ತೀರ್ಥಹಳ್ಳಿ ತಹಸಿಲ್ದಾರ್ ಜಕ್ಕಣ್ಣ ಗೌಡರ್ ವಿಧಿವಶ !

Written by Mahesha Hindlemane

Published on:

THIRTHAHALLI ; ತೀರ್ಥಹಳ್ಳಿ ತಹಸಿಲ್ದಾರ್ ಜಕ್ಕಣ್ಣ ಗೌಡರ್ ಇಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಮೃತ ಜಕ್ಕಣ್ಣ ಗೌಡರ್ ಅವರು ತೀರ್ಥಹಳ್ಳಿಯ ತಹಸಿಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದರು.  ಕಾರ್ಯನಿಮಿತ್ತ ಜಕ್ಕಣ್ಣ ಗೌಡರ್ ನ್ಯಾಯಾಲಯದ ಕೆಲಸಕ್ಕೆ ಬೆಂಗಳೂರಿಗೆ ತೆರಳಿದ್ದರು. ಬೆಂಗಳೂರಿನ ನರ್ತಕಿ ಚಿತ್ರಮಂದಿರ ಎದುರು ಇರುವ ವೈಭವ ಲಾಡ್ಜ್ ನಲ್ಲಿ ತಂಗಿದ್ದರು. ರಾತ್ರಿ 10:00 ಗಂಟೆ ಸುಮಾರಿಗೆ ತೀವ್ರ ಹೃದಯಘಾತದಿಂದ ಜಕ್ಕಣ್ಣ ಗೌಡರ್ ನಿಧನರಾಗಿದ್ದಾರೆ. 

ಮೂಲತಃ ಗದಗ ಜಿಲ್ಲೆಯವರಾದ ಇವರು ಪ್ರಸ್ತುತ ತೀರ್ಥಹಳ್ಳಿ ತಹಸಿಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

Leave a Comment