ಹೊಸನಗರ ; ಅಜೇಯ ಸಾಂಸ್ಕೃತಿಕ ಬಳಗ ಶಿವಮೊಗ್ಗ ಇವರಿಂದ ಶಿವಮೊಗ್ಗದ ಕರ್ನಾಟಕ ಸಂಘದ ಆವರಣದಲ್ಲಿ ನಡೆದ ‘ಅಮ್ಮ ಎಂಬ ಅಚ್ಚರಿಗೊಂದು ಅಕ್ಕರೆಯ ನಮನ’ ಕಾರ್ಯಕ್ರಮದಲ್ಲಿ ಹೊಸನಗರ ವಿನಾಯಕಲೋಕ ಖ್ಯಾತಿಯ ಕೆ.ಎಸ್. ವಿನಾಯಕ ಅವರಿಂದ ಅಮ್ಮ ಮಗುವಿನ ವಿಶಿಷ್ಟ ವಿಭಿನ್ನ ಚಿತ್ರಗಳ ‘ಮಮತೆಯ ಮಡಿಲು’ ಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು ಈ ಮಮತೆಯ ಮಡಿಲು ಪ್ರದರ್ಶನಕ್ಕೆ ಸನ್ಮಾನಿಸಿ ಅಭಿನಂದಿಸಲಾಯಿತು.
ಕೆ.ಎಸ್. ವಿನಾಯಕರನ್ನು ಸನ್ಮಾನಿಸುವ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಡಾ|| ವೀಣಾ ಬನ್ನಂಜೆ, ವಿದ್ವಾನ್ ಜಗದೀಶ್ ಶರ್ಮಾ ಹಾಗೂ ಶಿವಮೊಗ್ಗ ಶಾಸಕ ಚನ್ನಬಸಪ್ಪ, ಜೋಗಿ ಹಾಗೂ ಕಾದಂಬರಿ ಅಂಕಣಗಾರ ವಸುದೇಂದ್ರ ಇನ್ನೂ ಮುಂತಾದವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಆಗಮಿಸಿದ ಮಾತೆಯರು ತಾಯಂದಿರು ಮಮತೆ ಮಡಿಲು ಪ್ರದರ್ಶನ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ವಶಕ್ಕೆ
ರಿಪ್ಪನ್‌ಪೇಟೆ ; ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯನ್ನಾದರಿಸಿ ರಿಪ್ಪನ್‌ಪೇಟೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರವೀಣ್‌ಕುಮಾರ್ ನೇತೃತ್ವದಲ್ಲಿ ಸಮೀಪದ ಬಿಲ್ಲೇಶ್ವರ ಬಳಿ ಭಾನುವಾರ ರಾತ್ರಿ ದಾಳಿ ನಡೆಸಿ ಟಿಪ್ಪರ್ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಉಮೇಶ್, ಸಂತೋಷ ಕೊರವರ್ ಹಾಗೂ ಜೀಪ್ ಚಾಲಕ ಮಧುಸೂದನ್ ಇದ್ದರು.