Rain Damage | ಕೊಟ್ಟಿಗೆ ಮೇಲೆ ಉರುಳಿದ ಮರ

Written by Mahesha Hindlemane

Published on:

HOSANAGARA | ಭಾರಿ ಗಾಳಿ, ಮಳೆಗೆ ಜಾನುವಾರು ಕೊಟ್ಟಿಗೆ (Cow Shed) ಮೇಲೆ ಮರ (Tree) ಬಿದ್ದು ಹಾನಿಯಾದ ಘಟನೆ ಕೋಡೂರು (Kodur) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಗುಂಡಿ ಗ್ರಾಮದ ಶಾಂತಪುರದಲ್ಲಿ ನಡೆದಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಸುಮಾ ಎಂಬುವರಿಗೆ ಸೇರಿದ ಜಾನುವಾರು ಕೊಟ್ಟಿಗೆ ಇದಾಗಿದ್ದು ಬೃಹತ್ ಗಾತ್ರದ ಮರ ಉರುಳಿ ಬಿದ್ದು ಕೊಟ್ಟಿಗೆ ಸಂಪೂರ್ಣವಾಗಿ ಜಖಂಗೊಂಡಿದೆ.

ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ವಿಷಯ ತಿಳಿದು ಕೋಡೂರು ‌ಪಿಡಿಒ ನಾಗರಾಜ್ ಹಾಗೂ ವಿಎ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನೂ ತಾಲ್ಲೂಕಿನ ಹರಿದ್ರಾವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ. ಹುಣಸವಳ್ಳಿ ಗ್ರಾಮದಲ್ಲೂ ಕೊಟ್ಟಿಗೆ ಮೇಲೆ ಮರ ಬಿದ್ದ ಘಟನೆ ವರದಿಯಾಗಿದೆ.

ಎನ್‌.ಜಿ ನಾಗೇಶ ಬಿನ್ ಎನ್‌. ‌ಗುಂಡಪ್ಪ ಎಂಬುವವರಿಗೆ ಸೇರಿದ ದನದ ಕೊಟ್ಟಿಗೆಯ ಮೇಲೂ ಮರ ಬಿದ್ದು ಭಾಗಶಃ ಕೊಟ್ಟಿಗೆ ಹಾನಿಯಾಗಿದೆ.

SHIVAMOGGA | ಮಳೆಯಿಂದ ಜಿಲ್ಲೆಯಲ್ಲಿ ಈವರೆಗೆ ಏನೆಲ್ಲ ಹಾನಿ ಸಂಭವಿಸಿದೆ ?

Leave a Comment