ಕರ್ನಾಟಕ ಸರ್ಕಾರದಿಂದ ಅಂಗವಿಕಲರ ಆರೈಕೆದಾರರಿಗೆ ಮಾಸಿಕ 1,000 ರೂ ಗಳ ಪ್ರೋತ್ಸಾಹ ಧನ ನೀಡಿಕೆ ಆದೇಶವನ್ನು ಹೊರಡಿಸಿದ್ದಾರೆ.
ಅಂಗವಿಕಲತೆಯನ್ನು ಹೊಂದಿರುವಂತಹ ವಿಶೇಷಚೇತನ ಅಂಗವಿಕಲರ ಆರೈಕೆದಾರರಿಗೆ 1000 ರೂ ಗಳ ಪ್ರೋತ್ಸಾಹಧನ ನೀಡುತ್ತಾರೆನ್ನುವ ಸಂಪೂರ್ಣವಾದ ಮಾಹಿತಿಯನ್ನು ಓದಿ.
ರಾಜ್ಯದಲ್ಲಿ ಅಂಗವೈಕಲ್ಯದಿಂದ ಬಳಲುತ್ತಿರುವ ವಿಶೇಷಚೇತನ ವ್ಯಕ್ತಿಗಳ ಆರೈಕೆದಾರರಿಗೆ ಪ್ರತಿ ತಿಂಗಳು 1000 ರು ಪ್ರೋತ್ಸಾಹ ಧನ ನೀಡಲು ತಕ್ಷಣ ಫಲಾನುಭವಿಗಳ ಆಯ್ಕೆ ಮಾಡುವಂತೆ ಸರ್ಕಾರ ಆದೇಶವನ್ನು ಹೊರಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು 2024 -25ನೇ ಸಾಲಿನ ಬಜೆಟ್‌ನಲ್ಲಿ ಬಾಲ್ಯದಲ್ಲಿ ಕಂಡುಬರುವಂತಹ ಚಲನೆಯ ಅಸ್ವಸ್ಥತೆ ಅಂತಂದ್ರೆ ಸೆರೆಬ್ರಲ್ ಪಾಲ್ಸಿ ಅನುವಂಶಿಕ ಸ್ನಾಯು ದೌರ್ಬಲ್ಯ ಮಲ್ಟಿಪಲ್ ಜನರಸ್ ಹಾಗೂ ಪಾರ್ಕಿನ್‌ಸನ್ ಕಾಯಿಲೆಗಳಿಂದ ಬಳಲುತ್ತಿರುವವರ ಆರೈಕೆದಾರರಿಗೆ ಪ್ರತಿ ತಿಂಗಳು ₹1000 ಪಿಂಚಣಿ ರೂಪದಲ್ಲಿ ಧನ ಸಹಾಯವನ್ನು ಘೋಷಣೆಯನ್ನು ಮಾಡಿದ್ದಾರೆ.

ಇದರ ಜೊತೆಗೆ ಹೊಸ ಯೋಜನೆಯಲ್ಲಿ ಬೆನ್ನುಹುರಿ ಅಪಘಾತ, ಅಂಗವಿಕಲರು, ಬುದ್ಧಿಮಾಂದ್ಯತೆಯ ಎರಡು ಬಗೆಯ ಅಂಗವಿಕಲತೆಯನ್ನು ಸೇರಿಸಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಬೆನ್ನುಹುರಿ, ಅಪಘಾತ, ಅಂಗವಿಕಲರು ಹಾಗೂ ಬುದ್ಧಿಮಾಂದ್ಯತೆ ಕುರಿತ ಪ್ರಸ್ತಾವನೆಗೆ ತಾತ್ಕಾಲಿಕ ತಡೆ ನೀಡಲಾಗಿರುತ್ತದೆ.
ಮಲ್ಟಿಪಲ್ ಜನರಸ್ ಹಾಗೂ ಪಾರ್ಕಿನ್‌ಸನ್ ಕಾಯಿಲೆಯಿಂದ ಬಳಲುತ್ತಿರುವಂತಹ ವ್ಯಕ್ತಿಗಳ ಆರೈಕೆದಾರರಿಗೆ ಪ್ರತಿ ತಿಂಗಳು 1000 ರೂ ಗಳ ಪಿಂಚಣಿ ನೀಡಲಾಗುತ್ತದೆ. ಯಾರ್ಯಾರು ಈ ನಾಲ್ಕು ರೀತಿಯ ಅಂಗವಿಕಲತೆಯೊಂದಿಗೆ ವಿಶೇಷ ಚೇತನರ ಆರೈಕೆದಾರರು ಇದಕ್ಕೆ ಅರ್ಜಿಗಳನ್ನು ಹಾಕಬಹುದಾಗಿದೆ.
ಅರ್ಜಿಗಳಿಗೆ ಬೇಕಾಗಿರುವ ದಾಖಲೆಗಳು ಯಾವುವು ಅನ್ನೋದನ್ನ ನೋಡೋದಾದ್ರೆ, ಅಂಗವಿಕಲತೆಯ ಪ್ರಮಾಣ ಶೇ. 75 ಮತ್ತು ಅದಕ್ಕಿಂತ ಹೆಚ್ಚಾಗಿರಬೇಕು. ವಯಸ್ಸಿನ ಮಿತಿ ಇರುವುದಿಲ್ಲ. ಯಾವುದೇ ವಯಸ್ಸಿನವರು ಬೇಕಾದರೂ ಅರ್ಜಿ ಹಾಕಬಹುದು. ಹಾಗೇನೇ ಇದಕ್ಕೆ ಆದಾಯ ಮಿತಿ ಸಹ ಇರುವುದಿಲ್ಲ.
Read More:Ration Card | ಹೊಸ ರೇಷನ್ ಕಾರ್ಡ್ ಅಥವಾ ತಿದ್ದುಪಡಿಗೆ ಅರ್ಜಿ ಪ್ರಾರಂಭ !ಅರ್ಜಿ ಸಲ್ಲಿಸುವುದು ಹೇಗೆ ?
ಅವರು MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 2019ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಅವರು ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಅವರು ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.