SAGARA | ಜಿಂಕೆ ಬೇಟೆಯಾಡಿ ಮಾಂಸದೂಟ ಮಾಡುತ್ತಿದ್ದ ವೇಳೆ ಕರವೇ ತಾಲೂಕು ಅಧ್ಯಕ್ಷನ ಮನೆ ಮೇಲೆ ಅರಣ್ಯಾಧಿಕಾರಿಗಳ ದಾಳಿ, ಮಾಂಸ ವಶಕ್ಕೆ !

Written by malnadtimes.com

Published on:

SAGARA ; ಸಾಗರ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಜಯರಾಂ ಸೂರನಗದ್ದೆ ನಿವಾಸದಲ್ಲಿ ಜಿಂಕೆ ಮಾಂಸವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಲಾಗಿದೆ.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಜಯರಾಂ ಅವರ ಸೂರನಗದ್ದೆಯ ಬೀರೇಶ್ವರ ದೇವಸ್ಥಾನದ ಬಳಿಯ ನಿವಾಸದಲ್ಲಿ ಜಿಂಕೆಯನ್ನು ಹತ್ಯೆ ಮಾಡಿ, ಮಾಂಸದೂಟ ಮಾಡುತ್ತಿದ್ದ ಖಚಿತ ಮಾಹಿತಿ ವಲಯ ಅರಣ್ಯಾಧಿಕಾರಿ ಅಣ್ಣಪ್ಪ ಅವರಿಗೆ ತಿಳಿದು ಬಂದಿತ್ತು.

ಡಿಎಫ್ಒ ನಿರ್ದೇಶನದ ಮೇರೆಗೆ ಸೂರನಗದ್ದೆಯಲ್ಲಿನ ಜಯರಾಂ ನಿವಾಸದ ಮೇಲೆ ಭಾನುವಾರ ರಾತ್ರಿ 1 ಗಂಟೆಯ ಹಾಗೆ ದಾಳಿ ನಡೆಸಿದ್ದಾರೆ. ಈ ದಾಳಿ ವೇಳೆಯಲ್ಲಿ ಜಯರಾಂ ಸೂರನಗದ್ದೆ ಅವರ ಮನೆಯಲ್ಲಿ ಒಂದರಿಂದ ಎರಡು ಕೆ.ಜಿ.ಯಷ್ಟು ಜಿಂಕೆ ಮಾಂಸ ಪತ್ತೆಯಾಗಿದೆ ಎನ್ನಲಾಗುತ್ತಿದೆ. ಜಿಂಕೆಯನ್ನು ಹತ್ಯೆ ಮಾಡಿ, ಮಾಂಸವನ್ನು ಹಂಚಿಕೊಳ್ಳಲಾಗಿತ್ತು ಎನ್ನಲಾಗಿದೆ.

ಪತ್ತೆಯಾದ ಜಿಂಕೆ ಮಾಂಸ ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ದಾಳಿಯ ಸಂದರ್ಭದಲ್ಲಿ ಜಯರಾಂ ಸೂರನಗದ್ದೆ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ.

ಆರೋಪಿ ಪತ್ತೆಗೆ ಪ್ರಯತ್ನ ನಡೆಸಿದ್ದೇವೆ. ಚರ್ಮಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ವಲಯ ಅರಣ್ಯಾಧಿಕಾರಿ ಅಣ್ಣಪ್ಪ ತಿಳಿಸಿದ್ದಾರೆ. ಜಯರಾಮ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅನ್ವಯ ಪ್ರಕರಣ ದಾಖಲಿಸಲಾಗಿದೆ.

ವಲಯ ಅರಣ್ಯಾಧಿಕಾರಿ ಅಣ್ಣಪ್ಪ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಉಪ ವಲಯ ಅರಣ್ಯಾಧಿಕಾರಿ ವಿಜಯಕುಮಾರ್, ಅರಣ್ಯಪಾಲಕರಾದ ಯಶವಂತ್, ಸುಮಿತಾ, ವೇದನಾಯ್ಕ್, ಉಮೇಶ್, ಶಿವನಗೌಡ ಇನ್ನಿತರರು ಪಾಲ್ಗೊಂಡಿದ್ದರು.

Leave a Comment