ಪ್ರಾಮಾಣಿಕತೆಯಿಂದ ದುಡಿದ ವರ್ತಕ ಯಶಸ್ವಿಯಾಗಬಲ್ಲ ; ಅಭಿನವ ಚನ್ನಬಸವ ಸ್ವಾಮೀಜಿ

Written by Mahesha Hindlemane

Published on:

ಹೊಸನಗರ ; ಪ್ರಾಮಾಣಿಕತೆ ಹಾಗೂ ಗ್ರಾಹಕ ಸ್ನೇಹಿ ವ್ಯಕ್ತಿತ್ವ ವರ್ತಕರ ಯಶಸ್ಸಿಗೆ ಕಾರಣವಾಗಬಲ್ಲದು ಎಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಪಟ್ಟಣದ ಗಣಪತಿ ದೇವಸ್ಥಾನ ಸಭಾಂಗಣದಲ್ಲಿ ವರ್ತಕರ ಸಂಘ ಆಯೋಜಿಸಿದ್ದ ವಾರ್ಷಿಕ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ವ್ಯವಹಾರಿಕ ಚತುರತೆ ಇದ್ದರಷ್ಟೇ ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಕಾಣಸಲು ಸಾಧ್ಯವಿಲ್ಲ. ತನ್ನಗ್ರಾಹಕರ ಹಿತಕಾಯುವ ಮನೋಭಾವನೆ ಪ್ರತಿ ವ್ಯಾಪಾರಿಯಲ್ಲಿಯೂ ಇರಬೇಕು. ಟೀಕೆ ಟಿಪ್ಪಣಿಗಳು ಎಲ್ಲಾ ರಂಗಗಳಲ್ಲಿಯೂ ಸಹಜ. ಅವುಗಳನ್ನು ಧನಾತ್ಮಕವಾಗಿ ತೆಗೆದುಕೊಂಡು ನಮ್ಮನ್ನು ನಾವು ತಿದ್ದಿಕೊಳ್ಳುವುದು ಬುದ್ದಿವಂತಿಕೆಯ ಲಕ್ಷಣ. ಕಾಯಕ ನಿಷ್ಠೆ ಎನ್ನುವುದು ಸಾಧನೆಯ ಮೊದಲ ಮೆಟ್ಟಿಲು. 12ನೇ ಶತಮಾನದಲ್ಲಿ ಆಯ್ದಕ್ಕಿ ಲಕ್ಕಮ್ಮ, ಮಾರಮ್ಮ ಅವರು ಇದನ್ನೇ ಪ್ರತಿಪಾದಿಸಿದ್ದರು ಎಂದರು.

ನಿಕಟ ಪೂರ್ವ ಅಧ್ಯಕ್ಷ ಎಲ್.ಕೆ.ಮುರಳಿಧರ್ ಪ್ರಾಸ್ತಾವಿಕ ಮಾತನಾಡಿ, ಸಂಘಟನೆಯಲ್ಲಿ ಗಟ್ಟಿತನ ಇದ್ದಲ್ಲಿ, ಸಮಸ್ಯೆಗಳನ್ನು ಯಶಸ್ವಿಯಾಗಿ ಎದುರಿಸಬಹುದು. ಹೊಸನಗರ ಪಟ್ಟಣ ವ್ಯವಹಾರಕ್ಕೆ ಸೂಕ್ತ ಪ್ರದೇಶ ಅಲ್ಲ ಎನ್ನುವ ಮಾತಿದ್ದರೂ, ಹಲವಾರು ವ್ಯಕ್ತಿಗಳು ಇಲ್ಲಿ ನೆಲೆಸಿ ಯಶಸ್ಸನ್ನು ಸಹಾ ಕಂಡಿದ್ದಾರೆ ಎನ್ನುವುದನ್ನು ಮರೆಯಬಾರದು. ನಮ್ಮ ವ್ಯವಹಾರದ ರೂಪುರೇಷೆಗಳನ್ನು ಕಾಲ. ಸಂದರ್ಭ, ಬೇಡಿಕಗೆ ತಕ್ಕಂತೆ ಹೊಂದಿಸಿಕೊಳ್ಳುವ ಅಗತ್ಯವಿದೆ ಎಂದರು.

ಪತ್ರಕರ್ತರಾದ ರಾಮಕೃಷ್ಣಮೂರ್ತಿ, ಎಚ್.ಎಸ್.ನಾಗರಾಜ್ ಹಾಗೂ ರವಿರಾಜ್ ಎಂ.ಜಿ.ಭಟ್ ಹಾಗೂ ಹಿರಿಯ ವರ್ತಕರಾದ ಸಿ.ಎಂ.ರಂಗನಾಥ್, ನಾಗೇಶ್ ಶೇಟ್, ಟಿ.ಎ.ಮುರಳಿ, ಗೋವಿಂದಣ್ಣ ಅವರನ್ನು ಈ ವೇಳೆ ಸನ್ಮಾನಿಸಲಾಯಿತು. ವರ್ತಕರ ಜೊತೆ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಅಭಿನಂದಿಸಲಾಯಿತು.

ಇದಕ್ಕೂ ಮೊದಲು ಗಣಹೋಮ ಸೇರಿದಂತೆಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ವರ್ತಕರ ಸಂಘದ ನಿಕಟಪೂರ್ವ ಅಧ್ಯಕ್ಷ ಮುರುಳಿಧರ, ತಾಲ್ಲೂಕು ಅಧ್ಯಕ್ಷ ವಿಜೇಂದ್ರ ಶೇಟ್, ಪ್ರಮುಖರಾದ ಹರೀಶ್‌ ಕೆಸರೆಮನೆ, ಸುದೇಶ್‌ಕಾಮತ್, ವಿಠ್ಠಲ್, ವಾದಿರಾಜ್, ದೀಪಕ್ ಸ್ವರೂಪ್, ಭೋಜಪ್ಪಗೌಡ ಬಿ.ಎಸ್ ಸುರೇಶ್, ಎಸ್.ಹೆಚ್ ನಿಂಗಮೂರ್ತಿ, ಮತ್ತಿತರರು ಇದ್ದರು. ಅಶ್ವಿನಿ ಸುಧೀಂದ್ರ ಪಂಡಿತ್ ನಿರೂಪಿಸಿದರು.

Leave a Comment