RIPPONPETE ; ಇಲ್ಲಿನ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದವರು ಶರನ್ನವರಾತ್ರಿ ಅಂಗವಾಗಿ ಜಿ.ಎಸ್.ಬಿ.ಕಲ್ಯಾಣಮಂದಿರದಲ್ಲಿ “ತ್ರಯೋದಶಾಕ್ಷರ ರಾಮನಾಮ ಮಂತ್ರ ಹವನ’’ ಶ್ರೀ ಗುರು ಗಣೇಶ ಪೂಜೆ, ಪುಣ್ಯಾಹ, ಕಲಶಪ್ರತಿಷ್ಟೆ ವಿಶೇಷ ಪೂಜಾ ಕಾರ್ಯವು ವಿಧಿ ವಿಧಾನದೊಂದಿಗೆ ಜರುಗಿತು.
ಪೂರ್ಣಾಹುತಿ ನಂತರ ಸಮಾಜದ ಹಿರಿಯರಿಗೆ ಸನ್ಮಾನ ನಂತರ ಮಹಾಮಂಗಳಾರತಿ ಪ್ರಸಾದ ವಿತರಣೆಯೊಂದಿಗೆ ಸಮಾಜದವರಿಗೆ ಅನ್ನಸಂತರ್ಪಣೆ ಕಾರ್ಯ ಜರುಗಿತು.
ಈ ಸಂದರ್ಭದಲ್ಲಿ ಜಿ.ಎಸ್.ಬಿ.ಸಮಾಜದ ಆದ್ಯಕ್ಷರು ಪದಾಧಿಕಾರಿಗಳು ಸಮಾಜ ಬಾಂಧವರು ಪಾಲ್ಗೊಂಡಿದ್ದರು.
ಶರನ್ನವರಾತ್ರಿ ಉತ್ಸವದೊಂದಿಗೆ ಚಂಡಿಕಾ ಪಾರಾಯಣ ನವಚಂಡಿಕಾ ಹೋಮ
RIPPONPETE ; ಇಲ್ಲಿನ ಇತಿಹಾಸ ಪ್ರಸಿದ್ದ ಶ್ರೀಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಅಕ್ಟೋಬರ್ 3 ರಿಂದ 12 ರವರೆಗೆ ಶರನ್ನವರಾತ್ರಿ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಅಕ್ಟೋಬರ್ 3 ರಂದು ಗುರುವಾರ ದೇವಸ್ಥಾನ ಸಿದ್ದಿವಿನಾಯಕ ಸ್ವಾಮಿ ಮತ್ತು ಜಗನ್ಮಾತೆ ಆನ್ನಪೂರ್ಣೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆಯೊಂದಿಗೆ “ಚಂಡಿಕಾ ಪಾರಾಯಣ’’ವನ್ನು ನಡೆಸಲಾಯಿತು.
ದೇವಸ್ಥಾನದ ಪ್ರಧಾನ ಅರ್ಚಕ ಚಂದ್ರಶೇಖರ್ ಭಟ್ ಮತ್ತು ಗುರುರಾಜ ಭಟ್ ಇವರು ಪ್ರಾತಃಕಾಲ ದೇವಿಯ ಸನ್ನಿಧಿಯಲ್ಲಿ ಚಂಡಿಕಾಪಾರಾಯಣ ಹಾಗೂ ಮಹಾಪೂಜೆ ಮಂಗಳಾರತಿ ನಡೆಯಲಿದ್ದು ಅಕ್ಟೋಬರ್ 12 ರಂದು ಶನಿವಾರ ಬೆಳಗ್ಗೆ ಲೋಕ ಕಲ್ಯಾಣಾರ್ಥವಾಗಿ ದೇವಸ್ಥಾನ ಸಿದ್ದಿವಿನಾಯಕ ಮತ್ತು ಜಗನ್ಮಾತೆ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ “ನವಚಂಡಿಕಾ ಹೋಮ’’ ನಂತರ ಮಧ್ಯಾಹ್ನ 12 ಕ್ಕೆ ಪೂರ್ನಾಹುತಿ ತೀರ್ಥಪ್ರಸಾದ ವಿನಿಯೋಗ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ಜರುಗಲಿದೆ. ನಂತರ ವಿಜಯದಶಮಿಯ ಅಂಗವಾಗಿ ಸಿದ್ದಿವಿನಾಯಕ ಸ್ವಾಮಿಯ ರಥೋತ್ಸವ ಮತ್ತು ಬನ್ನಿ ಪೂಜೆ ನಡೆಯುವುದು ಸಕಲ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ದರ್ಶನಾರ್ಶೀವಾದ ಪಡೆಯುವಂತೆ ಪತ್ರಿಕಾ ಪ್ರಕಟಣೆಯಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಆರ್.ಈ.ಈಶ್ವರಶೆಟ್ಟಿ ತಿಳಿಸಿದ್ದಾರೆ.