HOSANAGARA ; ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ವಿಶ್ವ ವಿದ್ಯಾಲಯ ಇವರು ನಡೆಸಿದ ಕರ್ನಾಟಕ ಶಾಸ್ತ್ರಿಯ ಸಂಗೀತ ಪರೀಕ್ಷೆಯಲ್ಲಿ ಹೊಸನಗರದ ರಾಗ ಲಹರಿ ಸಂಗೀತ ಶಾಲೆಯ ವಿದ್ಯಾರ್ಥಿಗಳಾದ ತೇಜಸ್ವಿ ಮತ್ತು ಪಿ.ಜೆ ವೈಷ್ಣವಿ ರಾವ್‌ರವರು ಡಿಸ್ಟಿಂಕ್ಷನ್ ಪಡೆದು ಉತ್ತೀರ್ಣರಾಗಿದ್ದಾರೆ.
ಇದೇ ಸಂಗೀತ ಶಾಲೆಯ ವಿದ್ಯಾರ್ಥಿಗಳಾದ ದಶಮಿ ಪ್ರಥಮ ಶೇಣಿಯಲ್ಲಿ ಹಾಗೂ ಸೌರವ್ ಉತ್ತಮ ಶೇಣಿಯಲ್ಲಿ ಉತ್ತೀರ್ಣರಾಗಿದ್ದು ಇವರನ್ನು ರಾಗ ಲಹರಿ ಸಂಗೀತ ಗುರುಗಳಾದ ಅನುಪಮ ಸುರೇಶ ಹಾಗು ಹೊಸನಗರದ ಶಾಸ್ತ್ರಿಯ ಸಂಗೀತ ಪ್ರಿಯರು ಇವರನ್ನು ಅಭಿನಂದಿಸಿರುತ್ತಾರೆ.