HOSANAGARA | ಇಲ್ಲಿನ ಮಂಡಾನಿ ಎಲೆಕ್ಟ್ರಿಷಿಯೆನ್ಸ್ ಮಾಲೀಕ ಧನಂಜಯ್ ಎಂಬುವವರ ಬ್ಯಾಂಕ್ ಖಾತೆಯಲ್ಲಿದ್ದ ಬರೋಬ್ಬರಿ 3,89,544 ಹಣ ಮಂಗಮಾಯವಾಗಿದ್ದು ಈ ಬಗ್ಗೆ ಹೊಸನಗರದ ಠಾಣೆಯಲ್ಲಿ ದೂರು ದಾಖಲಾಗಿದೆ.
ಏನಿದು ಘಟನೆ ?
ನಾನು ಮಂಡಾಣಿ ಎಲೆಕ್ಟ್ರಿಷಿಯೆನ್ಸ್ ಮತ್ತು ಕರ್ನಾಟಕ ಸಾವಯವ ಕೃಷಿ ಯೋಜನೆಯಲ್ಲಿ ಫೀಲ್ಡ್ ಆಫೀಸರ್ ಆಗಿ ಕೆಲಸ ಮಾಡಿಕೊಂಡಿದ್ದು ಹೊಸನಗರ ಪಟ್ಟಣದಲ್ಲಿರುವ ಕೆನರಾ ಬ್ಯಾಂಕ್ನಲ್ಲಿ ಓ.ಡಿ ಖಾತೆ ನಂಬರ್ 046561000478 ಹೊಂದಿರುತ್ತೇನೆ. ಬ್ಯಾಂಕ್ ಖಾತೆಯಲ್ಲಿ ನಾನು ಸ್ವಂತ ಕೆಲಸ ಮಾಡಿದ ಉಳಿತಾಯದ ಹಣ ಮತ್ತು ನಾನು ಕೆಲಸ ಮಾಡುವ ಸಂಸ್ಥೆಯಲ್ಲಿ ರೈತರಿಂದ ಸಾವಯುವ ಗೊಬ್ಬರದ ಹಣವಾದ 3,89,544 ರೂಪಾಯಿಗಳಿದ್ದು ಜೂನ್ 21 ರಂದು ನನ್ನ ಮೊಬೈಲ್ಗೆ ಅಪರಿಚಿತ ವ್ಯಕ್ತಿಯ 83492926657 ಈ ಸಂಖ್ಯೆಯಿಂದ ಕಾಲ್ ಬಂದಿದ್ದು ಹಿಂದಿ ಭಾಷೆಯಲ್ಲಿ ಮಾತನಾಡಿರುವ ಧ್ವನಿ ಬಂದಿದ್ದು ನನಗೆ ಹಿಂದಿ ಬರುವುದಿಲ್ಲ ಎಂದು ಕಾಲ್ ಕಟ್ ಮಾಡಿರುತ್ತೇನೆ.
ಪುನಃ-ಪುನಃ ಕಾಲ್ ಬರುತ್ತಿದ್ದು ನಾನು ರಿಸೀವ್ ಮಾಡಿಲ್ಲ. ನಂತರ ಕಾಲ್ ಕಟ್ ಆದ ನಂತರ ನನ್ನ ಸಿಮ್ ಲಾಕ್ ಆಗಿದ್ದು ಯಾವುದೇ ಕರೆಗಳು ಬರುತ್ತಿರಲಿಲ್ಲ. ಕಾಲ್ಗಳು ಹೋಗುತ್ತಿರಲಿಲ್ಲ. ಸಿಮ್ ಲಾಕ್ ಆಗಿರುವುದರಿಂದ ನಾನು ಏರ್ಟೈಲ್ ಆಫೀಸಿಗೆ ಹೋಗಿ ಹೊಸ ಸಿಮ್ ಖರೀದಿಸಿದ್ದೇನೆ. ಆ ಸಿಮ್ 15 ನಿಮಿಷದ ನಂತರ ಹೊಸ ಪುನಃ ಲಾಕ್ ಆಯಿತು. ಸೋಮವಾರ ನನ್ನ ಖಾತೆಯಲ್ಲಿದ್ದ ಹಣ ಮಂಗಮಾಯವಾಗಿದೆ. ಬ್ಯಾಂಕ್ನಲ್ಲಿ ವಿಚಾರಿಸಿದಾಗ ನನ್ನ ಖಾತೆಯಿಂದ ಬೇರೆಯವರ ಖಾತೆಗೆ ವರ್ಗಾವಣೆಯಾಗಿರುವ ಬಗ್ಗೆ ಮಾಹಿತಿ ನೀಡಿರುತ್ತಾರೆ. ನನ್ನ ಫೋನ್ನಲ್ಲಿ ಗೂಗಲ್ ಪೇ, ಫೋನ್ ಪೇ, ನೆಟ್ ಬ್ಯಾಂಕಿಂಗ್, ಎ.ಟಿ.ಎಂ. ಯಾವುದೇ ಸೌಲಭ್ಯ ನಾನು ಪಡೆದಿರುವುದಿಲ್ಲ. ಅದರ ಜೊತೆಗೆ ನಾನು ಯಾರಿಗೂ ಓಪಿಟಿ ನಂಬರ್ ಹೇಳದೇ ಯಾವ ರೀತಿಯಲ್ಲಿ ನನ್ನ ಹಣ ಬೇರೆಯವರ ಖಾತೆಗೆ ಜಮಾ ಆಗಿದೆ ಎಂಬುವುದು ಅರ್ಥವಾಗುತ್ತಿಲ್ಲ ಎಂದು ಧನಂಜಯ್ ದೂರಿನಲ್ಲಿ ತಿಳಿಸಿದ್ದಾರೆ.
ನನ್ನ ಖಾತೆಯ ಹಣ ಯಾವ ಖಾತೆಗೆ ವರ್ಗಾವಣೆಯಾಗಿದೆ. ಅದನ್ನು ಪುನಃ ವಾಪಸ್ ಕೊಡಿಸಬೇಕು ಹಾಗೂ ವರ್ಗಾವಣೆ ಮಾಡಿಕೊಂಡಿರುವ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.
ಬಲೆ ಬೀಸಿದ ಪೊಲೀಸರು !
ಧನಂಜಯ್ ನೀಡಿರುವ ದೂರಿನನ್ವಯ ದೂರು ದಾಖಲಿಸಿಕೊಂಡಿರುವ ಹೊಸನಗರ ಸರ್ಕಲ್ ಇನ್ಸ್ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್ ಮಾರ್ಗದರ್ಶನದಲ್ಲಿ ಪಿಎಸ್ಐ ಶಿವಾನಂದ್ ಕೆ.ವೈರವರು ಮೋಸಗಾರರ ಪತ್ತೆಗಾಗಿ ಬಲೆ ಬೀಸಿದ್ದಾರೆ.
Accident | ಅಂಬ್ಯುಲೆನ್ಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ, ಮೂವರು ಸ್ಥಳದಲ್ಲೇ ಸಾವು !