HOSANAGARA ; ಕರ್ನಾಟಕ ರಾಜ್ಯ ಸರ್ಕಾರ ನೌಕರರ ಸಂಘದ ಹೊಸನಗರ ಶಾಖೆಯ 28 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ವಿವಿಧ ಇಲಾಖೆಯ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು ಇಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ಮೂರು ಸ್ಥಾನಗಳಿಗೆ ಹಾಗೂ ಬಿಸಿಎಂ ಇಲಾಖೆ ಪದವಿ ಹಾಗೂ ಪದವಿ ಪೂರ್ವ ಕಾಲೇಜು ವಿಭಾಗ ಹಾಗೂ ಆರೋಗ್ಯ ಇಲಾಖೆಯ ತಲಾ ಒಂದು ಸ್ಥಾನಗಳಿಗೆ ಬಿರುಸಿನ ಚುನಾವಣೆ ನಡೆದಿದ್ದು ಪ್ರಾಥಮಿಕ ಶಾಲಾ ಶಿಕ್ಷಕರ ವಿಭಾಗದ ಮೂರು ಸ್ಥಾನಗಳಿಗೆ ಎಂ ಬಸವಣ್ಣಪ್ಪ, ಜಗದೀಶ್ ಕಾಗಿನಲ್ಲಿ ಹಾಗೂ ಹೆಚ್ ಸಿ ಶಿವಪ್ಪ ಅತ್ಯಧಿಕ ಮತ ಗಳಿಸಿ ಆಯ್ಕೆಯಾದರು.
ಆರೋಗ್ಯ ಇಲಾಖೆಯ ಎನ್ ಗಣೇಶ್, ಬಿಸಿಎಂ ಇಲಾಖೆಯ ಮಿಥುನ್, ಪದವಿ ಹಾಗೂ ಪದವಿ ಪೂರ್ವ ಕಾಲೇಜು ವಿಭಾಗದಿಂದ ಕೆ ಎಸ್ ಗಣೇಶ್, ಚುನಾಯಿತರಾದರು.
ಚುನಾವಣಾ ಅಧಿಕಾರಿಗಳಾಗಿ ಮಲ್ಲಿಕಾರ್ಜುನ ಸ್ವಾಮಿ, ಸಂಗಮೇಶ್ವರ, ಶಿವಮೂರ್ತಿ, ರಾಜು, ಧರ್ಮಪ್ಪ, ಷಣ್ಮುಖ, ಮಂಜುನಾಥ, ಮಮತಾ ಮಡಿವಾಳ ಹಾಗೂ ನೀತಾ ಮರ್ಲಿನ್ ಕರ್ತವ್ಯ ನಿರ್ವಹಿಸಿದ್ದರು.
ಯಾರಿಗೆ ಎಷ್ಟು ಮತ ?
- ಜಗದೀಶ್ : 275
- ನಾಗೇಂದ್ರ : 90
- ಬಸವಣ್ಯಪ್ಪ : 281
- ಮಾಲತೇಶ್ : 231
- ರವಿ : 167
- ಶಿವಪ್ಪ : 278
ಅಭಿನಂದನೆ ;
ಹೊಸನಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಜಯಶೀಲರಾದ ಶಿಕ್ಷಕರಿಗೆ ತಾಲ್ಲೂಕು ಜಿಪಿಟಿ ಸಂಘದಿಂದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರ ಸಂಘ ಹೊಸನಗರ ತಾಲ್ಲೂಕಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ವಿಭಾಗದಿಂದ ನಿರ್ದೇಶಕರಾಗಿ ಆಯ್ಕೆಯಾದ ಬಸವಣ್ಯಪ್ಪ ಎಂ, ಶಿವಪ್ಪ ಹೆಚ್ ಸಿ ಮತ್ತು ಜಗದೀಶ್ ಕಾಗಿನಲ್ಲಿ ಅವರಿಗೆ ಹೊಸನಗರ ತಾಲ್ಲೂಕು ಪದವೀಧರ ಶಿಕ್ಷಕರ ಸಂಘ (6-8)ದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಮೇಘರಾಜ್ ಹೆಚ್ ಎಂ, ಕಾರ್ಯದರ್ಶಿ ಕರಿಯಲ್ಲಪ್ಪ ಕೆ ಜಿ, ನಿರ್ದೇಶಕರುಗಳಾದ ನಾಗರಾಜ್ ಕೆ ಬಿ ಮತ್ತು ಸುನೀಲ್ ಕುಮಾರ್ ಹೆಚ್ ಎಸ್ ಉಪಸ್ಥಿತರಿದ್ದರು.