ಹುಂಚ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳ ಕೊರತೆ ಪರಿಹರಿಸುವಂತೆ ಆಗ್ರಹಿಸಿ ಸಚಿವರಿಗೆ ಮನವಿ

Written by Mahesha Hindlemane

Published on:

ರಿಪ್ಪನ್‌ಪೇಟೆ : ಹುಂಚ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಲವು ಸಿಬ್ಬಂದಿಗಳ ಕೊರತೆ ಇದ್ದು ಅದನ್ನು ತಕ್ಷಣ ಭರ್ತಿ ಮಾಡುವಂತೆ ಹುಂಚ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಆರೋಗ್ಯ ರಕ್ಷಾ ಸಮಿತಿ ಸದಸ್ಯೆ ಯಶಸ್ವತಿ ವೃಷಭರಾಜ್ ಜೈನ್ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್‌ರಿಗೆ ಮನವಿ ನೀಡುವ ಮೂಲಕ ಆಗ್ರಹಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಟಾಪ್ ನರ್ಸ, ಹೆಲ್ತ್ಇನ್ಸ್ಪೆಕ್ಟರಿಂಗ್, ಅಫೀಸರ್ ಪಿ.ಹೆಚ್.ಸಿ.ಓ ಸಬ್ ಸೆಂಟರ್ ಗ್ರೂಪ್ ಡಿ.ಪೋಸ್ಟ್ ಫಾರ್ಮಸಿ ಆಫೀಸರ್ ಹುದ್ದೆಗಳು ಖಾಲಿಯಾಗಿದ್ದು ಅಲ್ಲದೆ ಆಸ್ಪತ್ರೆಯ ಮೂಲಸೌಕರ್ಯಗಳನ್ನು ಕಲ್ಪಸಲು ಹೆಚ್ಚಿನ ಅನುದಾನವನ್ನು ಇಲಾಖೆಯಡಿ ಕಲ್ಪಿಸುವಂತೆ ಮನವಿ ವಿವರಿಸಿ ಸಚಿವರನ್ನು ಒತ್ತಾಯಿಸಿದರು.

ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸುಮಾರು 10-15 ಸಾವಿರ ಜನಸಂಖ್ಯೆಯನ್ನು ಹೊಂದಿದ್ದು ಜೈನರ ಪವಿತ್ರ ಯಾತ್ರಾ ಸ್ಥಳವಾಗಿರುವ ಹೊಂಬುಜ ಜೈನಮಠಕ್ಕೆ ನಿತ್ಯ ದೇಶ-ವಿದೇಶಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜಗನ್ಮಾತೆ ಪದ್ಮಾವತಿ ಅಮ್ಮನವರ ದರ್ಶನಕ್ಕೆ ಬಂದು ಹೋಗುತ್ತಿದ್ದಾರೆ. ಹುಂಚ ಆಸ್ಪತ್ರೆಯ ಸುತ್ತಮುತ್ತ ಸುಮಾರು 22 ಕ್ಕೂ ಆಧಿಕ ಪ್ರಾಥಮಿಕ ಹಿರಿಯ ಮತ್ತು ಕಿರಿಯ ಪಾಠಶಾಲೆಗಳು 30ಕ್ಕೂ ಅಧಿಕ ಅಂಗನವಾಡಿ ಕೇಂದ್ರಗಳು 5 ಪ್ರೌಢಶಾಲೆಗಳು ಸೇರಿದಂತೆ 35 ರಿಂದ 40 ಹಳ್ಳಿಗಳು ಸೇರಿದ್ದು ಈ ಆರೋಗ್ಯ ಕೇಂದ್ರಕ್ಕೆ ತಪಾಸಣೆಗೆ ಜನರು ಬಂದು ಹೋಗುತ್ತಾರೆ. ಆದರೆ ಈ ಆಸ್ಪತ್ರೆಯಲ್ಲಿ ಕೆಲವೊಂದು ಕುಂದುಕೊರತೆಗಳಿದ್ದು ಆಸ್ಪತ್ರೆಗೆ ಬಂದ ರೋಗಿಗಳಿಗೆ ಸರಿಯಾಗಿ ತಪಾಸಣೆ ದೊರೆಯದೆ ದೂರದೂರುಗಳಿಗೆ ತೆರಳಬೇಕಾದ ಅನಿರ್ವಾತೆ ಎದುರಾಗಿದೆ. ಆದ್ದರಿಂದ ತಾವು ನಮ್ಮೂರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದರೊಂದಿಗೆ ಸಿಬ್ಬಂದಿಗಳ ಕೊರತೆ ಪರಿಹರಿಸುವಂತೆ ಸಚಿವ ಯು.ಟಿ.ಖಾದರ್‌ರಿಗೆ ಮನವಿ ನೀಡುವ ಮೂಲಕ ಆಗ್ರಹಿಸಿದ್ದಾರೆ.

Leave a Comment