ಶೃಂಗೇರಿಯಲ್ಲಿ ಚಂಡಿಕಾ ಯಾಗದಲ್ಲಿ ಪಾಲ್ಗೊಂಡ ಡಿ.ಕೆ ಶಿವಕುಮಾರ್

0 59

ಶೃಂಗೇರಿ : ವಿಧಾನಸಭೆ ಚುನಾವಣೆ ರಂಗೇರುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.


ಶನಿವಾರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿ ದರ್ಶನ ಪಡೆದುಕೊಂಡ ಅವರು, ಸಂಜೆ ಶೃಂಗೇರಿ ಶಾರದ ದೇವಿ ದೇವಸ್ಥಾನಕ್ಕೆ ಬೇಟಿ ನೀಡಿ ಶಕ್ತಿ ದೇವತೆ ಶಾರದ ದೇವಿಯ ದರ್ಶನ ಪಡೆದು ಚಂಡಿಕಾ ಯಾಗದಲ್ಲಿ ಪಾಲ್ಗೊಂಡು ಅಲ್ಲೇ ವಾಸ್ತವ್ಯ ಹೂಡಿದ್ದಾರೆ.

ಶಾರದ ದೇವಿ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದು, ಇಂದು ಬೆಳಗ್ಗೆ 9 ಗಂಟೆಯಿಂದ 12 ಗಂಟೆವರಗೆ ನಡೆಯಲಿರುವ ಚಂಡಿಕಾ ಯಾಗ ನಡೆಯಲಿದೆ.

ಶನಿವಾರ ಯಾಗದ ಸಂಕಲ್ಪ ಮಾಡಿದ್ದರು. ಭಾನುವಾರ ಯಾಗದ ಪೂರ್ಣಾಹುತಿ ನಡೆಯಲಿದ್ದು ಡಿ.ಕೆ.ಶಿವಕುಮಾರ್ ಕುಟುಂಬ ಸಮೇತರಾಗಿ ಪಾಲ್ಗೊಂಡಿದ್ದಾರೆ. 15 ಜನ ಋತ್ವಿಜರಿಂದ‌ ಯಾಗ ನಡೆಯಲಿದೆ.

ಇಂದು 11 ಗಂಟೆವರೆಗೆ ಯಾಗದಲ್ಲಿ ಪಾಲ್ಗೊಳ್ಳಲಿರುವ ಡಿಕೆಶಿ ದಂಪತಿಗಳು ಪಾಲ್ಗೊಳ್ಳಲಿದ್ದಾರೆ. ಹಿಂದೆ ಅಧಿಕಾರಕ್ಕಾಗಿ ರಾಜ-ಮಹಾರಾಜರು ನಡೆಸುತ್ತಿದ್ದ ಯಾಗ ಇದಾಗಿದೆ.

ಖ್ಯಾತ ಜ್ಯೋತಿಷಿ, ರಾಜಗುರು ಸಿ.ಎಸ್. ದ್ವಾರಕಾನಾಥ್ ಭಾಗಿ ನೆರವೇರಿಸಲಿದ್ದಾರೆ.

Leave A Reply

Your email address will not be published.