RIPPONPETE ; ಕೋಡೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಜಯಪ್ರಕಾಶ್ ಅವಿರೋಧ ಆಯ್ಕೆಯಾಗಿದ್ದಾರೆ.
ಉಮೇಶ್ ಕೆ.ಎಸ್. ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ (ಬಿಸಿಎಂ ‘ಎ’) ಶುಕ್ರವಾರ ಚುನಾವಣೆ ನಡೆಯಿತು. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದ ಜಯಪ್ರಕಾಶ್ ಹಾಗೂ ಶೇಖರಪ್ಪ ಎಲ್ ನಾಮಪತ್ರ ಸಲ್ಲಿಸಿದ್ದರು. ಕೊನೆ ಗಳಿಗೆಯಲ್ಲಿ ಶೇಖರಪ್ಪ ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಜಯಪ್ರಕಾಶ್ ಅವಿರೋಧ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಘೋಷಣೆ ಮಾಡಿದರು.
ಕೋಡೂರು ಗ್ರಾಪಂ ಒಟ್ಟು 13 ಸದಸ್ಯ ಬಲ ಹೊಂದಿದ್ದು 09 ಬಿಜೆಪಿ ಬೆಂಬಲಿತ ಹಾಗೂ 04 ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಹೊಂದಿದೆ.
ಚುನಾವಣಾಧಿಕಾರಿಯಾಗಿ ಹೊಸನಗರ ಪಶು ವೈದ್ಯಾಧಿಕಾರಿ ನಟರಾಜ್ ಕಾರ್ಯನಿರ್ವಹಿಸಿದರು. ಪಿಡಿಒ ನಾಗರಾಜ್ ಇವರಿಗೆ ಸಾಥ್ ನೀಡಿದರು.
ಗ್ರಾಪಂ ಉಪಾಧ್ಯಕ್ಷ ಸುಧಾಕರ್, ಸದಸ್ಯರಾದ ಯೋಗೇಂದ್ರಪ್ಪ, ಅನ್ನಪೂರ್ಣ ಮಹೇಶ, ಶೇಖರಪ್ಪ, ಉಮೇಶ್, ಮಂಜಪ್ಪ, ರೇಖಾ, ಪ್ರೀತಿ, ಶ್ಯಾಮಲಾ, ಚಂದ್ರಕಲಾ, ಸವಿತಾ, ಸುನಂದಾ, ಬಿಜೆಪಿ ತಾಲೂಕು ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ, ಹೊಸನಗರ ತಾಪಂ ಮಾಜಿ ಅಧ್ಯಕ್ಷ ಆಲವಳ್ಳಿ ವೀರೇಶ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಗಣಪತಿ ಬೆಳಗೋಡು, ಹಾಲಗದ್ದೆ ಉಮೇಶ್, ಉಮೇಶ್ ಕಂಚುಗಾರ್, ಗ್ರಾಪಂ ಸಿಬ್ಬಂದಿ ವರ್ಗದವರು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.