RIPPONPETE ; ಇತಿಹಾಸ ಪ್ರಸಿದ್ದ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ 2ನೇ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಜನಸಾಗರವೇ ಹರಿದು ಬಂದಿತು.
ಬೇಡಿ ಬರುವ ಭಕ್ತರಿಗೆ ಫಲಪ್ರದೆ ತಾಯಿ ಅಮ್ಮಘಟ್ಟ ಜೇನುಕಲ್ಲಮ್ಮ ದೇವಿಯ ಜಾತ್ರೋತ್ಸವ ಪ್ರತಿ ವರ್ಷದ ಪಿತೃ ಪಕ್ಷದಲ್ಲಿ ಮಂಗಳವಾರ ಮತ್ತು ಶುಕ್ರವಾರ ಹುಣ್ಣಿಮೆಯಿಂದ ಅಮಾವಾಸ್ಯೆಯವರೆಗೆ ಆಚರಿಸಲಾಗುತ್ತದೆ. ಈ ಜಾತ್ರಾ ಮಹೋತ್ಸದಲ್ಲಿ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಹರಕೆ ಮಾಡಿಕೊಳ್ಳುವುದು ಇಲ್ಲಿನ ವಿಶೇಷ.
ದೇವಸ್ಥಾನದ ಪ್ರಧಾನ ಅರ್ಚಕ ಭಾಸ್ಕರ್ ಜೋಯ್ಸ್ ಇವರ ಪುರೋಹಿತತ್ವದಲ್ಲಿ ನಡೆದ ಪೂಜಾ ಕಾರ್ಯದಲ್ಲಿ ಭಕ್ತ ಸಮೂಹ ದೇವಿಯ ದರ್ಶನ ಪಡೆದು ಸಂತಾನಭಾಗ್ಯ, ವಿವಾಹ ಯೋಗ ಹೀಗೆ ತಮ್ಮ ಜಮೀನಿನಲ್ಲಿ ಹಾಕಲಾದ ಬೆಳೆ ಸಂವೃದ್ದವಾಗಿ ಬೆಳೆದು ಯಾವುದೇ ರೋಗ ರುಜಿನ ಬಾರದಂತೆ ಕಾಪಾಡು ತಾಯಿ ಎಂದು ದೇವಿಯಲ್ಲಿ ಪ್ರಾರ್ಥಿಸಿದರು.
ಶುಂಠಿ, ಜೋಳ, ಭತ್ತ, ಅಡಿಕೆ, ಕಾಳುಮೆಣಸು ಹೀಗೆ ತಮ್ಮ ಜಮೀನಿನಲ್ಲಿ ಬೆಳೆದ ಫಸಲನ್ನು ತಂದು ದೇವಿಗೆ ಅರ್ಪಿಸುವುದು ಮತ್ತು ಹರಕೆ ಹಣ್ಣು, ಕಾಯಿಯನ್ನು ಭಕ್ತರು ಸಮರ್ಪಿಸಿದರು.