HOSANAGARA ; ವೈಚಾರಿಕ ಪ್ರಜ್ಞೆಯ ಚಿಂತಕ ಸರ್ವಧರ್ಮ ಸಮಭಾವದ ಪ್ರತಿಪಾದಕ ಕನ್ನಡದ ನಾಡಿ ಎಂದೇ ಖ್ಯಾತರಾಗಿದ್ದ ಡಾ. ನಾರ್ಬರ್ಟ್ ಡಿಸೋಜರವರ ಅಕಾಲಿಕ ನಿಧನಕ್ಕೆ ನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಇಂದು ವಿಶೇಷ ಸಭೆ ನಡೆಸಿ ಅಶ್ರುತರ್ಪಣ ಮಿಡಿಯಿತು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಕೊಡಿಗೆ ಗಣೇಶಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಸೇರಿದ ಸಂತಾಪ ಸೂಚಕ ಸಭೆಯಲ್ಲಿ ಸಾಹಿತಿ ಅಂಬ್ರಯ್ಯಮಠ, ಡಾ ಮಾರ್ಷಲ್ ಶರಾಮ್, ಕೆ ಇಲಿಯಾಸ್, ಕುಬೇಂದ್ರಪ್ಪ, ಕೆ ಎಸ್ ರಾಮಕೃಷ್ಣಮೂರ್ತಿ, ಕೆ ಸುರೇಶ್ ಕುಮಾರ್, ಕೆ ಕೆ ಅಶ್ವಿನಿ ಕುಮಾರ್, ಜಿ ಎನ್ ಬಸಪ್ಪಗೌಡ, ಗುರುದೇವ ಭಂಡಾರ್ಕರ್, ಎಸ್ ಹೆಚ್ ಲಿಂಗಮೂರ್ತಿ, ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು ನಾಡಿನ ಅಪ್ರತಿಮ ಬರಹಗಾರ ನಾಡಿಯವರ ನಿಧನಕ್ಕೆ ಕಂಬನಿ ಮಿಡಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.