ಸರ್ವರ್ ಸಮಸ್ಯೆ, ಪಡಿತರದಾರರ ಪರದಾಟ !

Written by malnadtimes.com

Published on:

RIPPONPETE ; ಈ ಬಾರಿಯ ದಸರಾ ವಿಜಯದಶಮಿ ಮತ್ತು ಆಯುಧಪೂಜೆಯನ್ನು ಅದ್ದೂರಿಯಾಗಿ ಆಚರಿಸಬೇಕು ಎಂಬ ಬಗ್ಗೆ ಬಡಕೂಲಿ ಕಾರ್ಮಿಕರು ಸರ್ಕಾರ ವಿತರಣೆ ಮಾಡುವ ಪಡಿತರ ಅಕ್ಕಿಯನ್ನು ನಂಬಿಕೊಂಡಿದ್ದ ಪಡಿತರದಾರರಿಗೆ ಸರ್ವರ್ ಸಮಸ್ಯೆಯಿಂದಾಗಿ ಕತ್ತರಿ ಹಾಕಿದ್ದಾರೆಂದು ಪಡಿತರದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ಸಾಗರ ರಸ್ತೆಯಲ್ಲಿನ ಪುರುಷೋತ್ತಮ ಮತ್ತು ಬರುವೆ ಬಾಲಕಿಯರ ಶಾಲೆಯ ರಸ್ತೆಯಲ್ಲಿರುವ ನ್ಯಾಯಬೆಲೆ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ಪಡಿತರದಾರರು ಪಡಿತರಕ್ಕಾಗಿ ಕಾದು ನಿಂತಿರುವುದು ಕಂಡ ಮಾಧ್ಯಮವರು ಪಡಿತರ ಗ್ರಾಹಕರನ್ನು ಕೇಳಿದಾಗ ಬೆರಳಚ್ಚು (ಬಯೋಮೆಟ್ರಿಕ್) ಪಡೆಯುವ ಸರ್ವರ್ ಸಮಸ್ಯೆಯಿಂದಾಗಿ ಕಳೆದ 19 ದಿನಗಳಿಂದ ಪಡಿತರ ವಿತರಣೆ ಮಾಡದೇ ತಿನ್ನೊ ಅನ್ನಕ್ಕೂ ಸರ್ಕಾರ ಕತ್ತರಿ ಹಾಕಿದೆ ಎಂದು ಜನಪ್ರತಿನಿಧಿಗಳನ್ನು ಮತ್ತು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.

ರಾಜ್ಯ ವ್ಯಾಪ್ತಿಯ ಸಮಸ್ಯೆಯಾಗಿದ್ದು ನಾವುಗಳು ಏನು ಮಾಡುವುದು ಸ್ವಾಮಿ ನಾವು ಯಾರಿಗೆ ಹೇಳೋದೋ ಎಂದು ಅಧಿಕಾರಿಗಳು ಮತ್ತು ನ್ಯಾಯಬೆಲೆ ಅಂಗಡಿಯವರು ತಮ್ಮ ಅಸಹಾಯದವನ್ನು ಮಾಧ್ಯಮದವರ ಮುಂದೆ ವ್ಯಕ್ತಪಡಿಸಿದರು.

ಇನ್ನೂ ಹೀಗೆ ಮುಂದುವರಿದರೆ ನಾವು ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುವುದೆಂಬ ಎಚ್ಚರಿಕೆಯನ್ನು ನೀಡಿದರು.


ನ್ಯಾಯಬೆಲೆ ಅಂಗಡಿಯ ಮುಂದೆ ಜನಸಾಗರ :

HOSANAGARA ; ತಾಲ್ಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಸರ್ವರ್ ಸಮಸ್ಯೆ ನ್ಯಾಯಬೆಲೆ ಅಂಗಡಿಗಳ ಮುಂದೆ ಪಡಿತರದಾರರು ಸಾಲಿನಲ್ಲಿ ಜನಸಾಗರವೇ ನಿಲ್ಲುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಹೊಸನಗರ ತಾಲ್ಲೂಕಿನಲ್ಲಿ ಒಟ್ಟು 46 ನ್ಯಾಯಾಲಯ ಬೆಲೆ ಅಂಗಡಿಗಳಿದ್ದು ಒಟ್ಟು 25 ಸಾವರಕ್ಕಿಂತಲ್ಲೂ ಹೆಚ್ಚು ಪಡಿತರದಾರರು ಇದ್ದಾರೆ. ಎಲ್ಲ ನ್ಯಾಯಾಬೆಲೆ ಅಂಗಡಿಗಳಲ್ಲಿ ಪ್ರತಿ ತಿಂಗಳು 15ನೇ ತಾರೀಖಿನಿಂದ ಅಕ್ಕಿ ಕೊಡಲು ಪ್ರಾರಂಭಿಸುತ್ತಾರೆ. ಆದರೆ ಅಕ್ಟೋಬರ್ ತಿಂಗಳಲ್ಲಿ ನ್ಯಾಯಬೆಲೆ ಅಂಗಡಿಗೆ ಸರ್ಕಾರದಿಂದ ಅಕ್ಕಿ ಬಂದಿದೆ. ಆದರೆ ಸರ್ವರ್ ಸಮಸ್ಯೆಯಿಂದ ಕಾರ್ಡ್‌ದಾರರು ಬೆಳಿಗ್ಗೆಯಿಂದ ಅಂಗಡಿಯ ಬಾಗಿಲಿನಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರ ಪಡಿತರದಾರರಿಗೆ ಉಚಿತ ಅಕ್ಕಿ ನೀಡುತ್ತದೆ. ಒಂದೇ ಸರಿ ಬಂದು ಅಕ್ಕಿ ತೆಗೆದುಕೊಂಡು ಹೋದರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ ದೂರದ ಗ್ರಾಮದಿಂದ ಬಂದು ಎರಡ್ಮೂರು ದಿನ ನ್ಯಾಯಬೆಲೆ ಅಂಗಡಿಯ ಮುಂದೆ ಕಾಯುವುದರಿಂದ ಅವರ ಕೆಲಸ ಹಾಳಗುತ್ತಿದೆ. ಕೂಲಿ ಮಾಡಿ ಜೀವನ ಸಾಗಿಸುವವವರ ಪರಿಸ್ಥಿತಿ ಎನೂ ಆಗಬಹುದು ಎಂದು ಸರ್ಕಾರ ಉಹಿಸಿಕೊಳ್ಳಬೇಕು.

ಸರ್ವರ್ ಸಮಸ್ಯೆಗೆ ಕಾರಣವೇನು ?

ಹೊಸನಗರ ತಾಲ್ಲೂಕಿನಲ್ಲಿ ಸರ್ವರ್ ಸಮಸ್ಯೆಯಿಂದ ಪಡಿತರದಾರರು ಕ್ಯೂ ನಿಂತಿರುವ ಬಗ್ಗೆ ಹೊಸನಗರ ಆಹಾರ ನಿರಿಕ್ಷಕ ಬಾಲಚಂದ್ರರವರನ್ನು ವಿಚಾರಿಸಿದಾಗ ಈ ಸಮಸ್ಯೆ ಇಡೀ ರಾಜ್ಯದ್ಯಂತ ಸಮಸ್ಯೆಯಿದೆ ಒಂದೆರಡು ದಿನದಲ್ಲಿ ಸರ್ವರ್ ಸಮಸ್ಯೆ ಬಗೆ ಹರಿಯಲಿದೆ. ಈ ಹಿಂದ ಆಹಾರ ಇಲಾಖೆಯ ಸರ್ವರ್‌ಗಳನ್ನು ಕೇಂದ್ರ ಸರ್ಕಾರದ ಆಹಾರ ಇಲಾಖೆ ನೋಡಿಕೊಳ್ಳುತ್ತಿತ್ತು ಸೆಪ್ಟಂಬರ್ ತಿಂಗಳಿಂದ ಸರ್ವರ್ ಸಮಸ್ಯೆಯನ್ನು ರಾಜ್ಯ ಸರ್ಕಾರ ಪಡೆದುಕೊಂಡಿದ್ದು ಒಂದೆರಡು ದಿನದಲ್ಲಿ ಬಗೆ ಹರಿಯಲಿದೆ. ಪಡಿತರದಾರರು ಆತಂಕ ಪಡುವ ಅಗತ್ಯವಿಲ್ಲ ಎಂದು ಉತ್ತರಿಸಿದ್ದಾರೆ.

Leave a Comment