭಾವದಿಂದ ಆಯೋಜಿಸಲಾಯಿತು. ಈ ಧಾರ್ಮಿಕ ಕಾರ್ಯಕ್ರಮವು ಲೋಕಕಲ್ಯಾಣಾರ್ಥವಾಗಿ ನೆರವೇರಿತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಶ್ರೀ ವಿಷ್ಣು ಸಹಸ್ರನಾಮ ಪಠಣದಲ್ಲಿ ಭಕ್ತರು ಶ್ರೀ ವಿಷ್ಣು ಅಷ್ಟೋತ್ತರ ಮತ್ತು ಶ್ರೀ ಲಕ್ಷ್ಮಿ ಅಷ್ಟೋತ್ತರ ಪಾರಾಯಣವನ್ನು ಶ್ರದ್ಧೆಯಿಂದ ನೆರವೇರಿಸಿದರು. ಸಮಸ್ತ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಸದಸ್ಯರು ಬಾಂಧವರ ಕ್ಷೇಮಾಭಿವೃದ್ದಿ, ಹಿಂದೂ ರಾಷ್ಟ್ರದ ಪ್ರಗತಿ ಮತ್ತು ಶ್ರೇಯಸ್ಸಿಗಾಗಿ ಶ್ರೀ ಮಹಾವಿಷ್ಣುವಿನ ಮುಂದೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಕಾರ್ಯಕ್ರಮದ ನಂತರ ಭಜನೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ಹಾಗೂ ಸಮಾಜಬಾಂಧವರಿಗೆ ಸಾಮೂಹಿಕ ಅನ್ನಸಂತರ್ಪಣೆ ಜರುಗಿತು.

ಈ ಸಂದರ್ಭದಲ್ಲಿ ಜಿ.ಎಸ್.ಬಿ. ಸಮುದಾಯದ ಅಧ್ಯಕ್ಷ ಗಣೇಶ್ ಕಾಮತ್, ರಾಮದಾಸಭಟ್ ಡಿ, ನರಸಿಂಹ ಕಾಮತ್, ದೀಪಕ್ ಭಗತ್, ಜೆ.ರಾಧಾಕೃಷ್ಣ, ಹರೀಶ್ ಪ್ರಭು, ರಾಘವೇಂದ್ರ ಕಾಮತ್, ಕಸ್ತೂರಿನಾಯಕ್, ಶಕುಂತಳಾ ಪ್ರಭು, ಸಂಧ್ಯಾ ಕಾಮತ್, ಯಶೋಧ ಶೆಣೈ, ಶುಭ ಶಶಿಧರ್ ಪೈ, ಪೂರ್ಣಿಮಾ ಕಿಣಿ, ಸಂಧ್ಯಾ ಪ್ರಭು ಮತ್ತು ಸಮಾಜದ ಅನೇಕ ಸದಸ್ಯರು ಭಾಗವಹಿಸಿದ್ದರು.

Leave a Comment