Rain Damage | ಮರ ಬಿದ್ದು ಮನೆ ಜಖಂ !

Written by Mahesha Hindlemane

Published on:

HOSANAGARA | ತಾಲ್ಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದ್ದು ಕಸಬಾ ಹೋಬಳಿ ವರಕೋಡು ಗ್ರಾಮದ ದೊರೆದಿಂಬ ಗ್ರಾಮದ ಜೈನಾಬಿ ಕೋಂ ಮಾಸಿಂಸಾಬ್ ಎಂಬುವವರ ಮನೆಯ ಮೇಲೆ ಸೋಮವಾರ ರಾತ್ರಿ ಮನೆ ಪಕ್ಕದಲ್ಲಿದ್ದ ಅಕೇಶಿಯ ಮರ ಮನೆಯ ಮೇಲೆ ಬಿದ್ದು ಮನೆ, ಕೊಟ್ಟಿಗೆ ಸಂಪೂರ್ಣ ಜಖಂಗೊಂಡಿದೆ‌.

WhatsApp Group Join Now
Telegram Group Join Now
Instagram Group Join Now

ಭಾರಿ ಮಳೆಗೆ ಮನೆ ಬಿದ್ದ ತೆಂಗಿನಮರ, ಲಕ್ಷಾಂತರ ರೂ. ನಷ್ಟ !

Rain Damage

ಗ್ರಾಮ ಲೆಕ್ಕಾಧಿಕಾರಿ ಭೇಟಿ:

📢 Stay Updated! Join our WhatsApp Channel Now →

ಹೊಸನಗರ ಕಂದಾಯ ಇಲಾಖೆಯ ತಹಶೀಲ್ದಾರ್ ರಶ್ಮಿ ಹಾಲೇಶ್‌ರವರ ಆದೇಶದ ಮೇರೆಗೆ ಗ್ರಾಮ ಆಡಳಿತಾಧಿಕಾರಿ ಕೌಶಿಕ್‌ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲ ನಡೆಸಿದರು. ನಷ್ಟದ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ವರದಿ ಸಲ್ಲಿಸಲಾಗುವುದು ಎಂದರು.

ದಾಸರಾಯನ ಕೆರೆ ದಂಡೆ ಕುಸಿತ, ತಹಶೀಲ್ದಾರ್ ರಶ್ಮಿ ಭೇಟಿ, ಪರಿಶೀಲನೆ

HOSANAGARA | ತಾಲ್ಲೂಕಿನಾದ್ಯಂತ ಮೂರು ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಪರಿಣಾಮ ಮಸಗಲ್ಲಿ ಗ್ರಾಮದ ಭೀಮನಕೆರೆ ದಾಸರಾಯನ ಕೆರೆಯ ದಂಡೆ ಕುಸಿದು ಜಮೀನುಗಳಿಗೆ ನೀರು ನುಗ್ಗಿದೆ.

Rain Damage

ತಹಶೀಲ್ದಾರ್‌ ಭೇಟಿ :

ದಾಸರಾಯನ ಕೆರೆಯ ದಂಡೆ ಕುಸಿತದ ವಿಷಯ ತಿಳಿದು ತಹಶೀಲ್ದಾರ್ ರಶ್ಮಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಳೆಯ ಪ್ರಮಾಣ ಕಡಿಮೆಯಾದಂತೆ ಕುಸಿತವನ್ನು ತಡೆಯಲು ಸರ್ಕಾರದಿಂದ ಕಾಮಗಾರಿ ನಡೆಸುವುದಾಗಿ ಭರವಸೆ ನೀಡಿದರು.

ಮಾಸ್ತಿಕಟ್ಟೆಯಲ್ಲಿ ದಾಖಲಾಯ್ತು ಅತೀ ಹೆಚ್ಚು ಮಳೆ, ಮತ್ತೆಲ್ಲೆಲ್ಲಿ ಎಷ್ಟಾಗಿದೆ ?

Leave a Comment