ಹೊಸನಗರ

ಹೊಸನಗರದಲ್ಲಿ ಮಹಿಳಾ ಒಕ್ಕೂಟದಿಂದ ಮಾಸಿಕ ಸಂತೆ ; ಮಹಿಳೆಯರಿಗೆ ಸಂಘಗಳ ಸಾಲ ಸೌಲಭ್ಯ ನೀಡುವುದರಿಂದ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗಿದೆ – ನರೇಂದ್ರಕುಮಾರ್

ಹೊಸನಗರ ; ಮಹಿಳೆಯರಿಗೆ ಸಂಘಗಳ ಮೂಲಕ ಸರ್ಕಾರಗಳು ಸಾಲ-ಸೌಲಭ್ಯಗಳನ್ನು ನೀಡುತ್ತಿರುವುದರಿಂದ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುವುದರ ಜೊತೆಗೆ ಕುಟುಂಬಗಳ ಆರ್ಥಿಕವಾಗಿ ಬಲಾಢ್ಯರಾಗುತ್ತಿದ್ದಾರೆ ಎಂದು ಹೊಸನಗರ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್‌ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ಶಿವಪ್ಪನಾಯಕ ರಸ್ತೆಯಲ್ಲಿರುವ ಶನಿವಾರ ವಾರದ ಸಂತೆಯ ಪ್ರಯುಕ್ತ ಸಂತೆ ಕಟ್ಟಡದ ಮೇಲ್ಭಾಗದಲ್ಲಿ ತಾಲ್ಲೂಕು ಪಂಚಾಯತಿಯ 30 ಗ್ರಾಮ ಪಂಚಾಯಿತಿ ಒಕ್ಕೂಟದ ಮಹಿಳೆಯರ
ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ ಸರ್ಕಾರದ ಆದೇಶದಂತೆ ಮಾಸಿಕ ಸಂತೆಯನ್ನು ಮಹಿಳೆಯರು ಏರ್ಪಡಿಸಿದ್ದು ಸಂತೆ ವ್ಯಾಪಾರ ಮಾಡುತ್ತಿದ್ದು ಈ ಸಂತೆಯನ್ನು ಉದ್ಘಾಟಿಸಿ ಮಾತನಾಡಿದರು.

ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/1CArSrG7wK/

ಮಹಿಳೆಯರು ತಾಲ್ಲೂಕು ಪಂಚಾಯತಿ, 30 ಗ್ರಾಮ ಪಂಚಾಯತಿ ಒಕ್ಕೂಟದಿಂದ ಮಹಿಳೆಯರಿಗೆ ಸ್ವ ಉದ್ಯೋಗ ಮಾಡಲು ಸರ್ಕಾರದಿಂದ ₹ 14.50 ಕೋಟಿಯಷ್ಟು ಹಣ ತಾಲ್ಲೂಕಿಗೆ ಬಿಡುಗಡೆಯಾಗಿದ್ದು ಸ್ವಸಹಾಯ ಗುಂಪಿನ ಮಹಿಳೆಗೆ 50 ಸಾವಿರ ರೂಪಾಯಿ ಸಾಲ-ಸೌಲಭ್ಯ ನೀಡಲಾಗುತ್ತಿದೆ. ಮಹಿಳೆಯರು ತಮ್ಮ ಮನೆಯಲ್ಲಿಯೇ ಸ್ವ ಉದ್ಯೋಗ ಮಾಡಬಹುದಾಗಿದ್ದು ಬೆಳೆದ ಬೆಳೆಯನ್ನು ಸಂತೆ ಮಾರ್ಕೆಟ್‌ಗಳಲ್ಲಿ ಮಾರಬಹುದಾಗಿದೆ. ಅವರು ಬೆಳೆದ ಬೆಳೆಯಲ್ಲಿ ಯಾವುದೇ ರಾಸಾಯನಿಕ ಗೊಬ್ಬರ ಹಾಕದೇ ಬೆಳೆಯುವ ಬೆಳೆಯಾಗಿದೆ. ಇದು ಆರೋಗ್ಯಕ್ಕೂ ಅನುಕೂಲಕರವಾಗಿರುತ್ತದೆ.

ಹೊಸನಗರ ಪಟ್ಟಣದಲ್ಲಿ ತಿಂಗಳಿಗೆ ಒಂದು ಸಂತೆ ಏರ್ಪಡಿಸಲಾಗಿದ್ದು ನಂತರ ನಗರ ಮತ್ತು ರಿಪ್ಪನ್‌ಪೇಟೆಗಳಲ್ಲಿ ಎರಡೆರಡು ಸಂತೆ ಮಾಡಲು ಆಯೋಗಿಸಲಾಗಿದೆ. ತಾಲ್ಲೂಕಿನ ಪ್ರತಿಯೊಬ್ಬರು ಇವರು ಬೆಳೆದ ವಸ್ತುಗಳನ್ನು ವ್ಯಾಪಾರ ಮಾಡುವುದರ ಜೊತೆಗೆ ಅವರು ಸ್ವಾವಲಂಬಿ ಜೀವನ ನಡೆಸುವುದಕ್ಕೆ ಸಹಕರಿಸಿ ಎಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಸಂತೆ ಮಾರ್ಕೆಟ್‌ಗಳಲ್ಲಿ ಸ್ವಸಹಾಯ ಸಂಘದ ಮಹಿಳೆಯರು ಅತೀ ಉತ್ಸವದಿಂದ ಭಾಗವಹಿಸಿ ವ್ಯಾಪಾರ ವಹಿವಾಟು ನಡೆಸುತ್ತಿದ್ದು ಆಯೋಜನೆಯ ಉದ್ದೇಶ ಮಹಿಳೆಯರ ಅರ್ಥಿಕ ಅಭಿವೃದ್ಧಿಯಾಗುವುದಕ್ಕೆ ಮಾಡುದ ಕಾರ್ಯಕ್ರಮ ಇದಾಗಿದ್ದು ಮಹಿಳೆಯರ ಆರ್ಥಿಕ ಬದುಕಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಲಾಗಿದೆ. ಅವರು ಉತ್ಪಾದಿಸುವ ಉತ್ಪನ್ನಗಳಿಗೆ ಮರುಕಟ್ಟೆ ಒದಗಿಸುವುದು ನಮ್ಮ ಮುಖ್ಯ ಉದ್ದೇಶವಾಗಿರುತ್ತದೆ ಎಂದರು.

ಈ ಸಂತೆ ಕಾರ್ಯಕ್ರಮದಲ್ಲಿ ಹೊಸನಗರ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್ ಎನ್‌ಆರ್‌ಎಲ್‌ಎಂ ಯೋಜನೆಯ ತಾಲ್ಲೂಕು ವಿಭಾಗದ ಮೇಲ್ವಿಚಾರಕರಾದ ನಾಗರತ್ನ, ಮನೋಹರ, ಸುಧೀರ್, ಗುರುಪ್ರಸನ್ನ, ಸಹನ, ನಳಿನಿಕುಮಾರಿ ಹಾಗೂ ಬಿ.ಆರ್.ಪಿ.ಇ.ಪಿ ಸುಮಂಗಳ, ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಎನ್‌ಆರ್‌ಎಲ್‌ಎಂ ಯೋಜನೆಯ ಎಲ್ಲ ಎಂ.ಬಿ.ಆರ್, ಎಲ್‌ಸಿಆರ್‌ಪಿಯವರು ಸ್ವಸಹಾಯ ಸಂಘದ ಮಹಿಳೆಯರು ಭಾಗವಹಿಸಿದರು.

ಸಂತೆಯಲ್ಲಿ ಹಾಳೆ ಟೋಪಿ, ತೆಂಗಿನಕಾಯಿ, ಖಾದಿಬಟ್ಟೆ, ಮೊಳಕೆಕಾಳುಗಳು, ಮರದ ವಸ್ತುಗಳು, ತುಪ್ಪ, ಹತ್ತಿ-ಬತ್ತಿಗಳು, ಬಸಲೆಸೊಪ್ಪು, ಹರಿವೆಸೊಪ್ಪು, ರಾಗಿಹಿಟ್ಟು, ಅಕ್ಕಿ ಹಿಟ್ಟು ವಿವಿಧ ಬಗೆಯ ಬೆಳೆದ ಬೆಳೆಗಳು ಉಪ್ಪಿನಕಾಯಿ, ಇತ್ಯಾದಿ ವಸ್ತುಗಳನ್ನು ವ್ಯಾಪಾರದಲ್ಲಿ ತೊಡಗಿಸಿಕೊಳ್ಳಲಾಗಿತ್ತು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!