ಅಬ್ಬಿ ಜಲಪಾತದಲ್ಲಿ ಕಾಲುಜಾರಿ ನೀರು ಪಾಲಾಗಿದ್ದ ಯುವಕನ ಶವ ಪತ್ತೆ !

Written by Mahesha Hindlemane

Published on:

MALNAD TIMES | 24 JUN 2024

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

HOSANAGARA | ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ತಲಾಸಿ ಅಬ್ಬಿ ಜಲಪಾತದ ಬಳಿ ಫೋಟೋ ತೆಗೆಯುವ ವೇಳೆ ಕಾಲುಜಾರಿ ಬಿದ್ದು ನೀರು ಪಾಲಾಗಿದ್ದ ಯುವಕನ ಶವ ಇಂದು ಬೆಳಗ್ಗೆ ಪತ್ತೆಯಾಗಿದೆ.

ನಿನ್ನೆ ಮಧ್ಯಾಹ್ನದಿಂದ ನಗರ ಠಾಣೆ ಪಿಎಸ್‌ಐ ರಮೇಶ್ ನೇತೃತ್ವದಲ್ಲಿ ಹೊಸನಗರ ಅಗ್ನಿಶಾಮಕ ದಳ, ಸ್ಥಳೀಯರಿಂದ ತೀವ್ರ ಶೋಧ ನಡೆಯಿತಾದರೂ ನೀರುಪಾಲಾಗಿದ್ದ ಬಳ್ಳಾರಿ ಮೂಲದ ವಿನೋದ್ (26) ಶವ ಪತ್ತೆಯಾಗಿರಲಿಲ್ಲ.

ವಿನೋದ್ ನೀರು ಪಾಲಾಗುವ ಮುನ್ನ ತೆಗೆದ ಫೋಟೋ

ಸೋಮವಾರ ಬೆಳಗ್ಗೆ ಮುಳುಗು ತಜ್ಞರಾದ ಈಶ್ವರ ಮಲ್ಪೆ ಮತ್ತು ತಂಡ, ಕೋಟ ಜೀವನ್ ಮಿತ್ರ, ನಾಗರಾಜ ಪುತ್ರನ್, ಅವರನ್ನು ಕರೆಸಿ ಶೋಧ ಕಾರ್ಯ ನಡೆಸಿದ ಬಳಿಕ ನೀರಿನೊಳಗೆ ಕಲ್ಲಿನ ಪೊಟರೆಯಲ್ಲಿ ಸಿಲುಕಿದ್ದ ವಿನೋದ್ ಮೃತದೇಹವನ್ನು ಹೊರ ತೆಗೆಯಲಾಯಿತು.

ನಗರ ಸಂಯುಕ್ತ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಆತನ ಹುಟ್ಟೂರು ಬಳ್ಳಾರಿ ಜಿಲ್ಲೆ ಮಿಂಚೇರಿಗೆ ತೆಗೆದುಕೊಂಡು ಹೋಗಲಾಯಿತು.

ಬೆಂಗಳೂರಿನಿಂದ 12 ಜನ ಪ್ರವಾಸಿಗರು ಯಡೂರು ಅಬ್ಬಿ ಫಾಲ್ಸ್ ವೀಕ್ಷಣೆಗೆ ನಿನ್ನೆ ಬಂದಾಗ ಈ ಅವಘಡ ಸಂಭವಿಸಿತ್ತು.

Leave a Comment