HOSANAGARA | ಮ(ಳೆ)ಲೆನಾಡಿನ ತವರೂರು ಎನಿಸಿಕೊಂಡಿರುವ ಹೊಸನಗರ ತಾಲೂಕಿನಾದ್ಯಂತ ಪುಷ್ಯ ಮಳೆಯಾರ್ಭಟ ಮುಂದುವರೆದಿದ್ದು, ಗುರುವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ತಾಲೂಕಿನ ಚಕ್ರಾನಗರದಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆಯಾಗಿದೆ.
ಎಲ್ಲೆಲ್ಲಿ ಎಷ್ಟಾಗಿದೆ ಮಳೆ ?
- ಚಕ್ರಾನಗರ : 275 mm
- ಮಾಣಿ : 253 mm
- ಸಾವೇಹಕ್ಲು : 230 mm
- ಯಡೂರು : 206 mm
- ಸುಳಗೋಡು : 182.2 mm
- ಬಿದನೂರುನಗರ : 178 mm
- ಹುಲಿಕಲ್ : 178 mm
- ಮಾಸ್ತಿಕಟ್ಟೆ : 170 mm
- ಕಾರ್ಗಲ್ (ಸಾಗರ) : 74.2 mm
- ಹುಂಚ : 66 mm
- ಹೊಸನಗರ : 46 mm
- ಅರಸಾಳು : 30 mm
- ರಿಪ್ಪನ್‌ಪೇಟೆ : 30 mm
ಲಿಂಗನಮಕ್ಕಿ ಜಲಾಶಯ :
1819 ಅಡಿ ಗರಿಷ್ಟ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಗುರುವಾರ ಬೆಳಿಗ್ಗೆ 8 ಗಂಟೆಗೆ 1802.70 ಅಡಿ ತಲುಪಿದ್ದು ಜಲಾಶಯಕ್ಕೆ 53371 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯ ಶೇ. 67.82ರಸ್ಟು ಭರ್ತಿಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 1778.85 ಅಡಿ ದಾಖಲಾಗಿತ್ತು. ಬುಧವಾರ ಒಂದೇ ದಿನ ಜಲಾಶಯಕ್ಕೆ 1.70 ಅಡಿ ನೀರು ಬಂದಿದೆ.