RIPPONPETE ; ಕೂಡಿ ಬಾಳಿದರೆ ಸುಖ ಎಂಬ ಮಂತ್ರವನ್ನು ನಾವು ತಿಳಿಯಬೇಕಾಗಿದೆ. ಮನುಷ್ಯತ್ವ ಮೀರಿದ ಯಾವುದೇ ಧರ್ಮವಿಲ್ಲ. ಸೌಹಾರ್ದತೆ ಕಾಪಾಡುವ ಜವಾಬ್ದಾರಿ ಧರ್ಮಗುರುಗಳ ಹೆಗಲ ಮೇಲಿದೆ. ವಿವಿಧ ಜಾತಿ ಧರ್ಮ ಸಂಸ್ಕೃತಿಯುಳ್ಳ ದೇಶ ನಮ್ಮದಾಗಿದೆ ಎಂದು ಗರ್ತಿಕೆರೆ ನಿಟ್ಟೂರು ಶ್ರೀ ನಾರಾಯಣಗುರು ಮಹಾಸಂಸ್ಥಾನ ಮಠದ ಶ್ರೀ ರೇಣುಕಾನಂದ ಮಹಾಸ್ವಾಮೀಜಿ ಹೇಳಿದರು.
ರಿಪ್ಪನ್ಪೇಟೆಯ ಮಹಮ್ಮದ್ ಜುಮ್ಮಾ ಮಸೀದಿ ಗವಟೂರು ತಲಿಝೀಝುಲ್ ಇಸ್ಲಾಂ ಮದ್ರಸ ಬದ್ರಿಯಾ, ಮಸ್ಜಿದ್ ಮೀಲಾದ್ ಸಮಿತಿ ಹಾಗೂ ಎಸ್.ವೈ.ಎಸ್.ಎಸ್.ಎಸ್.ಎಫ್ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಹಜರತ್ ಪೈಗಂಬರ್ ಮಹಮ್ಮದ್ ಮುಸ್ತಾಫಾ ರವರ 1499ನೇ ಜನ್ಮ ದಿನದ ಅಂಗವಾಗಿ “ಈದ್ ಮಿಲಾದ್’’ ಹಬ್ಬದ ಸೌಹಾರ್ದ ಸಂಗಮ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಹೂದೋಟದಲ್ಲಿ ವಿವಿಧ ಜಾತಿಯ ಹೂಗಳಿದ್ದು ಆದನ್ನು ಪೋಣಿಸಿದಾಗ ಹಾರವಾಗುವ ಹಾಗೆ ನಾವೆಲ್ಲರೂ ಪರಸ್ಪರ ಶಾಂತಿ ಪ್ರೀತಿಯಿಂದ ಇರಬೇಕು ಎಂದು ಕರೆ ನೀಡಿದರು.
ಈ ಧರ್ಮ ಸಮಾರಂಭದ ಅಧ್ಯಕ್ಷತೆಯನ್ನು ಹಸನಬ್ಬ ಬಾವಬ್ಯಾರಿ ಅಧ್ಯಕ್ಷತೆ ವಹಿಸಿದ್ದರು.
ಶಾಸಕರು ಹಾಗೂ ರಾಜ್ಯ ಆರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎಲ್ಲ ಜನಾಂಗದ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದು ನಮ್ಮ ನಮ್ಮಲ್ಲಿ ಅಶಾಂತಿ ಸೃಷ್ಟಿಕೊಂಡು ಗಲಾಟೆಗೆ ಕಾರಣವಾಗುತ್ತಿದ್ದೇವೆ. ಇದರಿಂದ ಸಮಾಜದ ಅಶಾಂತಿಗೆ ಕಾರಣವಾಗಿ ಕೋಮುಭಾವನೆ ಬೆಳಸಿದಂತಾಗುತ್ತದೆ. ಆದ್ದರಿಂದ ಹಿಂದೂ ಮುಸ್ಲಿಂ ಹಬ್ಬದಲ್ಲಿ ಸಮಾಜದಲ್ಲಿನ ಹಿರಿಯರು ತಮ್ಮಲ್ಲಿನ ಯುವಜನಾಂಗಕ್ಕೆ ತಿಳಿ ಹೇಳಿ, ತಿದ್ದುವ ಕೆಲಸ ಮಾಡಬೇಕು ಆಗ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಬೆಳೆಸಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಶಾಸಕರು ಹಾಗೂ ರಾಜ್ಯ ಅರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು, ವಿಧಾನಪರಿಷತ್ ಸದಸ್ಯೆ ಬಲ್ಕಿಶ್ಬಾನು, ಡಿಸಿಸಿ ಬ್ಯಾಂಕ್ ಎಂ.ಎ.ಡಿ.ಬಿ. ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಇವರನ್ನು ಸನ್ಮಾನಿಸಿ ಅಭಿನಂದಿಸಿದರು.
ಭದ್ರಾವತಿ ವೆಳಾಂಗಣಿ ಆರೋಗ್ಯ ಮಾತೆ ಪುಣ್ಯ ಕ್ಷೇತ್ರದ ಧರ್ಮಗುರು ರೆ.ಫಾದರ್ ಸ್ಟೀವನ್ ಡೆಸಾ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮ್ಮೀರ್ ಹಂಜಾ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಆರ್.ಎ.ಚಾಬುಸಾಬ್, ಕೆಡಿಪಿ ಸದಸ್ಯ ಆಶೀಫ್ಬಾಷಾ, ಹಸೈನಾರ್,
ಉಬೇದುಲ್ಲಾ ಷರೀಫ್, ಮಹಮ್ಮದ್ಷರೀಫ್, ಶಂಶುದ್ದೀನ್, ವಾಹಿದ್, ಈದ್ ಮಿಲಾದ್ ಸಮಿತಿ ಅಧ್ಯಕ್ಷ ನಾಸಿರ್ಹಮೀದ್ ಸಾಬ್, ಅಮ್ಮೀರ್ ಸಾಬ್, ಅಬ್ದುಲ್ ಮುತ್ತಲಿಬ್, ಮಹಮ್ಮದ್ ರಫೀಕ್, ಮಹಮ್ಮದ್ ಪಾಜೀಲ್, ಶೇಖಬ್, ಅಬ್ದುಲ್ಖುದ್ದೂಸ್, ಮಹಮ್ಮದ್ ಹನೀಫ್, ಅಜ್ಮಲ್,ಗ್ರಾಮ ಪಂಚಾಯಿತ್ ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಸದಸ್ಯರಾದ ಸಾರಾಭಿ, ನಿರೂಪ್ ಕುಮಾರ್, ವೇದಾವತಿ, ಎನ್.ಚಂದ್ರೇಶ್, ಮಂಜುಳಾ, ಡಿ.ಈ. ಮಧುಸೂದನ್, ಪಿ.ರಮೇಶ್, ಗಣಪತಿ, ಪ್ರಕಾಶ್ಪಾಲೇಕರ್, ನಿರುಪಮಾ ರಾಕೇಶ್, ಮಹಾಲಕ್ಷ್ಮಿ, ಮಲ್ಲಿಕಾರ್ಜುನ, ಸುಂದರೇಶ್, ದೀಪಾ ಸುಧೀರ್, ವನಮಾಲ, ದಾನಮ್ಮ, ಅಶ್ವಿನಿ, ವಿನೋದ, ಪಿಎಸ್.ಐ.ಪ್ರವೀಣ್ಕುಮಾರ್, ಪಿಡಿಓ ಮಧುಸೂದನ್, ಇನ್ನಿತರರು ಉಪಸ್ಥಿತರಿದ್ದು ಮಾತನಾಡಿದರು.
ಹನಿಫ್ ಸ್ವಾಗತಿಸಿ, ರಿಜ್ವಾನ್ ವಂದಿಸಿದರು.