ರಿಪ್ಪನ್‌ಪೇಟೆ ; ರಸ್ತೆ ಅಗಲೀಕರಣ ನೆಪದಲ್ಲಿ ನೂರಾರು ವರ್ಷದ ರಾಜಕಾಲುವೆ ಮುಚ್ಚುವ ಹುನ್ನಾರ !

Written by malnadtimes.com

Published on:

RIPPONPETE ; ಸಾಗರ-ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ವಿನಾಯಕ ವೃತ್ತದಿಂದ ಎರಡು ಸಂಪರ್ಕ ರಸ್ತೆಯ ತಲಾ ಒಂದೊಂದು ಕಿ.ಮೀ. ದೂರವನ್ನು ಅಗಲೀಕರಣಗೊಳಿಸುವ ಶಾಸಕರ ಬಹುವರ್ಷದ ಬೇಡಿಕೆಯಾಗಿದ್ದು ಈ ರಸ್ತೆ ಅಗಲೀಕರಣ ಕಾಮಗಾರಿ ಭರದಿಂದ ಸಾಗುವ ಮೂಲಕ ರಸ್ತೆ ಅಂಚಿನಲ್ಲಿದ್ದ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲಾಗುತ್ತಿದ್ದರೂ ಕೂಡಾ ವಿನಾಯಕ ವೃತ್ತದಲ್ಲಿರುವ ನೂರಾರು ವರ್ಷದ ಹಳೆಯ ರಾಜಕಾಲುವೆಯನ್ನು ಮುಚ್ಚುವ ಹುನ್ನಾರ ನಡೆಸಲಾಗುತ್ತಿದ್ದು ಮಳೆಗಾಲದ ನೀರು ಎಲ್ಲಿ ಹರಿದು ಹೋಗುವುದು ಎಂಬ ಚಿಂತೆ ಸಾರ್ವಜನಿಕರಲ್ಲಿ ಕಾಡುವಂತಾಗಿ ಕಾಮಗಾರಿ ಹಂತದಲ್ಲಿ ರಾಜಕಾಲುವೆ ಮುಚ್ಚದಂತೆ ಮುಂಜಾಗ್ರತೆ ವಹಿಸುವಂತೆ ಲೋಕೋಪಯೋಗಿ ಇಲಾಖೆಯವರು ಕ್ರಮ ಕೈಗೊಳ್ಳುವಂತೆ ಈಗಾಗಲೇ ಸಾರ್ವಜನಿಕರು ಇಲಾಖೆಯ ಅಧಿಕಾರಿಗಳಿಗೆ ಮನವಿ ಮೂಲಕ ಆಗ್ರಹಿಸಿದ್ದಾರೆನ್ನಾಲಾಗಿದೆ.

WhatsApp Group Join Now
Telegram Group Join Now
Instagram Group Join Now

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲಾ ಕೇಂದ್ರಗಳಲ್ಲಿ ರಾಜಕಾಲುವೆ ಮುಚ್ಚಿ ಕಟ್ಟಡಗಳನ್ನು ಕಟ್ಟಲಾಗಿ ಮಳೆಗಾಲದಲ್ಲಿ ಹರಿದು ಬರುವ ನೀರು ರಾಜಕಾಲುವೆ ಇಲ್ಲದೆ ಮನೆಗಳಿಗೆ ನುಗ್ಗಿ ಅಪಾರ ಹಾನಿಯಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಆದರೆ ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಚುರುಕು ಮುಟ್ಟಿಸಲಾಗಿ ಸರ್ಕಲ್‌ನಲ್ಲಿರುವ ಸತೀಶ್ ಮೆಡಿಕಲ್ ಮತ್ತು ದೇವದಾಸಪ್ರಭು ಮನೆಯ ಮಧ್ಯದಲ್ಲಿ ಹಾದು ಹೋಗಿರುವ ನೂರಾರು ವರ್ಷದ ಹಳೆಯ ರಾಜಕಾಲುವೆಯ ಮೇಲೆ ಅಂಗಡಿ ನಿರ್ಮಿಸುವ ಉದ್ದೇಶದಿಂದ ಕಾಲುವೆ ಮುಚ್ಚಿಹೋಗುವುದೆಂಬ ಭಯ ಸಾರ್ವಜನಿಕರನ್ನು ಕಾಡುವಂತಾಗಿದೆ.

ಇನ್ನಾದರೂ ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಮತ್ತು ಕಂದಾಯ ಇಲಾಖೆ ಸ್ಥಳೀಯ ಗ್ರಾಮ ಪಂಚಾಯಿತ್ ಗಮನಹರಿಸಿ ರಾಜಕಾಲುವೆ ಮುಚ್ಚದಂತೆ ಕ್ರಮವಹಿಸುವುದೇ ಕಾದುನೋಡಬೇಕಾಗಿದೆ.

Leave a Comment