ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಅತಿವೃಷ್ಠಿ ಸಂತ್ರಸ್ಥರ ಸ್ಥಿತಿ ಅಧೋಗತಿಗೆ ಬಂದಿದೆ ; ಶಾಸಕ ಆರಗ ಜ್ಞಾನೇಂದ್ರ

Written by malnadtimes.com

Published on:

HOSANAGARA | ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದ ರಾಜ್ಯದಲ್ಲಿ ಸಾಕಷ್ಟು ಮಂದಿ ಮನೆ-ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಆದರೆ ರಾಜ್ಯ ಸರ್ಕಾರ ನಯಾಪೈಸೆ ಪರಿಹಾರವೂ ನೀಡುತ್ತಿಲ್ಲ. ಕೇಂದ್ರದ ಎನ್‌ಡಿಆರ್‌ಎಫ್ ನಿಂದ ನೀಡಲಾಗುವ 1.20 ಲಕ್ಷ ರೂ. ನೀಡಿ ಕೈತೊಳೆದುಕೊಳ್ಳಲು ಮುಂದಾಗಿದೆ ಎಂದು ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು‌.

WhatsApp Group Join Now
Telegram Group Join Now
Instagram Group Join Now

Karnataka Rain : ಇಂದು ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ, ಇನ್ನೆಷ್ಟು ದಿನ ಮಳೆಯಾಗಲಿದೆ ?

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬಿಜೆಪಿ ಪಕ್ಷ ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಠಿ ಹಾನಿಯ ಪರಿಶೀಲನೆಗಾಗಿ ಬಿಜೆಪಿ ಪಕ್ಷ 6 ತಂಡಗಳನ್ನು ರಚನೆ ಮಾಡಿದೆ. ನಷ್ಟದ ಕುರಿತು ವರದಿ ತಯಾರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ. ವಿದ್ಯುತ್ ಸಮಸ್ಯೆ, ರಸ್ತೆಗಳಿಗೆ ತೀವ್ರ ಹಾನಿಯಾಗಿದೆ. ಆದರೆ ಪರಿಹಾರ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ರಾಜ್ಯದಿಂದ ಅನುದಾನ ಬಂದಿಲ್ಲ ಎಂದರು.

HOSANAGARA
HOSANAGARA

ಹೊಸನಗರ, ಸಾಗರ, ತೀರ್ಥಹಳ್ಳಿ ಭಾಗದಲ್ಲಿ ಸಾಕಷ್ಟು ಅಕೇಶಿಯ ಮರಗಳು ರಸ್ತೆಯ ಪಕ್ಕದಲ್ಲಿದ್ದು ಜನರಿಗೆ ಬಹಳ ತೊಂದರೆ ನೀಡುತ್ತಿವೆ. ಮನೆ, ಕೊಟ್ಟಿಗೆಗಳ ಮೇಲೆ ಬಿದ್ದು ಹಾನಿ ಮಾಡುತ್ತಿದೆ. ತಕ್ಷಣ ಅರಣ್ಯ ಇಲಾಖೆಯವರು ರಸ್ತೆಯ ಪಕ್ಕದಲ್ಲಿರುವ ಮರಗಳನ್ನು ಕಡಿಯದಿದ್ದರೆ ನಾವೇ ಮುಂದಿನ ದಿನದಲ್ಲಿ ಕಡಿಯಲು ಮುಂದಾಗುತ್ತೇವೆ ಎಂದು ಎಚ್ಚರಿಸಿದರು.

ವಿಧಾನಪರಿಷತ್ ಮುಖ್ಯ ಸಚೇತಕ ರವಿಕುಮಾರ್ ಮಾತನಾಡಿ. ರಾಜ್ಯದಲ್ಲಿ ಅತಿವೃಷ್ಠಿಯಿಂದಾಗಿ ಜನತೆ ಸಂಕಷ್ಟಕ್ಕೀಡಾಗಿದ್ದಾರೆ. ಆದರೆ ಇಡೀ ಸಚಿವ ಸಂಪುಟ ದೆಹಲಿಯಲ್ಲಿ ಬೀಡುಬಿಟ್ಟಿದೆ. ಯಾವ ಜಿಲ್ಲಾ ಉಸ್ತುವಾರಿ ಮಂತ್ರಿಯೂ ಕ್ಷೇತ್ರ ಪ್ರವಾಸ ಕೈಗೊಳ್ಳುತ್ತಿಲ್ಲ. ಬರದಿಂದ ಸಂಕಷ್ಟ ಅನುಭವಿಸಿದ್ದ ಕೃಷಿಕರು ಈಗ ಅತಿವೃಷ್ಠಿಯಿಂದ ನಷ್ಟ ಅನುಭವಿಸಿದ್ದಾರೆ. ಅತಿವೃಷ್ಠಿ ಆಗಬಹುದೆನ್ನುವ ಮುನ್ಸೂಚನೆ ಇದ್ದಾಗ್ಯೂ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಕಾರಣಕ್ಕೆ ಇಷ್ಟೊಂದು ಪ್ರಮಾಣದ ಹಾನಿ ಉಂಟಾಗಿದೆ. ಬರ ಪರಿಹಾರ ಘೋಷಣೆಗೆ ಸರ್ಕಾರ ಸಿದ್ದವಿಲ್ಲ. ಕೃಷಿ ಹಾಗೂ ತೋಟಗಾರಿಕಾ ಸಚಿವರು ಎಲ್ಲಿಯೂ ಕಾಣಿಸುತ್ತಿಲ್ಲ. ಇದೊಂದು ಲಜ್ಜೆಗೆಟ್ಟ ಸರ್ಕಾರವಾಗಿದೆ ಎಂದು ಅವರು ಟೀಕಿಸಿದರು.

RIPPONPETE ಮಳೆಯ ನಡುವೆಯೂ ವೈಭವದೊಂದಿಗೆ ಜರುಗಿದ ಕೆಂಚನಾಲ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವ

ಸರ್ಕಾರ ತನ್ನದೇ ಸಮಸ್ಯೆಗಳಲ್ಲಿ ಸಿಲುಕಿಕೊಂಡಿದೆ. ಹಗರಣಗಳನ್ನು ಎದುರಿಸಲು ಆಗುತ್ತಿಲ್ಲ. ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿಗೆ ಅನುದಾನವಿಲ್ಲದಂತಾಗಿದೆ. ಅಯೋಮಯ ಸ್ಥಿತಿಯಲ್ಲಿ ಅತಿವೃಷ್ಠಿ ಸಂತ್ರಸ್ಥರು ಆಕಾಶ ನೋಡುತ್ತಾ ಕುಳಿತುಕೊಳ್ಳುವಂತಾಗಿದೆ. ಸರ್ಕಾರದ ಧೋರಣೆ ಇದೇ ರೀತಿ ಮುಂದುವರೆದರೆ ಜನಸಾಮಾನ್ಯರು ಬೀದಿಗಿಳಿದು ಪ್ರತಿಭಟನೆ ಮಾಡುವ ದಿನ ದೂರವಿಲ್ಲ, ರಾಜ್ಯ ಸರ್ಕಾರ ಕೂಡಲೇ ಈ ತನಕ ಆಗಿರುವ ನಷ್ಟದ ಅಂದಾಜು ವರದಿ ತಯಾರಿಸಿ ಪರಿಹಾರಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಅವರು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ಮಾಜಿ ಸಚಿವ ಹರತಾಳು ಹಾಲಪ್ಪ, ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಂಡಲದ ಅಧ್ಯಕ್ಷ ಮತ್ತಿಮನೆ ಸುಬ್ರಮಣ್ಯ ಮುಖಂಡರಾದ ಗಣಪತಿ ಬಿಳಗೋಡು, ಗುಲಾಬಿ ಮರಿಯಪ್ಪ, ಹಾಲಗದ್ದೆ ಉಮೇಶ್, ಗಾಯಿತ್ರಿ ನಾಗರಾಜ್, ಅಭಿಲಾಷ್, ನಗರ ನಿತಿನ್, ಮಂಡಾನಿ ಮೋಹನ್, ಚಾಲುಕ್ಯ ಬಸವರಾಜ್ ಸತ್ಯನಾರಾಯಣ, ಬಂಕ್ರಿಬೀಡು ಮಂಜುನಾಥ ಮತ್ತಿತರರು ಇದ್ದರು.

ಸಾಗರ ತಾಲೂಕಿನ ಶಾಲೆ, ಕಾಲೇಜುಗಳಿಗೂ ಬುಧವಾರ ರಜೆ ಘೋಷಣೆ

Leave a Comment