ಹೊಸನಗರ

ಮನುಷ್ಯನ ತಲೆಬುರುಡೆ ವಿನ್ಯಾಸದ ಅಪರೂಪದ ಚಿಟ್ಟೆ ಪತ್ತೆ !

HOSANAGAR ; ಮಲೆನಾಡಿನ ಹೊಸನಗರದಲ್ಲಿ ಅಪರೂಪದ ಚಿಟ್ಟೆಯೊಂದು ಕಾಣಿಸಿಕೊಂಡಿದ್ದು ಮನುಷ್ಯನ ತಲೆಬುರುಡೆಯ (DEATHHEAD HAWK MOTH) ವಿನ್ಯಾಸ ಹೊಂದಿರುವ ಚಿಟ್ಟೆ ಇದಾಗಿದೆ.

inshot_20241129_135032169521910525975604515.jpg

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸೊನಲೆ ಗ್ರಾಮದಲ್ಲಿ ವನಿತಾ ಎಂಬುವವರ ಮನೆ ಸಮೀಪ ಈ ಚಿಟ್ಟೆ ಕಾಣಿಸಿಕೊಂಡಿದೆ. ಕಲಾವಿದ ಕಾರಣಗಿರಿ ಗಣೇಶ್ ಕ್ಯಾಮೆರಾದಲ್ಲಿ ಚಿಟ್ಟೆಯ ದೃಶ್ಯ ಸೆರೆ ಹಿಡಿದಿದ್ದಾರೆ.

inshot_20241128_2225133653892179963566606459.jpg

ಅಚೆ ರೋಂಟಿಯಾ ಅಸ್ಟ್ರೋಪಾಸ್ ವರ್ಗಕ್ಕೆ ಸೇರಿದ ಈ ಚಿಟ್ಟೆ ಅಪರೂಪದ ಪ್ರಭೇದವಾಗಿದೆ. ಮಧ್ಯಪ್ರಾಚ್ಯ, ಯುರೋಪ್ ಹಾಗೂ ಆಫ್ರಿಕಾ ಖಂಡದಲ್ಲಿ ಈ ಚಿಟ್ಟೆ ಕಾಣಲುಸಿಗುತ್ತದೆ.

ಚಿಟ್ಟೆ ಕಂದು ಬಣ್ಣದಲ್ಲಿ ಇರಲಿದೆ. ತಲೆಯ ಹಿಂಭಾಗದಲ್ಲಿ ಮನುಷ್ಯನ ತಲೆಬುರುಡೆಯಂತಹ ವಿನ್ಯಾಸವಿರುತ್ತದೆ.

Leave a Comment