ಹೊಸನಗರ

ಅತಿಯಾದ ರಾಸಾಯನಿಕ ಗೊಬ್ಬರ ಬಳಕೆ ಗಿಡಗಳಿಗೆ ಹಾನಿಕಾರಕ ; ಮಂಜುನಾಥ್

ಅತಿಯಾದ ರಾಸಾಯನಿಕ ಗೊಬ್ಬರ ಬಳಕೆ ಗಿಡಗಳಿಗೆ ಹಾನಿಕಾರಕ ; ಮಂಜುನಾಥ್ – InShot 20260724 151003648

ಹೊಸನಗರ : ಅತಿಯಾದ ರಾಸಾಯನಿಕ ಗೊಬ್ಬರವನ್ನು ಗಿಡಗಳಿಗೆ ಬಳಸುವುದರಿಂದ ಗಿಡಗಳ ಮೇಲೆ ದುಷ್ಪರಿಣಾಮಗಳು ಬೀರುತ್ತದೆ. ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಗಿಡಗಳಿಗೆ ಬೇಕಾಗುವ ರೀತಿಯಲ್ಲಿ ಗೊಬ್ಬರಗಳನ್ನು ಸಿಂಪಡಿಸಿ ಎಂದು ನುರಿತ ವಿಜ್ಞಾನಿ ಮಂಜುನಾಥ್‌ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಪುರಪ್ಪೆಮನೆ ಗ್ರಾಮದಲ್ಲಿ ಅಮೃತ್ ಆರ್ಗ್ಯಾನಿಕ್ ಫರ್ಟಿಲೈಸರ್ಸ್ಸ್ ಮಲ್ಲಾಡಿಹಳ್ಳಿ (ಹೊಳಲ್ಕೆರೆ ತಾಲ್ಲೂಕು) ವತಿಯಿಂದ ರೈತರ ಸಭೆಯನ್ನು ನಡೆಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಬೆಳೆಗಳ ಸಮಗ್ರ ನಿರ್ವಹಣೆ ಕೀಟ ಹಾಗೂ ರೋಗಗಳ ಗುರುತಿಸುವಿಕೆ ಮತ್ತು ಅವುಗಳ ವೈಜ್ಞಾನಿಕ ನಿಯಂತ್ರಣ ಕ್ರಮಗಳ ಕುರಿತು ರೈತರಿಗೆ ಸಮಗ್ರ ಮಾಹಿತಿಯನ್ನು ನೀಡಿ ಅಮೃತ್ ಸಂಸ್ಥೆಯ ಸಾವಯುವ ಉತ್ಪನ್ನಗಳ ಉಪಯೋಗಗಳ ಬಗ್ಗೆ ಸಮಗ್ರವಾಗಿ ವಿವರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಹೊಸನಗರ ತಾಲ್ಲೂಕು ಪುರಪ್ಪೆಮನೆ ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್, ಉಪಾಧ್ಯಕ್ಷ ಬಿ.ಟಿ ಸತ್ಯನಾರಾಯಣ, ಕಾರ್ಯದರ್ಶಿ ಅರವಿಂದ್, ಕಂಪನಿಯ ಉದ್ಯೋಗಿ ವಿಜ್ಞಾನಿ ಮಂಜುನಾಥ್, ಭೂ ವಿಜ್ಞಾನಿ ಅನಂತ್‌ಕುಮಾರ್ ಪಾಟೀಲ್, ಮಾರ್ಕೆಟಿಂಗ್ ಡೈರೇಕ್ಟರ್ ವಿನಯ್ ಕಚ್ಚಿಗೆಬೈಲು, ಅನಿಲ್ ಗೌಡ, ಹರೀಶ್ ಹಾಗೂ ನೂರಾರು ಸಂಖ್ಯೆಯ ರೈತರು ಉಪಸ್ಥಿತರಿದ್ದರು,

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]