ಶಾಸಕ ಬೇಳೂರು ಗೋಪಾಲಕೃಷ್ಣರ ದಿಟ್ಟ ನಿರ್ಧಾರಕ್ಕೆ ಸಾರ್ವಜನಿಕರ ಪ್ರಶಂಸೆಗಳ ಸುರಿಮಳೆ

Written by malnadtimes.com

Published on:

RIPPONPETE ; ಸಾಗರ-ತೀರ್ಥಹಳ್ಳಿ ರಾಜ್ಯ ಹೆದ್ದಾರಿ ಸಂಪರ್ಕದ ರಿಪ್ಪನ್‌ಪೇಟೆಯ ತಲಾ ಒಂದು ಕಿ.ಮೀ.ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಮಾಡುವ ಮೂಲಕ ರಿಪ್ಪನ್‌ಪೇಟೆಯನ್ನು ಸಿಂಗಾಪುರ ಮಾಡುವ ಕನಸು ಹೊಂದಿದ್ದ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರರ ಮುಂದಾಲೋಚನೆಗೆ ಸಾರ್ವಜನಿಕರಿಂದ ಪ್ರಶಂಸೆಯ ಸುರಿಮಳೆ ವ್ಯಕ್ತವಾಗುತ್ತಿದೆ.

WhatsApp Group Join Now
Telegram Group Join Now
Instagram Group Join Now

ಸಾಗರ-ತೀರ್ಥಹಳ್ಳಿ ಸಂಪರ್ಕದ ರಿಪ್ಪನ್‌ಪೇಟೆಯ ಎಪಿಎಂಸಿ ಯಾರ್ಡ್ಬಳಿಯಿಂದ ತಲಾ ಒಂದೊಂದು ಕಿ.ಮೀ. ದೂರದ ರಸ್ತೆಯು ಭಾರಿ ವಾಹನಗಳ ದಟ್ಟಣೆಯಿಂದಾಗಿ ಸಾರ್ವಜನಿಕರು ಶಾಲಾ ಕಾಲೇಜ್ ವಿದ್ಯಾರ್ಥಿಗಳು ಜೀವಭಯದಲ್ಲಿ ಓಡಾಡಬೇಕಾಗಿದ್ದು ಬಹುದಿನಗಳ ಬೇಡಿಕೆಯಂತೆ ಸರ್ಕಾರದಿಂದ ಸುಮಾರು 5.85 ಕೋಟಿ ರೂ. ಅಂದಾಜು ವೆಚ್ಚದಲ್ಲಿ ರಸ್ತೆ ಅಗಲೀಕರಣ ಮತ್ತು ಡಿವೈಡರ್ ಹಾಗೂ ಒಳಚಂರಡಿ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸುವ ಮೂಲಕ ಕಾಮಗಾರಿ ಪ್ರಗತಿಯಲ್ಲಿದ್ದು ಮಳೆಗಾಲದ ಕಾರಣ ಮತ್ತು ವಿನಾಯಕ ವೃತ್ತದ ಬಳಿಯಲ್ಲಿ ಖಾಸಗಿ ಪ್ರಭಾವಿ ವ್ಯಕ್ತಿಯೊಬ್ಬರು ಅನಧೀಕೃತ ಕಟ್ಟಡವನ್ನು ತೆರವುಗೊಳಿಸದೇ ನ್ಯಾಯಾಲಯದ ತಡೆಯಿಂದೆ ಎಂದು ಅಧಿಕಾರಿಗಳನ್ನು ದಿಕ್ಕು ತಪ್ಪಿಸಿ ಆಭಿವೃದ್ದಿ ಕಾಮಗಾರಿಗೆ ತಡೆ ಮಾಡುತ್ತಿದ್ದು ಈ ಬಗ್ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸಾಕಷ್ಟು ಬಾರಿ ಖಾಸಗಿ ಅನಧೀಕೃತ ಮಾಲೀಕನಿಗೆ ತಿಳುವಳಿಕೆ ನೀಡಿದರೂ ಉಡಾಫೆ ಮಾಡಿದ ಕಾರಣ ಅಭಿವೃದ್ದಿ ಹಿನ್ನಡೆಗೆ ಕಾರಣವಾಗಿತ್ತು.

ಶಾಸಕರ ಅಣತಿಯಂತೆ ಸೋಮವಾರ ಮಧ್ಯಾಹ್ನ 3.00 ಗಂಟೆ ಸಮಯದಲ್ಲಿ ತಹಶೀಲ್ದಾರ್ ರಶ್ಮಿಹಾಲೇಶ್ ಮತ್ತು ಲೋಕೋಪಯೋಗಿ ಇಲಾಖೆ ಪೊಲೀಸ್ ಇಲಾಖೆ ಸ್ಥಳೀಯ ಗ್ರಾಮ ಪಂಚಾಯ್ತಿಯವರು ಏಕಾಏಕಿ ಅನಧಿಕೃತ ಅಂಗಡಿಯನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದು ಇದರಿಂದ ಶಾಸಕ ಗೋಪಾಲಕೃಷ್ಣ ಬೇಳೂರು ಮತ್ತು ತಹಶೀಲ್ದಾರವರ ದಿಟ್ಟ ಕ್ರಮವನ್ನು ಸಾರ್ವಜನಿಕರು ಪ್ರಶಂಸೆಗೆ ಕಾರಣವಾಯಿತು.

ಅನಧೀಕೃತ ಕಟ್ಟಡದ ಮಾಲೀಕನಿಗೆ ಸಾರ್ವಜನಿಕರ ಹಿಡಿಶಾಪ :

ಕಳೆದ ಒಂದು ವರ್ಷದಿಂದ ರಸ್ತೆ ಅಗಲೀಕರಣ ಕಾಮಗಾರಿಗೆ ಅಡ್ಡಿಯಾಗಿದ್ದ ಅನಧೀಕೃತ ಅಂಗಡಿ ಮಾಲೀಕನಿಂದಾಗಿ ಇಡೀ ಊರಿನ ಜನತೆ ಶಾಪ ಹಾಕುವಂತಾಗಿದೆ. 11 ಕೆ.ವಿ.ಹೆವಿ ಲೈನ್ ಹಾದು ಹೋಗಿರುವ ರಸ್ತೆಯಂಚಿನಲ್ಲಿ ಈಗಾಗಲೇ ಲೋಕೋಪಯೋಗಿ ಇಲಾಖೆಯವರು ಸುಮಾರು ರಸ್ತೆಯ ಮಧ್ಯಭಾಗದಿಂದ 35 ಅಡಿ ಅಗಲ ರಸ್ತೆ ಮೂರು ಅಡಿ ಬಾಕ್ಸ್ ಚರಂಡಿ ಫುಟ್‌ಬಾತ್ ಎಂದು ನಿಗದಿ ಮಾಡಿ ಬಾಕ್ಸ್ ಡೈನೇಜ್ ಮಾಡುವ ಮೂಲಕ ರಸ್ತೆ ಅಗಲೀಕರಣ ಕಾಮಗಾರಿ ಮಾಡುತ್ತಿದ್ದು ಮಳೆಗಾಲದ ಕಾರಣ ಕಾಮಗಾರಿ ಕಾರ್ಯ ಇನ್ನೂ ಅಪೂರ್ಣವಾಗಿ ಉಳಿಯಬೇಕಾಗಿದ್ದು ಈಗ ಪ್ರಾರಂಭಿಸುವ ಮುನ್ನವೇ ಅನಧೀಕೃತ ಕಟ್ಟಡ ತೆರವುಗೊಳಿಸಿದರೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗುವುದೆಂಬ ಹಲವು ಜನರ ಅಭಿಪ್ರಾಯಕ್ಕೆ ಮಣಿದು ಶಾಸಕ ಗೋಪಾಲಕೃಷ್ಣ ಬೇಳೂರು ದಿಟ್ಟ ನಿರ್ಧಾರ ಕೈಗೊಳ್ಳುವ ಮೂಲಕ ತೆರವುಗೊಳಿಸಿ ನನಗೆ ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಳಿಸಿ ವರದಿ ನೀಡುವಂತೆ ಖಡಕ್ ವಾರ್ನಿಂಗ್ ನೀಡಿದ ಮೇರೆಗೆ ಅಧಿಕಾರಿಗಳು ತೆರೆಮರೆಯಾಟವನ್ನು ಬಿಟ್ಟು ತೆರವು ಕಾರ್ಯಾಚರಣೆಗೆ ಮುಂದಾಗಬೇಕಾಯಿತು ಎನ್ನಲಾಗಿದೆ.

ಒಟ್ಟಾರೆಯಾಗಿ ಶಾಸಕ ಗೋಪಾಲಕೃಷ್ಣರವರ ಬಹುವರ್ಷದ ಕನಸು ರಿಪ್ಪನ್‌ಪೇಟೆ ನಗರವನ್ನು ಸಿಂಗಾಪುರ ಮಾಡುವ ಭರವಸೆ ಈಡೇರುವಲ್ಲಿ ಯಶಸ್ವಿಯತ್ತ ಸಾಗಿದೆ.

ಅಗಲೀಕರಣಕ್ಕೆ ಗುರುತು:

ಸಾಗರ, ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ರಿಪ್ಪನ್‌ಪೇಟೆ ಎಪಿಎಂಸಿ ಬಳಿಯಿಂದ ವಿನಾಯಕ ವೃತ್ತದ ಮೂಲಕ ತೀರ್ಥಹಳ್ಳಿ ಸಂಪರ್ಕ ಒಂದು ಕಿ.ಮೀ. ದ್ವಿಪಥ ರಸ್ತೆ ಅಗಲೀಕರಣ ಕಾಮಗಾರಿಗೆ ಅಂಗಡಿ ಮುಂಗಟ್ಟುಗಳಲ್ಲಿ ಗುರುತು ಹಾಕಲಾಗಿದ್ದು ಇನ್ನೂ ಒಂದು ವಾರದೊಳಗೆ ಸ್ವಪ್ರೇರಣೆಯಿಂದ ತೆರವುಗೊಳಿಸಿ ಇಲ್ಲವಾದರೆ ಇಲಾಖೆಯವರೇ ತೆರವು ಕಾರ್ಯಕ್ಕೆ ಮುಂದಾಗಬೇಕು ಎಂದು ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಿದ್ದಾರೆ.

Leave a Comment