HOSANAGARA ; ಇದೇ ಡಿಸೆಂಬರ್ 29ರ ಭಾನುವಾರ ಬೆಳಗ್ಗೆ 9ರಿಂದ ಸಂಜೆ 4 ರವರೆಗೆ ಪಟ್ಟಣದ ಮಲೆನಾಡು ಪ್ರೌಢಶಾಲಾ ಆವರಣದಲ್ಲಿ ನಡೆಯುಲಿರುವ ಇಲ್ಲಿನ ಪ್ರತಿಷ್ಠಿತ ಕಳೂರು ಶ್ರೀ ರಾಮೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ಒಟ್ಟು 13 ನಿರ್ದೇಶಕರ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದವರಲ್ಲಿ 8 ಮಂದಿ ಸಂಘದ ಮಾಜಿ ಅಧ್ಯಕ್ಷ ಡಿ.ಆರ್. ವಿನಯ್ ಕುಮಾರ್ ಗೌಡ ನೇತೃತ್ವದಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ.
ಕೆ.ಆರ್. ಮುರಳಿಧರ (ಕ್ಷೇತ್ರ-3- ಸಾಮಾನ್ಯ), ಎಸ್.ಕೆ. ಹೂವಪ್ಪ( ಕ್ಷೇತ್ರ-1- ಹಿಂದುಳಿದ ಪ್ರವರ್ಗ ‘ಎ’), ಚಿನ್ನಪ್ಪ ಜಿ.ಆರ್.(ಕ್ಷೇತ್ರ-2-ಸಾಮಾನ್ಯ), ವಿರೂಪಾಕ್ಷ ಎಸ್.ಜಿ.(ಕ್ಷೇತ್ರ-3-ಹಿಂದುಳಿದ ಪ್ರವರ್ಗ’ಬಿ’), ಶ್ರೀನಿವಾಸ ಕುಲಾಯಿ (ಕ್ಷೇತ್ರ-3-ಪರಿಶಿಷ್ಟ ಜಾತಿ), ವನಮಾಲ (ಕ್ಷೇತ್ರ-3-ಮಹಿಳೆ), ವೇದಾವತಿ (ಕ್ಷೇತ್ರ-1-ಮಹಿಳೆ) (ಈರಮ್ಮ (ಕ್ಷೇತ್ರ-1- ಪರಿಶಿಷ್ಟ ಪಂಗಡ) ಹಾಗು ಮಹೇಶ್ವರಪ್ಪ (ಕ್ಷೇತ್ರ-2-ಸಾಮಾನ್ಯ) ಅವಿರೋಧ ಆಯ್ಕೆಯಾಗಿದ್ದಾರೆ.
ಕ್ಷೇತ್ರ-1ರ( ಸಾಲಗಾರರ ಕ್ಷೇತ್ರ) 2 ಸ್ಥಾನಕ್ಕೆ ಸಂಘ ಮಾಜಿ ಅಧ್ಯಕ್ಷ ಡಿ.ಆರ್. ವಿನಯ್ ಕುಮಾರ್ , ಮಾಜಿ ನಿರ್ದೇಶಕ ಜಿ.ಎಸ್.ರವಿ (ಗುಬ್ಬಿಗ) ಹಾಗು ಕೆ.ಆರ್. ಈಶ್ಚರಪ್ಪ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಅಲ್ಲದೆ, ಸಾಲಗಾರರಲ್ಲದ ಕ್ಷೇತ್ರ-4ರಲ್ಲಿ ಪತ್ರಕರ್ತ ಎಸ್.ಆರ್. ವಿಶ್ವೇಶ್ವರಯ್ಯ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಜಿ. ನಾಗರಾಜ್ ಹಾಗು ಸಂಘದ ನಿವೃತ್ತ ವ್ಯವಸ್ಥಾಪಕ ಹೆಚ್. ಶ್ರೀನಿವಾಸ್ ನಡುವೆ ಭಾರಿ ಪೈಪೋಟಿ ನಡೆದಿದ್ದು ಚುನಾವಣಾ ಕಣದಲ್ಲಿದ್ದಾರೆ.
ಸಂಘದ ಮಾಜಿ ನಿರ್ದೇಶಕ ಕಂಕಳಲೆ ಜಯಕುಮಾರ್, ಪ್ರಮುಖರಾದ ನಾಗಪ್ಪ ವಡಗೇರಿ, ಗಣಪತಿ ಸೇರಿದಂತೆ ಹಲವು ಆಕಾಂಕ್ಷಿಗಳು ತಮ್ಮ ಉಮೇದುವಾರಿಕೆ ವಾಪಸ್ ಪಡೆದಿದ್ದಾರೆ ಎಂದು ಚುನಾವಣಾ ಅಧಿಕಾರಿ ವಿನಾಯಕ ನಾವಡ, ಸಹಾಯಕ ಚುನಾವಣಾ ಅಧಿಕಾರಿ ಹೆಚ್.ಕೆ.ಪ್ರದೀಪ್ ತಿಳಿಸಿದ್ದಾರೆ.