ಹೊಸನಗರ : ಮಾವಿನಕೊಪ್ಪದಲ್ಲಿ ಸುಮಾರು 25 ವರ್ಷಗಳಿಂದ ನಾಗರಕ್ಷಾ ಕ್ಯಾಂಟಿನ್ ನಡೆಸುತ್ತಿದ್ದ ಮಾವಿನಕೊಪ್ಪ ಗಣೇಶ್ರವರಿಗೆ ಸಾಗರ ಪ್ರಾಂತ್ಯದ ಹೋಟೆಲ್ ಮಾಲೀಕರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಮಾವಿನಕೊಪ್ಪ ಗಣೇಶ್ರವರಿಗೆ ಸಾಗರದಲ್ಲಿ ಅದ್ದೂರಿಯಾಗಿ ಸನ್ಮಾನಿಸಿ ‘ಅತಿಥ್ಯ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇವರು ಪ್ರೇಮಾ ನಾರಾಯಣರವರ ಪುತ್ರರಾಗಿದ್ದು ಪತ್ನಿ ಶಶಿಕಲಾ ಹಾಗೂ ಪುತ್ರಿ ಚೈತ್ರಾ ಮತ್ತು ಚೇತನ್ಕುಮಾರ್ ಎಂಬ ಪುತ್ರರಿದ್ದಾರೆ.
ಅಭಿನಂದನೆ :
ಇವರಿಗೆ ಕೋಟೆಗಾರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶಶಿಧರ್ನಾಯ್ಕ್, ಉಪಾಧ್ಯಕ್ಷ ಪಿ.ಆರ್ ಸಂಜೀವಣ್ಣ, ಕಾರ್ಯದರ್ಶಿ ಹೆಚ್.ಆರ್ ಸುರೇಶ್ ಹಾಗೂ ಹೆಚ್. ಶ್ರೀನಿವಾಸ್ ಸಂಘದ ಎಲ್ಲ ಪದಾಧಿಕಾರಿಗಳು ಗ್ರಾಮ ಪಂಚಾಯತಿ ಸದಸ್ಯೆ ದಿವ್ಯಾ ಬೃಂದಾವನ ಪ್ರವೀಣ್, ಗೌತಮ್ ಕುಮಾರಸ್ವಾಮಿ ಇನ್ನೂ ಮುಂತಾದವರು ಅಭಿನಂದಿಸಿ ಇನ್ನೂ ಹೆಚ್ಚಿನ ಸೇವೆ ಜನರಿಗೆ ನೀಡುವುದರ ಜೊತೆಗೆ ಹೆಚ್ಚು ಪ್ರಶಸ್ತಿಗಳನ್ನು ಗಳಿಸಿ ಹೊಸನಗರ ತಾಲ್ಲೂಕಿಗೆ ಕೀರ್ತಿ ತರಲಿ ಎಂದು ಹಾರೈಸಿದ್ದಾರೆ.