HOSANAGARA ; ಪಟ್ಟಣದ ಪ್ರವಾಸಿ ಮಂದಿರದ ಬಳಿ ಇರುವ ಶ್ರೀ ರಾಮಕೃಷ್ಣ ವಸತಿ ವಿದ್ಯಾಲಯದಲ್ಲಿ ಈಚೆಗೆ ಶ್ರೀಮಾತೆ ಶಾರದಾ ದೇವಿ ಜಯಂತೋತ್ಸವ ಹಾಗೂ ಶಾಲಾ ವಾರ್ಷಿಕೋತ್ಸವವನ್ನು ಶ್ರೀ ರಾಮಕೃಷ್ಣ ವಿದ್ಯಾಲಯದ ಸಂಸ್ಥಾಪಕರಾದ ಡಿ.ಎಂ. ದೇವರಾಜ್ ಅಧ್ಯಕ್ಷತೆಯಲ್ಲಿ ಶಿವಮೊಗ್ಗದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀಮದ್ ಸ್ವಾಮಿ ವಿಜಯಾನಂದ ಜಿ ಮಹಾರಾಜ್ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿ, ಶಿಕ್ಷಣದೊಂದಿಗೆ ಸಂಸ್ಕಾರ ಹೊಂದಿದಾಗ ಮಾತ್ರ ಮನುಕುಲದವರಲ್ಲಿ ಅದ್ಭುತ ಶಕ್ತಿ ಹೊಂದುವ ಮೂಲಕ ಪಾವಿತ್ರತೆ ಹೊಂದಲು ಸಾಧ್ಯ ಎಂದು ವಿದ್ಯಾರ್ಥಿ ಸಮೂಹಕ್ಕೆ ಕರೆ ನೀಡಿ ಶಿಸ್ತು ಬದ್ಧ ಶಿಕ್ಷಣದ ಮೂಲಕ ಸುಜ್ಞಾನವಂತರಾಗಿ ಬಾಳುವಂತೆ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ರಾಮಕೃಷ್ಣ ವಿದ್ಯಾಲಯದ ಹಿರಿಯ ವಿದ್ಯಾರ್ಥಿ ಐಐಟಿ ಸಾಧನೆ ಮಾಡಿದ್ದಕ್ಕಾಗಿ ಗೌರವಿಸಿದರು.
ರೈತರ ಉತ್ಪಾದನಾ ಸಂಸ್ಥೆಯ ಅಧ್ಯಕ್ಷ ಎನ್.ಆರ್. ದೇವಾನಂದ, ಪತ್ರಕರ್ತ ನಗರ ರಾಘವೇಂದ್ರ, ಸಮಾರಂಭದಲ್ಲಿ ಮುಖ್ಯ ಅತಿಥಿಗಳಿಗೆ ಪಾಲುಗೊಂಡು ವಿದ್ಯಾರ್ಥಿ ಸಮೂಹಕ್ಕೆ ಹಿತವಚನ ನೀಡಿದರು.
ಸರಿತಾ ದೇವರಾಜ್ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ರಾಜೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾವ್ಯ ಕಾರ್ಯಕ್ರಮ ನಿರೂಪಿಸಿದರು. ರಮೇಶ್ ವಂದಿಸಿದರು. ಶಾಲಾ ಮಕ್ಕಳಿಂದ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.